ಬೆಂಗಳೂರು: ನೀವು ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧೆಡೆಗಳಲ್ಲಿ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವುದರಿಂದಲೇ ಇಂದು ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳಅಳೋದು ತಪ್ಪಿಸಿ, ಡಿಜಿಟಲ್ ಅರೆಸ್ಟ್ ನಿಂದ ದೂರಾಗಿ ಎಂಬುದಾಗಿ ಸರ್ಕಾರ ಎಚ್ಚರಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರ ಮಾಹಿತಿ ನೀಡಿದ್ದು, ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವುದಕ್ಕೂ ಮುನ್ನ ಎಚ್ಚರದಿಂದಿರಿ! ಡಿಜಿಟಲ್ ಅರೆಸ್ಟ್‌ನಂತಹ ವಂಚನೆಗೆ ಬಲಿಯಾಗದಿರಿ ಎಂಬುದಾಗಿ ತಿಳಿಸಿದೆ.
ವಂಚಕರು ಸರ್ಕಾರಿ ಅಧಿಕಾರಿಗಳ / ಪೊಲೀಸರ ಸೋಗಿನಲ್ಲಿ ವಾಟ್ಸಾಪ್ ಕರೆ ಮಾಡಿ, ಅಪರಾಧ ಪ್ರಕರಣದಲ್ಲಿ ಬಂಧಿಸುವುದಾಗಿ ಬೆದರಿಸಿ ಹಣ ವಸೂಲಿ ಮಾಡಬಹುದು. ಈ ಬಗ್ಗೆ ಜಾಗರೂಕರಾಗಿರಿ. ಸಂಶಯಾಸ್ಪದ ಕರೆಗಳು ಬಂದಲ್ಲಿ ತಕ್ಷಣವೇ ಸಹಾಯವಾಣಿ ಸಂಖ್ಯೆ 1930 ಅನ್ನು ಸಂಪರ್ಕಿಸಿ ಅಥವಾ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೂ ಮಾಹಿತಿ ನೀಡಬಹುದು ಎಂದು ತಿಳಿಸಿದೆ.
ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವುದಕ್ಕೂ ಮುನ್ನ ಎಚ್ಚರದಿಂದಿರಿ!
ಡಿಜಿಟಲ್ ಅರೆಸ್ಟ್‌ನಂತಹ ವಂಚನೆಗೆ ಬಲಿಯಾಗದಿರಿ.
ವಂಚಕರು ಸರ್ಕಾರಿ ಅಧಿಕಾರಿಗಳ / ಪೊಲೀಸರ ಸೋಗಿನಲ್ಲಿ ವಾಟ್ಸಾಪ್ ಕರೆ ಮಾಡಿ, ಅಪರಾಧ ಪ್ರಕರಣದಲ್ಲಿ ಬಂಧಿಸುವುದಾಗಿ ಬೆದರಿಸಿ ಹಣ ವಸೂಲಿ ಮಾಡಬಹುದು. ಈ ಬಗ್ಗೆ ಜಾಗರೂಕರಾಗಿರಿ. ಸಂಶಯಾಸ್ಪದ ಕರೆಗಳು ಬಂದಲ್ಲಿ ತಕ್ಷಣವೇ… pic.twitter.com/1XhWHbP7Dm
— DIPR Karnataka (@KarnatakaVarthe) November 17, 2025
ಬೆಂಗಳೂರಲ್ಲಿ ನಮ್ಮ ಮೆಟ್ರೋ ರೈಲು ತಡೆದವರಿಗೆ BMRCL ಶಾಕ್: ದೂರು ದಾಖಲು | Namma Metro








