ಬೆಂಗಳೂರು: ಜುಲೈ.31ರವರೆಗೆ ಬಿಬಿಎಂಪಿಯಿಂದ ಒಂದು ಬಾರಿಗೆ ಪರಿಹಾರ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ತೆರಿಗೆಯಲ್ಲಿ ಒಂದು ಬಾರಿಗೆ ಕಟ್ಟಿದವರಿಗೆ ವಿನಾಯ್ತಿಯನ್ನು ಘೋಷಣೆ ಮಾಡಲಾಗಿತ್ತು. ಇದಕ್ಕೆ ಭರ್ಜರಿ ರೆಸ್ಪಾನ್ಸ್ ದೊರೆತಿದ್ದು, ಬೆಂಗಳೂರಲ್ಲಿ ದಾಖಲೆಯ ಮಟ್ಟದಲ್ಲಿ ತೆರಿಗೆ ಸಂಗ್ರವಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವಂತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು, ತನ್ನ ವ್ಯಾಪ್ತಿಯಲ್ಲಿ ಬೇ-ಬಾಕಿ ಆಸ್ತಿ ತೆರಿಗೆ ಹಾಗೂ ಪರಿಷ್ಕೃತ ಆಸ್ತಿ ತೆರಿಗೆ ಪ್ರಕರಣಗಳಿಗೆ ಒಂದು ಬಾರಿಗೆ ಪರಿಹಾರ ( OTS) ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಜುಲೈ.31, 2024ರವರೆಗೆ ಅವಕಾಶ ನೀಡಲಾಗಿತ್ತು ಎಂದಿದೆ.
ಬಿಬಿಎಂಪಿಯ ಒಟಿಎಸ್ ಯೋಜನೆಗೆ ಸಿಲಿಕಾನ್ ಸಿಟಿಯ ಜನರಿಂದ ಭರ್ಜರಿ ರೆಸ್ಪಾನ್ಸ್ ಬಂದಿದೆ. ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಏಪ್ರಿಲ್ 2024 ರಿಂದ ಜುಲೈ 2024ರವರೆಗೆ 316.10 ಕೋಟಿ ತೆರಿಗೆ ಸಂಗ್ರಹವಾಗಿದೆ. ದಾಸರಹಳ್ಳಿ ವ್ಯಾಪ್ತಿಯಲ್ಲಿ 96.21 ಕೋಟಿ ತೆರಿಗೆ ಸಂಗ್ರಹವಾಗಿದೆ.
ಇದಲ್ಲದೇ ಬೆಂಗಳೂರು ಈಸ್ಟ್ ವ್ಯಾಪ್ತಿಯಲ್ಲಿ 544.46 ಕೋಟಿ, ಮಹದೇವಪುರ ವ್ಯಾಪ್ತಿಯಲ್ಲಿ 808.40 ಕೋಟಿ, ರಾಜರಾಜೇಶ್ವರಿನಗರ ವ್ಯಾಪ್ತಿಯಲ್ಲಿ 212.42 ಕೋಟಿ, ಬೆಂಗಳೂರು ಸೌತ್ ನಲ್ಲಿ 459.01 ಕೋಟಿ, ಬೆಂಗಳೂರು ವೆಸ್ಟ್ ವ್ಯಾಪ್ತಿಯಲ್ಲಿ 337.82 ಕೋಟಿ ಹಾಗೂ ಯಲಹಂಕ ವ್ಯಾಪ್ತಿಯಲ್ಲಿ 291.40 ಕೋಟಿ ಆಸ್ತಿ ತೆರಿಗೆ ಸಂಗ್ರವಾಗಿದೆ ಅಂತ ತಿಳಿಸಿದೆ.
ಪಶ್ಚಿಮ ಏಷ್ಯಾದಲ್ಲಿ ಪ್ರಕ್ಷುಬ್ಧತೆ: ಲೆಬನಾನ್ ತೊರೆಯುವಂತೆ ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ
‘HSRP’ ನಂಬರ್ ಪ್ಲೇಟ್ ಬುಕಿಂಗ್ ವೇಳೆ ಇರಲಿ ಎಚ್ಚರ : ಸೈಬರ್ ವಂಚಕರಿಂದ 95 ಸಾವಿರ ರೂ. ಕಳೆದುಕೊಂಡ ವ್ಯಕ್ತಿ!