ಬೆಂಗಳೂರು: ಹೇಳಿದ ಮಾತು ಕೇಳುತ್ತಿಲ್ಲ ಅಂತ ಮಕ್ಕಳ ಮೇಲೆಯೇ ತಂದೆಯೊಬ್ಬ ಸೈಕೋ ಥರ ನಡೆದುಕೊಂಡು, ಚಿತ್ರ ಹಿಂಸೆ ನೀಡಿದ್ದಲ್ಲದೇ ಅವರ ಮೇಲೆ ರಾಕ್ಷಸನ ರೀತಿಯಲ್ಲಿ ನಡೆದುಕೊಂಡಿರುವಂತ ಘಟನೆ ದಾಸರಹಳ್ಳಿಯಲ್ಲಿ ನಡೆದಿದೆ.
ಬೆಂಗಳೂರಿನ ದಾಸರಹಳ್ಳಿಯಲ್ಲಿ ಬೆಚ್ಚಿ ಬೀಳಿಸುವಂತ ಸೈಕೋಪಾತ್ ಅಪ್ಪನ ವಿಚಾರ ಬೆಳಕಿಗೆ ಬಂದಿದೆ. ಹೇಳಿದ ಮಾತು ಕೇಳುತ್ತಿಲ್ಲವೆಂದು 9 ವರ್ಷದ ಹೆಣ್ಣುಮಗು ಹಾಗೂ 6 ವರ್ಷದ ಗಂಡು ಮಗುವನ್ನು ಮನೆಯಲ್ಲೇ ಕೂಡಿ ಹಾಕಿದ್ದಾನೆ. ಜೊತೆಗೆ ಶಾಲೆಗೂ ಕಳುಹಿಸದೇ, ಕೈ ಕಾಲುಗಳನ್ನು ವಾಟರ್ ಹೀಟರ್ ಬಳಸಿ ಸುಟ್ಟಿರೋದಾಗಿ ತಿಳಿದು ಬಂದಿದೆ.
ಈ ವಿಷಯ ತಿಳಿದು ಬಾಗಲಗುಂಟೆ ಠಾಣೆಯ ಪೊಲೀಸರು ಮನೆಯ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ಸೈಕೋಪಾತ್ ಅಪ್ಪನ ರಾಕ್ಷಸಿ ಕೃತ್ಯ ಬೆಳಕಿಗೆ ಬಂದಿದೆ. ಈಗ ಮಕ್ಕಳನ್ನು ಮನೆಯಿಂದ ಹೊರ ಕರೆತಂದಿರುವಂತ ಪೊಲೀಸರು, ತಾಯಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಸೈಕೋಪಾತ್ ಅಪ್ಪನ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೈನಾನ್ಸ್ ಸಿಬ್ಬಂದಿ ಕಿರುಕುಳ ಕೊಟ್ರೆ ಕಠಿಣ ಕ್ರಮ: ಸಿಎಂ ಸಿದ್ಧರಾಮಯ್ಯ ಖಡಕ್ ವಾರ್ನಿಂಗ್
ಸುಡಾನ್ ನಲ್ಲಿ ಆಸ್ಪತ್ರೆ ಮೇಲೆ ದಾಳಿ: 70 ಮಂದಿ ಸಾವು | Attack on Hospital