Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಮ್ಮತಿಯ ಪ್ರೇಮ ಸಂಬಂಧದಲ್ಲೂ ಹುಡುಗರಿಗೆ ಶಿಕ್ಷೆಯ ಬಿಸಿ:’ಪೋಕ್ಸೊ’ ಕಾಯ್ದೆಯ ದುರುಪಯೋಗಕ್ಕೆ ಮದ್ರಾಸ್ ಹೈಕೋರ್ಟ್ ಕಳವಳ

07/03/2026 12:42 PM

BREAKING : ಉತ್ತರ ಪ್ರದೇಶ ಡಿಸಿಎಂ ಕೇಶವಪ್ರಸಾದ್ ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ತುರ್ತು ಭೂಸ್ಪರ್ಶ!

07/03/2026 12:37 PM

‘ಮದುವೆ’ ಆಧಾರದ ಮೇಲೆ ಅತ್ಯಾಚಾರದ ಶಿಕ್ಷೆ ರದ್ದುಪಡಿಸಿದ ಸುಪ್ರೀಂ ಕೋರ್ಟ್: ಆದರೆ ಆರೋಪಿಗೆ ವಿಧಿಸಿದ ‘ಷರತ್ತು’ ಏನು?

07/03/2026 12:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶರಾವತಿ ಮುಳುಗಡೆ ಸಂತ್ರಸ್ತರ ಬೆನ್ನಿಗೆ ನಿಂತ ಶಾಸಕ ಬೇಳೂರು: ಟಿಪ್ಪಣಿ ಹಿಂಪಡೆಯಲು ಸಚಿವ ಈಶ್ವರ್ ಖಂಡ್ರೆಗೆ ಪತ್ರ
KARNATAKA

ಶರಾವತಿ ಮುಳುಗಡೆ ಸಂತ್ರಸ್ತರ ಬೆನ್ನಿಗೆ ನಿಂತ ಶಾಸಕ ಬೇಳೂರು: ಟಿಪ್ಪಣಿ ಹಿಂಪಡೆಯಲು ಸಚಿವ ಈಶ್ವರ್ ಖಂಡ್ರೆಗೆ ಪತ್ರ

By kannadanewsnow0913/02/2026 5:04 PM

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರ ಬೆನ್ನಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ನಿಂತಿದ್ದಾರೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೊರಡಿಸಿರುವಂತ ಟಿಪ್ಪಣಿಯು ಮಲೆನಾಡಿನ ಜನರ ವಿರುದ್ಧವಾಗಿದೆ. ಹೀಗಾಗಿ ಮುಂದಿನ ಶಾಸನೀಯ ಕ್ರಮ ಜರುಗಿಸುವವರೆಗೆ ವಾಪಾಸ್ಸು ಪಡೆಯುವಂತೆ ಪತ್ರದಲ್ಲಿ ಕೋರಿದ್ದಾರೆ.

ಈ ಕುರಿತಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಪತ್ರ ಬರೆದಿರುವಂತ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಶಿವಮೊಗ್ಗ ಜಿಲ್ಲೆಯ ಶರಾವತಿ ವಿದ್ಯುತ್ ಯೋಜನೆಗಾಗಿ ಅರಣ್ಯ ಇಲಾಖೆಯಿಂದ 50 ವರ್ಷಗಳ ಹಿಂದೆ ಕರ್ನಾಟಕ ಪವರ್ ಕಾರ್ಪೊರೇಷನ್ (ಕೆ.ಪಿ.ಸಿ.)ಗೆ ಸುಮಾರು 2 ಲಕ್ಷ ಎಕರೆಗೂ ಹೆಚ್ಚು ಭೂಮಿಯನ್ನು ನೀಡಲಾಗಿದ್ದು, ಈ ಪೈಕಿ ಕೆ.ಪಿ.ಸಿ. 20 ಸಾವಿರ ಎಕರೆ ಭೂಮಿಯನ್ನು ಬಳಕೆ ಮಾಡಿರುವುದಿಲ್ಲ. ಹೀಗಾಗಿ ಅನಾಥವಾಗಿರುವ ಭೂಮಿಯನ್ನು ಪಟ್ಟಭದ್ರ ಹಿತಾಸಕ್ತಿಗಳು ಒತ್ತುವರಿ ಮಾಡುತ್ತಿದ್ದಾರೆ ಎಂದು ದಿನಪತ್ರಿಕೆಯಲ್ಲಿ ವರದಿ ಪಕಟವಾಗಿದೆ ಎಂದಿದ್ದಾರೆ.

