ಬೆಂಗಳೂರು: ದಕ್ಷಿಣ ಭಾರತ ಕುಸ್ತಿ ಸಂಘ [ಸೌತ್ ಇಂಡಿಯಾ ರ್ವೆಸಲ್ಲಿಂಗ್ ಅಸೋಸಿಯೇಷನ್]ಗೆ ಚುನಾವಣೆ ನಡೆದಿದ್ದು, 2025 – 29 ರ ಸಾಲಿಗೆ ಉಪಾಧ್ಯಕ್ಷರಾಗಿ ಕರ್ನಾಟಕ ರಾಜ್ಯದ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕುಸ್ತಿ ಸಂಘಕ್ಕೆ ದಕ್ಷಿಣ ಭಾರತಕ್ಕೆ ಮೊದಲ ಬಾರಿಗೆ ಪ್ರಮುಖ ಪ್ರಾತಿನಿಧ್ಯೆ ದೊರೆತಿದೆ.
ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಅವರು ಭಾರತ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿ ಹಾಗೂ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಂಘದ ಪೋಷಕರಾಗಿ ಆರ್.ಕೆ. ಪುರುಷೋತ್ತಮ್, ಅಧ್ಯಕ್ಷರಾಗಿ ಕೇರಳದ ವಿ.ಎನ್ ಪ್ರಸೂದ್ ,ತಮಿಳುನಾಡಿನ ಎಂ. ಲೋಗನಾಥನ್ ಪ್ರಧಾನ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿಗಳಾಗಿ ಕರ್ನಾಟಕ ರಾಜ್ಯದ ಜೆ. ಶ್ರೀನಿವಾಸ, ತೆಲಂಗಾಣದ ಅಹಮ್ಮದ್, ಖಜಾಂಚಿಯಾಗಿ ಪುದುಚೇರಿಯ ವಿನೋಥ್.ಕೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ತಮಿಳುನಾಡಿನ ಐ.ಸಿ. ಕೊಂಡೇಶ್ವರನ್, ಕೇರಳದ ಬಿ. ರಾಜಶೇಖರನ್ ನಾಯರ್ ಮತ್ತು ಆಂಧ್ರಪ್ರದೇಶದ ಭೂಷಣ್ ಆಯ್ಕೆಯಾಗಿದ್ದಾರೆ.
ನೂತನ ಉಪಾಧ್ಯಕ್ಷ ಗುಣರಂಜನ್ ಶೆಟ್ಟಿ ಪ್ರತಿಕ್ರಿಯೆ ನೀಡಿ, ನಾಲ್ಕು ವರ್ಷದ ನಂತರ ಚುನಾವಣೆ ನಡೆಸಿದ್ದು, ಕರ್ನಾಟಕ ಎಲ್ಲಾ ವಿಭಾಗಗಳಲ್ಲೂ ತನ್ನ ಛಾಪು ಮೂಡಿಸುತ್ತಿದೆ. ಕುಸ್ತಿಯಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ದಕ್ಷಿಣ ಭಾರತಕ್ಕೆ ಉತ್ತಮ ಪ್ರಾತಿನಿಧ್ಯೆ ದೊರಕಿಸಿಕೊಡುವುದು ನಮ್ಮ ಗುರಿಯಾಗಿದೆ ಎಂದರು.
CRIME NEWS: ಬೆಂಗಳೂರಲ್ಲಿ IPL ಟಿಕೆಟ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ನಾಲ್ವರು ಅರೆಸ್ಟ್
ಭೂಕಬಳಿಕೆದಾರರಿಂದ ಶೀಬಿ ಅರಣ್ಯಭೂಮಿ ರಕ್ಷಣೆಗೆ ಸಚಿವ ಈಶ್ವರ ಖಂಡ್ರೆ ಸೂಚನೆ