ನವದೆಹಲಿ: ವೆಸ್ಟ್ ಇಂಡೀಸ್ ( West Indies ) ವಿರುದ್ಧದ ಸರಣಿಯ ಮೊದಲ ಎರಡು ಏಕದಿನ ಪಂದ್ಯಗಳಿಂದ ಆಲ್ರೌಂಡರ್ ರವೀಂದ್ರ ಜಡೇಜಾ ( all-rounder Ravindra Jadeja ) ಅವರನ್ನು ಹೊರಗಿಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (Board of Control for Cricket in India – BCCI) ಶುಕ್ರವಾರ ದೃಢಪಡಿಸಿದೆ.

ಬೆಂಗಳೂರಿನಲ್ಲಿ 2 ಕಾರ್ಖಾನೆಗಳ ಮೇಲೆ ಬಿಬಿಎಂಪಿ ಅಧಿಕಾರಿಗಳ ದಾಳಿ, 810 ಕೆಜಿ ಪ್ಲಾಸ್ಟಿಕ್ ವಶ, 5 ಸಾವಿರ ದಂಡ

ಪೋರ್ಟ್ ಆಫ್ ಸ್ಪೇನ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ನಂತರ ಈ ದೃಢೀಕರಣ ಬಂದಿದೆ. ಜಡೇಜಾ ಅವರ ಬಲ ಮೊಣಕಾಲಿಗೆ ಗಾಯವಾಗಿದ್ದು, ಅವರ ಚೇತರಿಕೆಯ ಪ್ರಕ್ರಿಯೆಯನ್ನು ಮೌಲ್ಯಮಾಪನ ಮಾಡಿದ ನಂತರ ಸರಣಿಯ ಅಂತಿಮ ಪಂದ್ಯದಲ್ಲಿ ಅವರು ಭಾಗವಹಿಸುವ ಬಗ್ಗೆ ಕರೆ ನೀಡಲಾಗುವುದು ಎಂದಿದೆ.

ಇಂದಿನ ಸಚಿವ ಸಂಪುಟ ಸಭೆ, ಚುನಾವಣೆ ಸಭೆ: ಸಂಪುಟ ನಿರ್ಣಯಗಳ ಬಗ್ಗೆ ಮಾಜಿ CM ಕುಮಾರಸ್ವಾಮಿ ಲೇವಡಿ

ಈ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದು,  ಟೀಮ್ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಬಲ ಮೊಣಕಾಲಿಗೆ ಗಾಯವಾಗಿದ್ದು, ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡವು ಅವರ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಮೂರನೇ ಏಕದಿನದಲ್ಲಿ ಅವರು ಭಾಗವಹಿಸುವ ಬಗ್ಗೆ ಅದರಂತೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂಬುದಾಗಿ ಸ್ಪಷ್ಟ ಪಡಿಸಿದೆ.

Share.
Exit mobile version