ವೃಕ್ಷ ಲಕ್ಷ ಆಂದೋಲನದ ಅನಂತ ಹೆಗಡೆ ಅಶೀಸರ ಅವರು ಕೂಡ ಈ ಸಂಬಂಧ ಸಚಿವಾಲಯಕ್ಕೆ ಪತ್ರ ಬರೆದಿರುತ್ತಾರೆ. ಈ ಬಗ್ಗೆ ತಾವು ನಿಯಮಾನುಸಾರ ಯಾವುದೇ ಯೋಜನೆಗೆ ಮಂಜೂರಾದ ಭೂಮಿಯನ್ನು ಬಳಕೆ ಮಾಡದೇ ಇದ್ದ ಪಕ್ಷದಲ್ಲಿ ಆ ಭೂಮಿಯನ್ನು ಅರಣ್ಯ ಇಲಾಖೆಗೆ ಹಿಂತಿರುಗಿಸಬೇಕಾಗುತ್ತದೆ. 20 ಸಾವಿರ ಎಕರ ಬಳಕೆ ಆಗದೆ ಇದ್ದಲ್ಲಿ ಮತ್ತು ಇದನ್ನು ಯಾರಾದರೂ ಒತ್ತುವರಿ ಮಾಡಿದ್ದಲ್ಲಿ ಪರಿಶೀಲಿಸಿ, ಅರಣ್ಯ ಇಲಾಖೆಗೆ ನಿಯಮಾನುಸಾರ ಹಿಂಪಡೆಯಲು ಟಿಪ್ಪಣಿ ನೀಡಿದ್ದು, ಈ ಬಗ್ಗೆ ಈ ಕೆಳಗಿನಂತೆ ಸೃಷ್ಟಿಕರಣ ನೀಡಲಾಗಿದೆ ಎಂದು ಹೇಳಿದ್ದಾರೆ.

ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 50 ವರ್ಷಗಳ ಹಿಂದೆ ಈ ರಾಜ್ಯದ ಬೆಳಕಿಗಾಗಿ ತ್ಯಾಗ ಮಾಡಿದ ಶರಾವತಿ ಯೋಜನೆಯ ಸಂತ್ರಸ್ತರು ರೈತರಾಗಿರುತ್ತಾರೆ. ಶರಾವತಿ ಯೋಜನೆಯಲ್ಲಿ ಜಮೀನನ್ನು ಕಳೆದುಕೊಂಡ ಅನೇಕರಿಗೆ ಇಂದಿಗೂ ಸಾಗುವಳಿ ಚೀಟಿ ಅಥವಾ ಭೂಮಿ ಹಕ್ಕುಪತ್ರ ಸಿಕ್ಕಿರುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.

ಸದರಿ ಭೂಮಿಯನ್ನು ಯಾವುದೇ ಭೂ ಮಾಫಿಯಾದವರು ಅಥವಾ ಪಟ್ಟಭದ್ರ ಹಿತಾಸಕ್ತಿಗಳು ಒತ್ತುವರಿ ಮಾಡಿರುವುದಿಲ್ಲ. ಸುಮಾರು 15 ಸಾವಿರ ಸಣ್ಣ ಹಿಡುವಳಿದಾರರು ಭೂಮಿಯನ್ನು ಉಳುಮೆ ಮಾಡಿಕೊಂಡು ತಮ್ಮ ಬದುಕನ್ನು ಕಟ್ಟಿಕೊಂಡಿರುತ್ತಾರೆ. ಹಾಗಾಗಿ ತಮ್ಮ ಪತ್ರದ ನಿಲುವು ಮಲೆನಾಡಿನ ಜನರ ವಿರುದ್ಧವಾಗಿದ್ದು, ಮುಂದಿನ ಶಾಸನೀಯ ಕ್ರಮ ಜರುಗಿಸುವರೆಗೆ ತಮ್ಮ ಟಿಪ್ಪಣಿಯನ್ನು ವಾಪಾಸ್ಸು ಪಡೆಯುವಂತೆ ಕೋರಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

ಸಾಗರ, ಹೊಸನಗರಕ್ಕೆ ಸರ್ಕಾರ ಬಂಫರ್ ಗಿಫ್ಟ್: ವಿವಿಧ ಕಾಮಗಾರಿಗೆ ‘20.17 ಕೋಟಿ ಅನುದಾನ’ ಮಂಜೂರು

BREAKING : ಅಬಕಾರಿ ಬಳಿಕ ‘RTO’ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ : ತಪಾಸಣೆ ಮಾಡದೇ ವಾಹನಗಳಿಗೆ ‘FC’ ವಿತರಣೆ!

BIG NEWS : ಇಷ್ಟು ಮೊತ್ತದ ಬ್ಯಾಂಕ್ ವಹಿವಾಟುಗಳಿಗೆ ಇನ್ಮುಂದೆ `ಪ್ಯಾನ್ ಕಾರ್ಡ್’ ಅಗತ್ಯವಿಲ್ಲ : ಹೊಸ ರೂಲ್ಸ್ ಜಾರಿ !

Share. Facebook Twitter LinkedIn WhatsApp Email

Related Posts

ALERT : ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಕುವ ಮುನ್ನ ಇರಲಿ ಎಚ್ಚರ: ನಿಮ್ಮ ಒಂದು ಸಣ್ಣ ತಪ್ಪು ತಂದೊಡ್ಡಬಹುದು ದೊಡ್ಡ ಗಂಡಾಂತರ!

