ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಶುಕ್ರವಾರ ಒಂದು ವಾರದವರೆಗೆ ಮುಂದೂಡಿ ಬಿಸಿಸಿಐ ಆದೇಶಿಸಿದೆ.
ನೆರೆಯ ನಗರಗಳಾದ ಜಮ್ಮು ಮತ್ತು ಪಠಾಣ್ಕೋಟ್ನಲ್ಲಿ ವಾಯು ದಾಳಿಯ ಎಚ್ಚರಿಕೆಗಳ ಹಿನ್ನೆಲೆಯಲ್ಲಿ ಧರ್ಮಶಾಲಾದಲ್ಲಿ ಗುರುವಾರ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಮಧ್ಯದಲ್ಲಿ ರದ್ದುಗೊಳಿಸಿದ ನಂತರ ನಡೆಯುತ್ತಿರುವ ಆವೃತ್ತಿಯ ಭವಿಷ್ಯದ ಬಗ್ಗೆ ಅನಿಶ್ಚಿತತೆಯ ಮೋಡ ಕವಿದಿದೆ.
ದೇಶವು ಯುದ್ಧದಲ್ಲಿರುವಾಗ ಕ್ರಿಕೆಟ್ ಮುಂದುವರಿಯುವುದು ಒಳ್ಳೆಯದಲ್ಲ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು, ಮೇ 25 ರಂದು ಕೋಲ್ಕತ್ತಾದಲ್ಲಿ ಕೊನೆಗೊಳ್ಳಬೇಕಿದ್ದ ಲೀಗ್ ಅನ್ನು ಅಮಾನತುಗೊಳಿಸಿರುವುದನ್ನು ದೃಢಪಡಿಸಿದರು.
🚨 News 🚨
The remainder of ongoing #TATAIPL 2025 suspended with immediate effect for one week.
— IndianPremierLeague (@IPL) May 9, 2025