ಬೆಂಗಳೂರು ; ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ ಭೇಟಿಗೆ ಇಂದು ಕುಟುಂಬ ಖಾಸಗಿ ವಾಹನದಲ್ಲೇ ಬಂದಿದ್ದು, ಬಂಧಿಖಾನೆ ಇಲಾಖೆ ಕಾನೂನು ಗಾಳಿಗೆ ತೂರಿದೆ ಎಂಬ ಆರೋಪ ಕೇಳಿಬಂದಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ ನೋಡಲು ಕುಟುಂಬಸ್ಥರು ಖಾಸಗಿ ವಾಹನದಲ್ಲಿ ಆಗಮಿಸಿದ್ದು, ರಾಜಾರೋಷವಾಗಿ ದರ್ಶನ್‌ ಕುಟುಂಬದವರನ್ನು ಜೈಲಿಗೆ ಪ್ರವೇಶ ನೀಡಲಾಗಿದೆ. ದರ್ಶನ್‌ ತಾಯಿ ಮೀನಾ, ಸೋದರ ದಿನಕರ್‌, ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್‌ ಖಾಸಗಿ ವಾಹನದಲ್ಲಿ ಜೈಲಿಗೆ ಎಂಟ್ರಿ ಕೊಟ್ಟಿದ್ದಾರೆ.

ದರ್ಶನ್‌ ಕುಟುಂಬದವರನ್ನು ಮಾಧ್ಯಮದವರ ಕಣ್ಣುತಪ್ಪಿಸಿ ಖಾಸಗಿ ಕಾರಿನಲ್ಲಿ ಹೆಡ್‌ ಕಾನ್ಸ್‌ ಟೇಬಲ್‌ ವೊಬ್ಬರು ಜೈಲಿನೊಳಗೆ ಕರೆದುಕೊಂಡು ಹೋಗಿದ್ದಾರೆ.

Share.
Exit mobile version