ಬೆಂಗಳೂರು: ಕಾರವಾರದ ಬೇಲೆಕೇರಿ ಬಂದರಿನಲ್ಲಿದ್ದಂ 11,312 ಮೆಟ್ರಿಕ್ ಟನ್ ಅದಿರನ್ನು ಶಾಸಕ ಸತೀಶ್ ಸೈಲ್ ಅವರು ಅಕ್ರಮವಾಗಿ ನಾಪತ್ತೆ ಮಾಡಿದ್ದರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಲ್ಲದೇ ಇತ್ತೀಚಿಗಷ್ಟೇ ಕೋರ್ಟ್ ದೋಷಿ ಎಂಬುದಾಗಿ ತೀರ್ಪು ನೀಡಿತ್ತು. ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದು, ಯಾವ ಯಾವ ಕೇಸಲ್ಲಿ ಎಷ್ಟು ಶಿಕ್ಷೆ, ದಂಡ ವಿಧಿಸಲಾಗಿದೆ ಅಂತ ಮುಂದೆ ಓದಿ.
ಈ ಸಂಬಂಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ವಾದ ಪ್ರತಿವಾದವನ್ನು ಆಲಿಸಿ, 2010ರಲ್ಲಿ ಕಾರವಾರದ ಬೇಲೆಕೇರಿ ಬಂಧರಿನಲ್ಲಿ ಇದ್ದಂತ 11,312 ಮೆಟ್ರಿಕ್ ಟನ್ ಅದಿರು ನಾಪತ್ತೆ ಪ್ರಕರಣ ಸಂಬಂಧದ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರು ದೋಷಿ ಎಂಬುದಾಗಿ ತೀರ್ಪು ನೀಡಿದ್ದರು.
ಬೆಲೆಕೇರಿ ಅದಿರು ಅಕ್ರಮ ನಾಪತ್ತೆ ಪ್ರಕರಣ ಸಂಬಂಧ ಒಟ್ಟು 6 ಕೇಸ್ ದಾಖಲಾಗಿದ್ದವು. ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ವಾದ ಪ್ರತಿವಾದವನ್ನು ಆಲಿಸಿ, ಕಾಂಗ್ರೆಸ್ ಶಾಸಕ ಸತೀಶ್ ಸೈಲ್, ಮಹೇಶ್ ಬಿಳಿಯೆ, ಮಲ್ಲಿಕಾರ್ಜುನ ಶಿಪ್ಪಿಂಗ್ ಅವರನ್ನು ದೋಷಿ ಎಂಬುದಾಗಿ ತೀರ್ಪು ನೀಡಿದ್ದರು. ಇಂದು ತನ್ನ ಶಿಕ್ಷೆಯ ಪ್ರಮಾಣವನ್ನು ಈ ಕೆಳಗಿನಂತೆ ಪ್ರಕಟಿಸಿದೆ.
ಶಾಸಕ ಸತೀಶ್ ಸೈಲ್ ಗೆ ಯಾವ ಪ್ರಕರಣದಲ್ಲಿ ಏನು ಶಿಕ್ಷೆ.?
- ವಂಚನೆ ಆರೋಪದಡಿ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ
- ಕಳ್ಳತನ ಆರೋಪದಡಿ ಪ್ರಕರಣದಲ್ಲಿ 3 ವರ್ಷ ಶಿಕ್ಷೆ
- ಒಳಸಂಚು ಆರೋಪದಡಿ ಶಾಸಕ ಸತೀಶ್ ಸೈಲ್ ಗೆ 5 ವರ್ಷ ಶಿಕ್ಷೆ
ಯಾವ ಕೇಸಲ್ಲಿ ಎಷ್ಟು ದಂಡ.?
ಬೇಲೆಕೇರಿ ಅದಿರು ಅಕ್ರಮ ನಾಪತ್ತೆ ಪ್ರಕರಣ ಸಂಬಂಧ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಬರೋಬ್ಬರಿ 44 ಕೋಟಿಗೂ ಹೆಚ್ಚು ದಂಡವನ್ನು ಬಂಧಿತ ಆರೋಪಿಗಳಿಗೆ ವಿಧಿಸಿದೆ
- ಮೊದಲ ಕೇಸಲ್ಲಿ 6 ಕೋಟಿ ದಂಡ
- ಎರಡನೇ ಕೇಸಲ್ಲಿ 9.60 ಕೋಟಿ ದಂಡ
- ಮೂರನೇ ಕೇಸಲ್ಲಿ 9.36 ಕೋಟಿ ದಂಡ
- ನಾಲ್ಕನೇ ಕೇಸಲ್ಲಿ 9.54 ಕೋಟಿ ದಂಡ
- ಐದನನೇ ಕೇಸಲ್ಲಿ 9.25 ಕೋಟಿ ದಂಡ
- ಆರೇನೇ ಕೇಸಲ್ಲಿ 90 ಲಕ್ಷ ದಂಡ
ಇನ್ನೂ ಮಹೇಶ್ ಬಿಳಿಯೆ, ಆಶಾಪುರ ಮೈನಿಂಗ್ ಸೇರಿದಂತೆ ಇತರೆ ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ವಿಧಿಸಿ ಆದೇಶಿಸಿದ್ದಾರೆ. ದಂಡದ ಹಣವನ್ನು ಸರ್ಕಾರಕ್ಕೆ ಜಪ್ತಿ ಮಾಡಿಕೊಳ್ಳಲು ಆದೇಶದಲ್ಲಿ ತಿಳಿಸಲಾಗಿದೆ.
ಒಟ್ಟಾರೆಯಾಗಿ ಶಾಸಕ ಸತೀಶ್ ಸೈಲ್ ಅವರಿಗೆ ಬೇಲೆಕೇರಿ ಬಂದರಿನಲ್ಲಿದ್ದಂತ 11,313 ಮೆಟ್ರಿಕ್ ಟನ್ ಅದಿರು ನಾಪತ್ತೆ ಪ್ರಕರಣದಲ್ಲಿ ಬರೋಬ್ಬರಿ 15 ವರ್ಷ ಜೈಲು ಶಿಕ್ಷೆ ವಿಧಿಸಿದಂತೆ ಆಗಿದೆ.
BREAKING: ಬೇಲೆಕೇರಿ ಅದಿರು ಅಕ್ರಮ ನಾಪತ್ತೆ ಕೇಸ್: ‘ಸತೀಶ್ ಸೈಲ್ ಶಾಸಕ ಸ್ಥಾನ’ ರದ್ದುಗೊಳಿಸಿ ಕೋರ್ಟ್ ಆದೇಶ