ವನಸ್ಥಲಿಪುರಂ : ಉಳಿದ ನಾನ್ ವೆಜ್ ಫ್ರಿಡ್ಜ್’ನಲ್ಲಿಡುವ ಅಭ್ಯಾಸ ನಿಮಗಿದ್ಯಾ.? ಹಾಗಿದ್ರೆ ಎಚ್ಚರ, ಫ್ರಿಡ್ಜ್’ನಲ್ಲಿಟ್ಟಿದ್ದ ಮಾಂಸವನ್ನ ಬಿಸಿ ಮಾಡಿ ತಿಂದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಏಳು ಮಂದಿ ಅಸ್ವಸ್ಥರಾಗಿದ್ದಾರೆ. ನಗರದ ವನಸ್ಥಲಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಚಿಂತಲಕುಂಟದಲ್ಲಿ ಈ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಚಿಂತಲಕುಂಟ ಆರ್‌ಟಿಸಿ ಕಾಲೋನಿಯ ನಿವಾಸಿ ಶ್ರೀನಿವಾಸ್ ಯಾದವ್ (46) ಭಾನುವಾರ ಮಟನ್ ಮತ್ತು ಚಿಕನ್ ತಂದು, ಅದನ್ನು ಬೇಯಿಸಿ, ಬೋನಾಳ ಹಬ್ಬದ ಸಂದರ್ಭದಲ್ಲಿ ತನ್ನ ಕುಟುಂಬ ಸದಸ್ಯರೊಂದಿಗೆ ತಿಂದಿದ್ದರು. ಉಳಿದ ಚಿಕನ್ ಫ್ರಿಡ್ಜ್’ನಲ್ಲಿಟ್ಟು ಸೋಮವಾರ ಮತ್ತೆ ಬಿಸಿ ಮಾಡಿದ್ದರು. ಆದರೆ, ಆಹಾರ ವಿಷಕಾರಿಯಾಗಿದ್ದರಿಂದ ಕುಟುಂಬದ ಎಲ್ಲ ಸದಸ್ಯರು ವಾಂತಿ ಮತ್ತು ಭೇದಿ ಶುರುವಾಗಿದೆ.
ತಕ್ಷಣ ಅವರನ್ನ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರ ಸ್ಥಿತಿ ಹದಗೆಟ್ಟಿದ್ದು, ಶ್ರೀನಿವಾಸ್ ಯಾದವ್ ಮಂಗಳವಾರ ಬೆಳಿಗ್ಗೆ ನಿಧನರಾದರು. ಉಳಿದ ಏಳು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬ ಸದಸ್ಯರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
BREAKING : ‘ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ’ಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ; ವರದಿ
ಜೀವನಾಂಶದ ಅಡಿಯಲ್ಲಿ ‘BMW’ಗೆ ಬೇಡಿಕೆಯಿಟ್ಟ ಪತ್ನಿ ; ತರಾಟೆಗೆ ತೆಗೆದುಕೊಂಡ ಕೋರ್ಟ್ ಹೇಳಿದ್ದೇನು ಗೊತ್ತಾ.?
2022ರಲ್ಲಿ ಭಾರತದಲ್ಲಿ ನಡೆದ 13 ಆತ್ಮಹತ್ಯೆಗಳಲ್ಲಿ ಒಂದು ವಿದ್ಯಾರ್ಥಿಯದ್ದಾಗಿತ್ತು : ಸರ್ಕಾರಿ ದತ್ತಾಂಶ