ಬೆಂಗಳೂರು: ಬಿಬಿಎಂಪಿ ಆಟದ ಮೈದಾನಕ್ಕೆ ಆಟವಾಡಲು ತೆರಳಿದ್ದಂತ 10 ವರ್ಷದ ಬಾಲಕನ ಮೇಲೆ ಗೇಟ್ ಬಿದ್ದು, ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೇ ಬಾಲಕ ಸಾವನ್ನಪ್ಪಿರುವಂತ ಘಟನೆ ಮಲ್ಲೇಶ್ವರಂನಲ್ಲಿ ನಡೆದಿದೆ.
ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವಂತ ಬಿಬಿಎಂಪಿ ಆಟದ ಮೈದಾನಕ್ಕೆ ಭಾನುವಾರವಾದಂತ ಇಂದು ಒಬ್ಬನೇ ಆಟವಾಡುವುದಕ್ಕೆ 10 ವರ್ಷದ ಬಾಲಕ ನಿರಂಜನ್ ತೆರಳಿದ್ದನು. ಬಿಬಿಎಂಪಿ ಮೈದಾನಕ್ಕೆ ಅಳವಡಿಸಿದ್ದಂತ ಗೇಟ್ ತೆಗೆಯುವಾಗ ಮುರಿದು ಬಾಲಕನ ಮೇಲೆಯೇ ಬಿದ್ದಿದೆ.
ಬಿಬಿಎಂಪಿ ಆಟದ ಮೈದಾನದ ಗೇಟ್ ಮುರಿದು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಂತ 10 ವರ್ಷದ ಬಾಲಕ ನಿರಂಜನ್ ಅನ್ನು ಸಮೀಪದ ಕೆಸಿ ಜನರಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಮಲ್ಲೇಶ್ವರಂ ಆಟದ ಮೈದಾನದ ಗೇಟ್ ತುಕ್ಕು ಹಿಡಿದು ಹಾಳಾಗಿದ್ದರೂ ದುರಸ್ಥಿ ಮಾಡದೇ ಹಾಗೇ ಬಿಟ್ಟಿದ್ದಂತ ಬಿಬಿಎಂಪಿ ನಿರ್ಲಕ್ಷ್ಯದಿಂದಲೇ ಬಾಲಕ ನಿರಂಜನ್ ಸಾವನ್ನಪ್ಪಿರುವುದಾಗಿ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಸ್ಥಳಕ್ಕೆ ಮಲ್ಲೇಶ್ವರಂ ಠಾಣೆಯ ಪೊಲೀಸರು ಆಗಮಿಸಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾವೇರಿ ನದಿಗೆ ಕಾವೇರಿ ಆರತಿ ವಿಚಾರ: ಶಾಸಕ ದಿನೇಶ್ ಗೂಳಿಗೌಡ ಸರ್ಕಾರಕ್ಕೆ ಅಭಿನಂದನೆ
BIG NEWS: ವಿಶ್ವವಿಖ್ಯಾತ ‘ಮೈಸೂರು ದಸರಾ’ಗೆ ಪ್ರಾಯೋಗಿಕ ‘ಕಾವೇರಿ ಆರತಿ’ ಆರಂಭ?