ಬೆಂಗಳೂರು: ನಗರದಲ್ಲಿ ಘೋರ ದುರಂತವೊಂದು ಸಂಭವಿಸಿದೆ. ತಂದೆಯ ಜೊತೆಗೆ ಮೂರು ವರ್ಷದ ಬಾಲಕಿ ಬೈಕ್ ನಲ್ಲಿ ತೆರಳುತ್ತಿದ್ದಾಗಲೇ ಮರವೊಂದು ಮುರಿದು ಬಿದ್ದ ಪರಿಣಾಮ, ಬಾಲಕಿ ಸ್ಥಳದಲ್ಲೇ ದುರ್ಮರಣ ಹೊಂದಿರುವಂತ ಘಟನೆ ನಡೆದಿದೆ.
ಬೆಂಗಳೂರಿನ ದೇವಹನಜೀವನಹಳ್ಳಿಯಲ್ಲಿ ತಂದೆಯ ಜೊತೆಗೆ ಮೂರು ವರ್ಷದ ರಕ್ಷಾ ಎಂಬ ಪುಟಾಣಿ ತೆರಳುತ್ತಿದ್ದಳು. ಈ ಸಂದರ್ಭದಲ್ಲಿ ಮರವೊಂದು ದಿಢೀರ್ ಮುರಿದು ಬಿದ್ದಿದೆ. ಈ ದುರ್ಘಟನೆಯಲ್ಲಿ ಮರದಡಿ ಸಿಲುಕಿ ರಕ್ಷಾ(3) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನೂ ಈ ಘಟನೆಯಲ್ಲಿ ತಂದೆ ಸತ್ಯ ಕೂಡ ಗಾಯಗೊಂಡಿದ್ದೂ, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಪುಲಕೇಶಿ ನಗರ ಠಾಣೆಯ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಥಿಯೇಟರ್‌ನಲ್ಲಿ IPL ಪಂದ್ಯಗಳ ಪ್ರಸಾರಕ್ಕೆ BCCIನೊಂದಿಗೆ ಪಿವಿಆರ್ ಐನಾಕ್ಸ್ ಒಪ್ಪಂದ | PVR-INOX