ಕೊಲ್ಲಾಪುರ: ಶಿವಸೇನೆ ಪುಂಡರ ಪುಂಡಾಟ ಮತ್ತೆ ಕರ್ನಾಟಕದ ಗಡಿ ಭಾಗವಾದಂತ ಬೆಳಗಾವಿಯಲ್ಲಿ ಮುಂದುವರೆದಿದೆ. ಕನ್ನಡ ಬೋರ್ಡ್ ಗಳನ್ನು ಕಿತ್ತು ಹಾಕಿ, ಬೆಂಕಿ ಹಚ್ಚಿ ಶಿವಸೇನೆ ಪುಂಡರು ಪುಂಡಾಟ ಮೆರೆದಿದ್ದಾರೆ. ಇದೇ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಬೆಳಗಾವಿ ಮಹಾರಾಷ್ಟ್ರ ಸೇರಲಿದೆ. ಆಗ ಕನ್ನಡ ಬೋರ್ಡ್ ತೆಗೆದು ಹಾಕಿ ಮರಾಠಿ ಬೋರ್ಡ್ ಹಾಕೋದಾಗಿ ಶಿವಸೇನೆ ಮುಖಂಡ ಸಂಜಯ್ ಪರಾವ್ ಉದ್ಧಟತನದ ಹೇಳಿಕೆ ನೀಡಿದ್ದಾರೆ.
ರಾಜ್ಯಾಧ್ಯಂತ ಕನ್ನಡ ನಾಮಫಲಕ ಕಡ್ಡಾಯಗೊಳಿಸಿದ ಕಾರಣ, ಬೆಳಗಾವಿಯಲ್ಲಿ ಮರಾಠಿ ಬೋರ್ಡ್ ತೆಗೆದು ಕನ್ನಡ ಬೋರ್ಡ್ ಗಳನ್ನು ಹಾಕುವಂತೆ ರಾಜ್ಯ ಸರ್ಕಾರ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಶೇ.60ರಷ್ಟು ಕನ್ನಡವಿರುವಂತ ಬೋರ್ಡ್ ಗಳನ್ನು ಬೆಳಗಾವಿಯಲ್ಲಿ ವಾಣಿಜ್ಯ ಮಳಿಗೆಗಳ ಮಾಲೀಕರು ಅಳವಡಿಸಿಕೊಂಡಿದ್ದಾರೆ.
ರಾಜ್ಯ ಸರ್ಕಾರ ಇಂತಹ ಕ್ರಮದ ವಿರುದ್ಧ ಸಿಡಿದೆದ್ದಿರುವಂತ ಶಿವಸೇನೆಯ ಉದ್ಧವ್ ಠಾಕ್ರೆ ಬಣವು, ಬೆಳಗಾವಿ ಗಡಿಯಾದಂತ ಕೊಲ್ಲಾಪುರದಲ್ಲಿ ಕನ್ನಡ ಬೋರ್ಡ್, ನಾಮಫಲಕವನ್ನು ಕಿತ್ತು ಹಾಕಿ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರ ಹಾಕಿರೋದಾಗಿ ತಿಳಿದು ಬಂದಿದೆ.
ಕನ್ನಡ ಬೋರ್ಡ್, ಫಲಕಗಳನ್ನು ಧ್ವಂಸಗೊಳಿಸಿರುವಂತ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಕಾರ್ಯಕರ್ತರು, ಅವುಗಳಿಗೆ ಬೆಂಕಿ ಹಚ್ಚಿರೋದಾಗಿ ತಿಳಿದು ಬಂದಿದೆ.
ಇದೇ ಸಂದರ್ಭದಲ್ಲಿ ಶಿವಸೇನೆ ಮುಂಖಡ ಸಂಜಯ್ ಪವಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಬೆಳಗಾವಿ ಮಹಾರಾಷ್ಟ್ರ ಸೇರಲಿದೆ. ಮರಾಠಿ ಬೋರ್ಡ್ ಗಳನ್ನು ಆಗ ಬೆಳಗಾವಿಯಲ್ಲಿ ಹಾಕಲಾಗುತ್ತದೆ. ಮರಾಠಿ ಜೊತೆಗೆ ಇಂಗ್ಲೀಷ್ ಬೋರ್ಡ್ ಕೂಡ ಹಾಕಲಾಗುತ್ತದೆ ಎಂಬುದಾಗಿ ಉದ್ಧಟತನದ ಹೇಳಿಕೆಯನ್ನು ನೀಡಿದ್ದಾರೆ.
ರಾಮ ಮಂದಿರ ‘ಪ್ರಾಣ’ ಪ್ರತಿಷ್ಠಾಪನೆ: 11 ದಿನಗಳ ವಿಶೇಷ ಸಂದೇಶ ಬಿಡುಗಡೆ ಮಾಡಿದ ‘ಪ್ರಧಾನಿ ಮೋದಿ’
‘ಉದ್ಯೋಗಾಕಾಂಕ್ಷಿ’ಗಳಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದಲೇ ಫೆಬ್ರವರಿಯಲ್ಲಿ ‘ಬೃಹತ್ ಉದ್ಯೋಗ ಮೇಳ’