ಬೆಳಗಾವಿ: ಜಿಲ್ಲೆಯಲ್ಲಿ ಮರಾಠಿ ಯುವಕರ ಗೂಂಡಾಗಿರಿ ಮುಂದುವರೆದಿದೆ. ಟಿಕೆಟ್ ಕೊಡುವಂತೆ ಮರಾಠಿಯಲ್ಲಿ ಕೇಳಿದಕ್ಕೆ ಕನ್ನಡ ಮಾತನಾಡು ಅಂತ ತಿಳಿಸಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ ಮಾಡಲಾಗಿದೆ.
ಬೆಳಗಾವಿಯ ಸುಳೇಬಾವಿ ಬಾಳೆಕುಂದ್ರಿ ನಡುವೆ ಕೆ ಎಸ್ ಆರ್ ಟಿ ಸಿ ಬಸ್ ಸಂಚರಿಸುತ್ತಿದ್ದಾಗ ಯುವತಿಯೊಬ್ಬಳು ಟಿಕೆಟ್ ನೀಡುವಂತೆ ಮರಾಠಿಯಲ್ಲಿ ಕೇಳಿದ್ದಾಳೆ. ಕನ್ನಡ ಬರೋದಿಲ್ವ. ಕನ್ನಡದಲ್ಲೇ ಮಾತನಾಡಿ ಅಂತ ಕಂಡಕ್ಟರ್ ಮಹದೇವ್ ಹೇಳಿದ್ದಾರೆ.
ಕಂಡಕ್ಟರ್ ಈ ಮಾತಿನಿಂದ ಸಿಟ್ಟಾದಂತ ಅಲ್ಲೇ ಇದ್ದಂತ ಮರಾಠಿ ಯುವಕರು ಬಸ್ ನಿಲ್ಲಿಸಿ ಮಹದೇವ್ ಮೇಲೆ ಹಲ್ಲೆ ಮಾಡಿ ಥಳಿಸಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡಿರುವಂತ ಕೆ ಎಸ್ ಆರ್ ಟಿ ಸಿ ಕಂಡಕ್ಟರ್ ಮಹದೇವ್ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
BIG NEWS: NPS ರದ್ದು, OPS ಜಾರಿಗೆ ಸಿಎಂ, ಡಿಸಿಎಂ ಸ್ಪಷ್ಟ ಸಂದೇಶ: ಸಿಎಸ್ ಷಡಕ್ಷರಿ