ಮಂಡ್ಯ : ಸಾರ್ವಜನಿಕರು ಆಸ್ತಿಗಳ ಪೌತಿ ಖಾತೆಗಾಗಿ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಇ- ಪೌತಿ ಖಾತಾ ಆಂದೋಲನ ಆರಂಭಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರು ಮನವಿ ಮಾಡಿದರು.
ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮ ಪಂಚಾಯಿತಿಗೆ ಸೋಮವಾರ ಭೇಟಿ ನೀಡಿ ಇ- ಪೌತಿ ಖಾತಾ ಆಂದೋಲನದ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಲಾಯಿತು.
ಇದೇ ವೇಳೆ ಮಾತನಾಡಿದ ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಕೃಷಿ ಜಮೀನಿನ ಇಡುವಳಿದಾರರು/ ಖಾತೆದಾರರು ಮೃತಗೊಂಡ ನಂತರ ಹಲವಾರು ವರ್ಷಗಳಿಂದ ವಾರಸುದಾರರು ತಮ್ಮ ಹೆಸರಿಗೆ ಖಾತೆಯನ್ನು ವರ್ಗಾವಣೆ ಮಾಡಿಕೊಂಡಿಲ್ಲ. ಆದ್ದರಿಂದ ಪಹಣಿಗಳಲ್ಲಿ ಮೃತ ಖಾತೆದಾರರ ಹೆಸರು ಮುಂದುವರೆಯುತ್ತಿದೆ. ಇದನ್ನು ಸರಿಪಡಿಸಿಲು ಕಂದಾಯ ಇಲಾಖೆ ಸ್ವಯಂ ಪ್ರೇರಿತವಾಗಿ ಇ-ಪೌತಿ ಖಾತಾ ಆಂದೋಲನವನ್ನು ಪ್ರಾರಂಭಿಸಲಾಗಿದ್ದು, ಸಾರ್ವಜನಿಕರು ಮೃತ ಖಾತೆದಾರರ ಮರಣ ಪ್ರಮಾಣ ಪತ್ರ, ವಂಶವೃಕ್ಷ, ಆಧಾರ್ ವಿವರವನ್ನು ಗ್ರಾಮ ಆಡಳಿತಾಧಿಕಾರಿಗಳಿಗೆ ನೀಡಿ ಸಹಕರಿಸಬೇಕೆಂದರು.
ಈಗಾಗಲೇ ತಾಲೂಕಿನ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಿ ಗ್ರಾಮ ಪಂಚಾಯಿತಿಗಳಲ್ಲೇ ಕಛೇರಿಯನ್ನು ಸಹ ವ್ಯವಸ್ಥೆ ಮಾಡಿಕೊಡಲಾಗಿದ್ದು, ಇ-ಪೌತಿ ಖಾತಾ ಆಂದೋಲನ ಹಾಗೂ ಸಾರ್ವಜನಿಕರನ್ನು ಅಲೆದಾಡಿಸದೆ ನಿಗಧಿತ ಸಮಯದೊಳಗೆ ಕೆಲಸಗಳನ್ನು ಕಾರ್ಯಗಳನ್ನು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಚನ್ನಬಸಪ್ಪ, ಗ್ರಾಮ ಆಡಳಿತಾಧಿಕಾರಿ ಪುಟ್ಟಜುಂಜಯ್ಯ, ಪಿಡಿಒ ಶಂಭುಲಿಂಗಯ್ಯ, ಗ್ರಾ.ಪಂ ಸದಸ್ಯ ಪ್ರೀತಂ, ತಾ.ಪಂ ಮಾಜಿ ಸದಸ್ಯ ಸತೀಶ್, ಗ್ರಾಮಸ್ಥರಾದ ಶಂಕರಮೂರ್ತಿ, ನವೀನ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಪ್ರವೇಶಾತಿಗೆ ಛಾಯ್ಸ್ ಆಯ್ಕೆಗೆ ಸಮಯ ವಿಸ್ತರಿಸಿದ ಕೆಇಎ
ಜೈಲಿನಲ್ಲಿ ನಟ ದರ್ಶನ್ ಭೇಟಿಯಾದ ಪತ್ನಿ ವಿಜಯಲಕ್ಷ್ಮಿ, ಹಣ್ಣು ನೀಡಿ ಕುಶಲೋಪರಿ ವಿಚಾರಣೆ