ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ನಿಂಬೆ ಹಣ್ಣು ಅನೇಕ ಪೌಷ್ಟಿಕಾಂಶಗಳನ್ನು ಹೊಂದಿದೆ. ಇದನ್ನು ನಿತ್ಯವೂ ಅಡುಗೆಗೆ ಉಪಯೋಗಿಸಿದರೆ ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ನಿಂಬೆ ಹಣ್ಣಿನ ಸೇವನೆ ಅನೇಕ ರೋಗಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.
ಸಿಟ್ರಿಕ್ ಅಂಶ ಹೇರಳವಾಗಿರುವ ನಿಂಬೆ ಹಣ್ಣಿನಿಂದ ದೇಹದ ಆರೋಗ್ಯ ಕಾಪಾಡಿಕೊಳ್ಳುವುದಲ್ಲದೇ ಚರ್ಮದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಅದು ಹೇಗೆ ಅಂತಿರಾ..?
ಇಂದಿನ ನೈರ್ಮಲ್ಯ ವಾತಾವರಣದಲ್ಲಿ ಮುಖದ ಚರ್ಮದ ಆರೋಗ್ಯ ಮತ್ತು ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಹೀಗೆ ಮುಖದ ಸೌಂದರ್ಯ ಕಾಪಾಡಿಕೊಳ್ಳಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ರೀಮ್, ಕಾಸ್ಮೆಟಿಕ್ಸ್‌ಗೆ ಮೊರೆ ಹೋಗುವ ಜನ ಅನೇಕರಿದ್ದಾರೆ. ಆದರೆ ಇವು ನಮಗೆ ಶಾಶ್ವತ ಪರಿಹಾರ ನೀಡೋದಿಲ್ಲ. ಅಡುಗೆ ಮನೆಯಲ್ಲಿ ಸಿಗುವ ಕೆಲ ನೈಸರ್ಗಿಕ ಪದಾರ್ಥಗಳು ಮುಖದ ಕಾಂತಿ ಹೆಚ್ಚಿಸಿ ಮುಖದ ಸೌಂದರ್ಯವನ್ನು ನೈಸರ್ಗಿಕವಾಗಿ ರಕ್ಷಣೆ ಮಾಡುತ್ತವೆ ಅದರಲ್ಲಿ ನಿಂಬೆ ಹಣ್ಣು ಹೆಚ್ಚಿನ ಪಾತ್ರ ನಿರ್ವಹಿಸುತ್ತದೆ.
ನಿಂಬೆ ಹಣ್ಣಿನ ರಸ ಚರ್ಮಕ್ಕೆ ನೈಸರ್ಗಿಕವಾಗಿ ಬ್ಲೀಚಿಂಗ್ ರೂಪದಲ್ಲಿ ಕೆಲಸ ಮಾಡುತ್ತದೆ. ಕಾಲು ಭಾಗ ನಿಂಬೆ ಹಣ್ಣಿನ ರಸಕ್ಕೆ ಎರಡು ಚಮಚ ಜೇನು ತುಪ್ಪ ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. 20 ನಿಮಿಷದ ನಂತರ ತೊಳೆದುಕೊಳ್ಳಬೇಕು. ಹೀಗೆ ಮಾಡಿದರೆ ಟ್ಯಾನ್ ಸ್ಕಿನ್ ಮಾಯವಾಗುತ್ತದೆ. ಇದನ್ನು ಗಂಡಸರೂ ಸಹ ಮಾಡಬಹುದು.
ಇನ್ನು ತಲೆಹೊಟ್ಟಿಗೆ ನಿಂಬೆ ಹಣ್ಣಿನ ರಸ ರಾಮಬಾಣವಾಗಿದೆ. ನಿಂಬೆ ಹಣ್ಣನ್ನು ಕತ್ತರಿಸಿ ನೇರವಾಗಿ ತಲೆಯ ಬುಡಕ್ಕೆ ಅಂದರೆ ತಲೆಯ ಚರ್ಮಕ್ಕೆ ನಿಂಬೆ ಹಣ್ಣು ಉಜ್ಜಿಕೊಂಡರೆ ಹೊಟ್ಟಿನ ಸಮಸ್ಯೆ ಬೇಗನೆ ನಿವಾರಣೆಯಾಗುತ್ತದೆ. ತಲೆ ಸ್ನಾನ ಮಾಡುವ ಮುನ್ನ ಅರ್ಧ ಗಂಟೆ ಮುನ್ನ ನಿಂಬೆ ಹಣ್ಣಿನ ರಸ ಹಚ್ಚಿಕೊಂಡು ಆಮೇಲೆ ಬೆಚ್ಚಗಿನ ನೀರಿನಲ್ಲಿ ತಲೆ ಸ್ನಾನ ಮಾಡಬೇಕು. ಇದು ಅತ್ಯಂತ ಪರಿಣಾಮಕಾರಿಯಾದ ಮನೆಮದ್ದಾಗಿದೆ. ತಲೆ ಚರ್ಮ ಉರಿ ಉರಿ ಎನಿಸಿದರೆ ನಿಂಬೆರಸಕ್ಕೆ ಸಮ ಪ್ರಮಾಣದ ಕೊಬ್ಬರಿ ಎಣ್ಣೆ ಕಲಿಸಿ ಹಚ್ಚಿಕೊಳ್ಳಬೇಕು.
ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದಕ್ಕೆ ಬ್ಯಾಕ್ಟೀರಿಯಾ ವಿರೋಧಿ ಗುಣ ಕೂಡ ಹೆಚ್ಚಿರುತ್ತದೆ. ಈ ಅಂಶ ಅನೇಕ ಚರ್ಮದ ಸಮಸ್ಯೆಗೆ ನಿವಾರಣೆ ನೀಡುತ್ತದೆ. ಚರ್ಮದ ಮೇಲಿನ ಕಪ್ಪುಕಲೆಗಳನ್ನು ಹಾಗು ರಂದ್ರಗಳನ್ನು ಇದು ನಿವಾರಿಸುತ್ತದೆ. ನೀವು ಶೀಕಾಕಾಯಿ ಬಳಸುತ್ತಿದ್ದರೆ ಅದಕ್ಕೆ ಅರ್ಧ ನಿಂಬೆಹಣ್ಣು ಹಿಂಡಿಕೊಳ್ಳಿ. ಇದು ಕೂದಲು ಹೊಳೆಯುವಂತೆ ಮಾಡುತ್ತದೆ. ನಿಂಬೆ ಹಣ್ಣಿನ ಸೇವನೆಯಿಂದಾಗಿ ಚರ್ಮದಲ್ಲಿನ ಜಿಡ್ಡಿನಾಂಶ ಕಡಿಮೆ ಮಾಡಿ ಮುಖದ ಮೇಲೆ ಇರುವ ಮೊಡವೆಗಣನ್ನು ಇಲ್ಲದಂತೆ ಮಾಡುತ್ತವೆ.