ಬೆಳಗಾವಿ:ವರದಕ್ಷಿಣೆ ಬೇಡಿಕೆ ಇಟ್ಟಿದ್ದಕ್ಕೆ ಕೊನೇ ಕ್ಷಣದಲ್ಲಿ ಮದುವೆಯೊಂದು ಮುರಿದುಬಿದ್ದು ವರ ಜೈಲುಪಾಲಾದ ವಿಚಿತ್ರ ಘಟನೆ ಬೆಳಗಾವಿಯ ಖಾನಾಪುರ ಪಟ್ಟಣದಲ್ಲಿ ನಡೆದಿದೆ.
ಈ ಮದುವೆಯ ನಿಶ್ಚಿತಾರ್ಥ ಸಂದರ್ಭದಲ್ಲಿ 50 ಗ್ರಾಂ ಬಂಗಾರ, ಒಂದು ಲಕ್ಷ ವರೋಪಚಾರ ನೀಡುವ ಮಾತುಕತೆ ನಡೆದಿತ್ತು.ಆದರೆ, ವರನ ಕಡೆಯವರು ಇನ್ನೂ ಹೆಚ್ಚಿನ ವರದಕ್ಷಿಣೆಗಾಗಿ ಪೀಡಿಸತೊಡಗಿದರು. 100 ಗ್ರಾಂ ಚಿನ್ನ, 10 ಲಕ್ಷ ರೂಪಾಯಿ ವರದಕ್ಷಿಣೆ ನೀಡಲು ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ವಧುವಿನ ಕುಟುಂಬದವರು ಒಪ್ಪದ ಕಾರಣ ಮದುವೆ ಆಗಲು ವರನ ಕಡೆಯವರು ಒಪ್ಪಲಿಲ್ಲ.
ಮದುವೆ ನಿರಾಕರಿಸಿದ ಹಳೆ ಹುಬ್ಬಳ್ಳಿ ನಿವಾಸಿ ವರ ಸಚಿನ್ ಪಾಟೀಲ್ ನ ವಿರುದ್ಧ ವಧುವಿನ ಕುಟುಂಬಸ್ಥರು ಖಾನಾಪುರ ಪೊಲೀಸರಿಗೆ ದೂರು ನೀಡಿದ್ದರು. ಖಾನಾಪುರ ಪೊಲೀಸ್ ಠಾಣೆಯಲ್ಲಿ ವರನ ವಿರುದ್ಧ ವಧು ದೂರು ದಾಖಲಾಗಿತ್ತು.ಪೋಲಿಸರು ಕೊನೆಗೆ ವರನನ್ನು ಹಿಂಡಲಗಾ ಜೈಲಿಗೆ ಕಳಿಸಿದ್ದಾರೆ.