ಬಳ್ಳಾರಿ : ಬಳ್ಳಾರಿಯ ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯ ಮಗುವನ್ನು ಅಪಹರಣ ಮಾಡಿರುವ ಘಟನೆ ನಡೆದಿದೆ.
ಬಳ್ಳಾರಿ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಮಲಗಿದ್ದ ವೇಳೆ ಭಿಕ್ಷೆ ಬೇಡತ್ತಿದ್ದ ಬಿಬಿ ಫಾತಿಮಾ ಎಂಬುವರ ಮಗುವನ್ನು ಕಿಡ್ನಾಪ್ ಮಾಡಲಾಗಿದೆ. ಮಗು ಹುಡುಕಿ ಕೊಡುವಂತೆ ದೂರು ನೀಡಿದ್ರೂ ಪೊಲೀಸ್ ಸಿಬ್ಬಂದಿ ಸ್ಪಂಧಿಸುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಮನೆ ಬಾಡಿಗೆ ಕಟ್ಟಲಾಗದೇ ಕಳೆದ ಎರಡು ತಿಂಗಳಿಂದ ರೈಲ್ವೆ ನಿಲ್ದಾಣದಲ್ಲಿ ವಾಸಿಸುತ್ತಿದ್ದ ಬಿಬಿಫಾತಿಮಾಳ ಮಗುವನ್ನು ಅಪಹರಣ ಮಾಡಲಾಗಿದೆ. ಆ ಜಾಗದಲ್ಲೇ ಸುಭಾನಿ ಎಂಬ ಭಿಕ್ಷುಕ ಮಲಗಿದ್ದ. ಹೀಗಾಗಿ ಆತನೇ ಅಪಹರಣ ಮಾಡಿದ್ದಾನೆ ಎಂದು ಬಿಬಿ ಫಾತಿಮಾ ದೂರು ನೀಡಿದ್ದು, ಗಾಂಘಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.