ಕೇಸರಿ ಹಾಲಿನಿಂದ ಪಡೆಯಿರಿ ಮಗುವಿನಂತಹ ಸುಕೋಮಲ ತ್ವಚೆ – Kannada News Now


Beauty Tips Lifestyle

ಕೇಸರಿ ಹಾಲಿನಿಂದ ಪಡೆಯಿರಿ ಮಗುವಿನಂತಹ ಸುಕೋಮಲ ತ್ವಚೆ

ಸ್ಪೆಷಲ್ ಡೆಸ್ಕ್ : ಮಗುವಿನಂತಹ ಮುದ್ದಾದ ಸುಕೋಮಲ ತ್ವಚೆ ಪಡೆಯುವ ಹಂಬಲ ಎಲ್ಲರಿಗೂ ಇರುತ್ತದೆ. ಆದರೆ ಅದು ಸಾಧ್ಯವಾಗಿಸೋದು ಮಾತ್ರ ಕಷ್ಟ. ನಿಮಗೂ ಅಂತಹ ಸುಕೋಮಲ ತ್ವಚೆ ಪಡೆಯುವ ಹಂಬಲ ಇದ್ದರೆ ಒಂದು ಫೇಸ್ ಮಾಡಿಕೊಂಡರೆ ಸಾಕು.

ಹೌದು.. ಈ ಪೇಸ್‌ ಪ್ಯಾಕ್‌ ತಯಾರಿಸಲು ನಿಮಗೆ ಬೇಕಾಗಿರುವುದು ಹಾಲು ಮತ್ತು ಕೇಸರಿ. ಈ ಸಾಮಾಗ್ರಿಗಳನ್ನು ಜೊತೆಯಾಗಿ ಸೇರಿಸಿ ಪೇಸ್ಟ್‌ ಮಾಡಿಕೊಳ್ಳಿ. ನಂತರ ಅದನ್ನು ಮುಖಕ್ಕೆ ಹಾಗೂ ದೇಹಕ್ಕೆ ಹಚ್ಚಿ. 15 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಇದರಿಂದ ಏನೆಲ್ಲಾ ಪ್ರಯೋಜನ ಇದೆ…
ಮುಖದ ಕಾಂತಿ ಹೆಚ್ಚಾಗಿ ಯಂಗ್‌ ಲುಕ್‌ ಪಡೆಯಲು ಸಹಾಯವಾಗುತ್ತದೆ.
ಒಣ ಚರ್ಮ ಇರುವವರಿಗೆ ಇದು ಮಾಯಿಶ್ಚರೈಸರ್‌ ರೀತಿ ಸಹಾಯ ಮಾಡುತ್ತದೆ. ಹಾಗೂ ಚರ್ಮವನ್ನು ಮೃದುವನ್ನಾಗಿಸುತ್ತದೆ.
ಸೂರ್ಯನ ಸೂಕ್ಷ್ಮ ಕಿರಣಗಳಿಂದ ಉಂಟಾದ ಸನ್‌ ಟ್ಯಾನ್‌ ಹಾಗೂ ಸನ್‌ ಬರ್ನ್‌ ಸಮಸ್ಯೆ ಕಡಿಮೆ ಮಾಡಿದ, ಕಪ್ಪಾದ ಚರ್ಮದ ಮೇಲೆ ಪರಿಣಾಮ ಬೀಡಿ ಕಾಂತಿಯುಕ್ತವನ್ನಾಗಿಸುತ್ತದೆ..
ಮುಖ ಹಾಗೂ ಶರೀರದ ಮೇಲಿನ ಕಲೆಗಳನ್ನು ನಿವಾರಿಸಿ ಚರ್ಮ ಹೊಳೆಯುವಂತೆ ಮಾಡುತ್ತದೆ.
ಈ ಪೇಸ್‌ಪ್ಯಾಕ್‌ ಆ್ಯಂಟಿ ಬ್ಯಾಕ್ಟೀರಿಯಾ ಗುಣ ಹೊಂದಿದೆ. ಮೊಡವೆಗಳು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಇದು ತೊಡೆದುಹಾಕುತ್ತದೆ. ಇದರಿಂದ ಮೊಡವೆಗಳು ಮೂಡುವುದಿಲ್ಲ.