ಬೆಂಗಳೂರು: ಬೆಳಗಾವಿಯ ಸುವರ್ಣ ಸೌಧದಲ್ಲಿ ಹಲ್ಲೆ ಯತ್ನ ಆರೋಪ ಕುರಿತಂತೆ ರಾಜ್ಯ ಸರ್ಕಾರವು ಸಿಐಡಿ ತನಿಖೆಗೆ ನೀಡಿ ಆದೇಶಿಸಿತ್ತು. ಇಂದು ಹಲ್ಲೆ ಯತ್ನ ಆರೋಪ ಮಾಡಿದ್ದಂತ ಸಿ.ಟಿ ರವಿ ಅವರು ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.
ಡಿಸೆಂಬರ್.19, 2024ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ಪರಿಷತ್ ಸದಸ್ಯ ಸಿ.ಟಿ ರವಿ ಮೇಲೆ ಹಲ್ಲೆ ಮಾಡಿದ್ದರ ಸಂಬಂಧ ಸಭಾಪತಿ ಹೊರಟ್ಟಿ ಅವರನ್ನು ಭೇಟಿಯಾಗಿ ಮೂವರು ಪರಿಷತ್ ಸದಸ್ಯರು ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಕೇಸ್ ಕೂಡ ದಾಖಲಾಗಿತ್ತು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು.
ಇಂದು ಸಿಐಡಿಯಿಂದ ವಿಚಾರಣೆಗೆ ಹಾಜರಾಗುವಂತೆ ಸಿ.ಟಿ ರವಿ ಅವರಿಗೆ ನೋಟಿಸ್ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಸಿಐಡಿ ಕಚೇರಿಗೆ ಖುದ್ದು ವಿಚಾರಣೆಗೆ ಪರಿಷತ್ ಸದಸ್ಯ ಸಿ.ಟಿ ರವಿ ಹಾಜರಾದರು.
ಸಿಐಡಿಯ ತನಿಖಾಧಿಕಾರಿ ಕೇಶವಮೂರ್ತಿ ಮುಂದೆ ವಿಚಾರಣೆಗೆ ಹಾಜರಾದಂತ ಸಿ.ಟಿ ರವಿ ಅವರನ್ನು ಘಟನೆಯ ಸಂಬಂಧ ಪ್ರಶ್ನಿಸಿರುವುದಾಗಿ ತಿಳಿದು ಬಂದಿದೆ.
BIG NEWS : ಕಾಂಗ್ರೆಸ್ ಪಕ್ಷದಲ್ಲಿ ಯಾವ ಗೊಂದಲವೂ ಇಲ್ಲ : ಗೃಹ ಸಚಿವ ಡಾ. ಜಿ. ಪರಮೇಶ್ವರ ಸ್ಪಷ್ಟನೆ
BREAKING: ರಾಜ್ಯದಲ್ಲಿ ಘೋರ ದುರಂತ: ಕೆಮಿಕಲ್ ಡಂಪ್ ಮಾಡುವಾಗ ಉಸಿರುಗಟ್ಟಿ ಓರ್ವ ಕಾರ್ಮಿಕ ಸಾವು, ಮೂವರ ಸ್ಥಿತಿ ಗಂಭೀರ