07/03/2026 12:28 PM2 Mins Read

BREAKING : ರೊಟ್ಟಿ ಅಂಗಡಿಗೆ ಲೈಸೆನ್ಸ್ ನೀಡಲು ಲಂಚಕ್ಕೆ ಬೇಡಿಕೆ : ಹುಬ್ಬಳ್ಳಿ ಪಾಲಿಕೆ ಮಹಿಳಾ ಅಧಿಕಾರಿ ಲೋಕಾಯುಕ್ತ ಬಲೆಗೆ

07/03/2026 12:23 PM1 Min Read

SHOCKING : ಬೆಂಗಳೂರಲ್ಲಿ ಮೊಬೈಲ್ ಕೊಡದಿದ್ದಕ್ಕೆ ವಿದ್ಯಾರ್ಥಿ ವಿಚಿತ್ರ ವರ್ತನೆ : ಬೆಚ್ಚಿ ಬಿದ್ದ ಪೋಷಕರು!

07/03/2026 12:21 PM1 Min Read
Recent News

ಸಮ್ಮತಿಯ ಪ್ರೇಮ ಸಂಬಂಧದಲ್ಲೂ ಹುಡುಗರಿಗೆ ಶಿಕ್ಷೆಯ ಬಿಸಿ:’ಪೋಕ್ಸೊ’ ಕಾಯ್ದೆಯ ದುರುಪಯೋಗಕ್ಕೆ ಮದ್ರಾಸ್ ಹೈಕೋರ್ಟ್ ಕಳವಳ

07/03/2026 12:42 PM

BREAKING : ಉತ್ತರ ಪ್ರದೇಶ ಡಿಸಿಎಂ ಕೇಶವಪ್ರಸಾದ್ ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ತುರ್ತು ಭೂಸ್ಪರ್ಶ!

07/03/2026 12:37 PM

‘ಮದುವೆ’ ಆಧಾರದ ಮೇಲೆ ಅತ್ಯಾಚಾರದ ಶಿಕ್ಷೆ ರದ್ದುಪಡಿಸಿದ ಸುಪ್ರೀಂ ಕೋರ್ಟ್: ಆದರೆ ಆರೋಪಿಗೆ ವಿಧಿಸಿದ ‘ಷರತ್ತು’ ಏನು?

07/03/2026 12:32 PM

ALERT : ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಕುವ ಮುನ್ನ ಇರಲಿ ಎಚ್ಚರ: ನಿಮ್ಮ ಒಂದು ಸಣ್ಣ ತಪ್ಪು ತಂದೊಡ್ಡಬಹುದು ದೊಡ್ಡ ಗಂಡಾಂತರ!

07/03/2026 12:28 PM
State News
KARNATAKA

ALERT : ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಕುವ ಮುನ್ನ ಇರಲಿ ಎಚ್ಚರ: ನಿಮ್ಮ ಒಂದು ಸಣ್ಣ ತಪ್ಪು ತಂದೊಡ್ಡಬಹುದು ದೊಡ್ಡ ಗಂಡಾಂತರ!

By kannadanewsnow5707/03/2026 12:28 PM KARNATAKA 2 Mins Read

ಇಂದಿನ ಡಿಜಿಟಲ್ ಯುಗದಲ್ಲಿ ಸೋಷಿಯಲ್ ಮೀಡಿಯಾ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಪ್ರವಾಸ, ಹಬ್ಬ ಹರಿದಿನಗಳು ಅಥವಾ ಸ್ನೇಹಿತರೊಂದಿಗೆ ಕಳೆದ…

BREAKING : ರೊಟ್ಟಿ ಅಂಗಡಿಗೆ ಲೈಸೆನ್ಸ್ ನೀಡಲು ಲಂಚಕ್ಕೆ ಬೇಡಿಕೆ : ಹುಬ್ಬಳ್ಳಿ ಪಾಲಿಕೆ ಮಹಿಳಾ ಅಧಿಕಾರಿ ಲೋಕಾಯುಕ್ತ ಬಲೆಗೆ

07/03/2026 12:23 PM

SHOCKING : ಬೆಂಗಳೂರಲ್ಲಿ ಮೊಬೈಲ್ ಕೊಡದಿದ್ದಕ್ಕೆ ವಿದ್ಯಾರ್ಥಿ ವಿಚಿತ್ರ ವರ್ತನೆ : ಬೆಚ್ಚಿ ಬಿದ್ದ ಪೋಷಕರು!

07/03/2026 12:21 PM

ನಿಮ್ಮ ಮನೆಯ `ಕರೆಂಟ್ ಬಿಲ್’ ಡಬಲ್ ಆಗುತ್ತಿದೆಯೇ? ಈ 4 ತಪ್ಪುಗಳೇ ಅದಕ್ಕೆ ಕಾರಣ !

07/03/2026 12:19 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.