ಬೆಂಗಳೂರು: ನಿನ್ನೆಯಷ್ಟೇ ರಾಜ್ಯಪಾಲರಿಗೆ ಬೆಳಗಾವಿ ಕಲಾಪದ ವೇಳೆಯಲ್ಲಿ ಬಂಧನ ಸಂಬಂಧ ಡಿಜಿ ಅಂಡ್ ಐಜಿಪಿ ಕರೆದು ಹೇಳಿಕೆ ಪಡೆಯುವಂತೆ ಸಿ.ಟಿ ರವಿ ದೂರು ನೀಡಿದ್ದರು. ಇಂದು ಡಿಜಿ ಮತ್ತು ಐಜಿಪಿಯವರನ್ನು ಭೇಟಿ ಮಾಡಿ, 8 ಪುಟಗಳ ದೂರು ನೀಡಿದ್ದಾರೆ.
ಇಂದು ಬೆಂಗಳೂರಲ್ಲಿ ಡಿಜಿ ಮತ್ತು ಐಜಿಪಿ ಅವರನ್ನು ಭೇಟಿಯಾದಂತ ಸಿ.ಟಿ ರವಿ ಹಾಗೂ ಬಿಜೆಪಿ ಮುಖಂಡರು, ಬೆಳಗಾವಿ ಕಲಾಪದ ವೇಳೆಯಲ್ಲಿ ಬಂಧನದ ವಿರುದ್ಧ ಬೆಳಗಾವಿ ಎಸ್ಪಿ, ಕಮೀಷನರ್ ವಿರುದ್ಧ ಆರೋಪಿಸಿ ದೂರು ನೀಡಿದರು. ಸುಮಾರು 8 ಪುಟಗಳ ದೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧವೂ ಆರೋಪಿಸಲಾಗಿದೆ.
ತಮ್ಮನ್ನು ಎತ್ತಿ ಪಶುವಿನ ರೀತಿಯಲ್ಲಿ ಕಿಡ್ನಾಪ್ ಮಾಡಿದ್ದಾರೆ. ಬೆಳಗಾವಿ ಪೊಲೀಸ್ ಕಮೀಷನರ್, ಎಸ್ಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಇಡೀ ಸನ್ನಿವೇಶ ಫೇಕ್ ಎನ್ ಕೌಂಟರ್ ರೀತಿ ಇತ್ತು. ಲೈಸೆನ್ಡ್ ಸುಫಾರಿ ಕಿಲ್ಲರ್ ರೀತಿ ಇತ್ತು ಎಂಬುದಾಗಿಯೂ ಆರೋಪಿಸಿದ್ದಾರೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಜಿ ಮತ್ತು ಐಜಿಪಿ ಅವರಿಗೆ ಮನವಿ ಮಾಡಿದ್ದಾರೆ.
ALERT : `iOS’ ಡಿವೈಸ್ ಗಳು` ಹ್ಯಾಕಿಂಗ್‌ಗೆ ಹೆಚ್ಚು ಗುರಿಯಾಗುತ್ತವೆ : ಅಧ್ಯಯನದಲ್ಲಿ ಸ್ಪೋಟಕ ಮಾಹಿತಿ ಬಹಿರಂಗ.!
ಸಮುದ್ರದ ಮೇಲೆ ನಿರ್ಮಿಸಲಾದ ಭಾರತದ ಮೊದಲ ‘ಗಾಜಿನ ಸೇತುವೆ’ ಉದ್ಘಾಟನೆ : ಇದರ ವಿಶೇಷತೆ ತಿಳಿಯಿರಿ.!