ಮುಂಬೈ: ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಭಾರತದ ಹೊಸ ಏಕದಿನ ಜರ್ಸಿಯನ್ನು ಬಿಡುಗಡೆ ಮಾಡಿದೆ
ವಿರಾಟ್ ಕೊಹ್ಲಿ, ಶುಭಮನ್, ಗಿಲ್, ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಶಮಿ, ಅರ್ಷ್ದೀಪ್ ಸಿಂಗ್ ಮತ್ತು ವರುಣ್ ಚಕ್ರವರ್ತಿ ಹೊಸ ಜರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಭುಜದ ಬ್ಲೇಡ್ ಗಳ ಮೇಲೆ ತ್ರಿವರ್ಣ ಗ್ರೇಡಿಯಂಟ್ ಹೊಂದಿರುವ ಹೊಸ ಜರ್ಸಿಯನ್ನು ಧರಿಸಿದ್ದರಿಂದ ಎಲ್ಲಾ ಆಟಗಾರರು ಉತ್ಸುಕರಾಗಿದ್ದರು. ಬಿಸಿಸಿಐ ತನ್ನ ಅಧಿಕೃತ ಮಾಧ್ಯಮ ಹ್ಯಾಂಡಲ್ ಎಕ್ಸ್ ನಲ್ಲಿ ಕ್ರಿಕೆಟಿಗರು ಹೊಸ 50 ಓವರ್ ಗಳ ಸ್ವರೂಪದ ಜರ್ಸಿ ಧರಿಸಿದ ಚಿತ್ರಗಳನ್ನು ಪೋಸ್ಟ್ ಮಾಡಿದೆ.