ಬೆಂಗಳೂರು: ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ಅಡತಡೆಯಿಲ್ಲದ ಪಾದಚಾರಿ ಮಾರ್ಗ ವ್ಯವಸ್ಥೆಗೆ ಆದ್ಯತೆ ನೀಡಿ ವಲಯ ವ್ಯಾಪ್ತಿಯಲ್ಲಿ ನಿರಂತರವಾಗಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ವಲಯ ಆಯುಕ್ತರಾದ ಡಾ. ಸತೀಶ್ ಬಿ. ಸಿ. ರವರು ತಿಳಿಸಿದರು.
ರಾಜರಾಜೇಶ್ವರಿನಗರ ವಲಯದ ಕೆಂಗೇರಿ ವಿಭಾಗ ವ್ಯಾಪ್ತಿಗೆ ಒಳಪಡುವ ಮಾಗಡಿ ಮುಖ್ಯರಸ್ತೆಯಿಂದ ಈಸ್ಟ್ ವೆಸ್ಟ್ ಕಾಲೇಜು, ಒಂದನೇ ಹಂತ, ಬಿಇಎಲ್ ಲೇಔಟ್ ವರೆಗೆ ಹಾಗೂ ರಾಜರಾಜೇಶ್ವರಿನಗರ ವಿಭಾಗ ವ್ಯಾಪ್ತಿಗೆ ಒಳಪಡುವ ಮೈಸೂರು ಮುಖ್ಯ ರಸ್ತೆ, ಗೋಪಾಲನ್ ಆರ್ಚ್ ಇಂದ ರಾಜರಾಜೇಶ್ವರಿನಗರದ 18ನೇ ಅಡ್ಡರಸ್ತೆ , ಐಡಿಯಲ್ ಹೋಮ್ಸ್ ವರೆಗೆ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.
ವಲಯ ಆಯುಕ್ತರ ನಿರ್ದೇಶನದಂತೆ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿದ್ದ ಅಂಗಡಿ ಮುಂಗಟ್ಟುಗಳು, ತಾತ್ಕಾಲಿಕ ಮೇಲ್ಛಾವಣಿಗಳು, ಮೆಟ್ಟಿಲುಗಳು, ತಾತ್ಕಾಲಿಕ ಶೆಡ್ ಗಳು, ಕಟ್ಟಡ ನಿರ್ಮಾಣದ ಸಾಮಗ್ರಿ, ತಡೆಗೋಡೆಗಳು, ನಂದಿನಿ ಬೂತ್, ಪಾದಚಾರಿ ಮಾರ್ಗದಲ್ಲಿನ ಜಾಹೀರಾತು ಫಲಕಗಳು, ಮಾರ್ಗದಲ್ಲಿ ಸುರಿಯಲಾಗಿದ್ದ ಮಣ್ಣು ಮತ್ತು ತ್ಯಾಜ್ಯವನ್ನು ತೆರವುಗೊಳಿಸುವ ಮೂಲಕ ಪಾದಚಾರಿಗಳಿಗೆ ಅಡೆತಡೆಗಳಿಲ್ಲದ ಪಾದಚಾರಿ ಮಾರ್ಗ ಕಲ್ಪಿಸಲು ಕ್ರಮ ತೆಗದುಕೊಳ್ಳಲಾಯಿತು.
ಏಕ ಬಳಕೆ ಪ್ಲಾಸ್ಟಿಕ್ ತಪಾಸಣೆ:
ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆಯೊಂದಿಗೆ ವಿವಿಧ ಅಂಗಡಿ ಹಾಗೂ ಮಳಿಗೆಗಳಿಗೆ ಭೇಟಿ ನೀಡಿ, ಏಕ ಬಳಕೆ ಪ್ಲಾಸ್ಟಿಕ್ ಬಳಸುತ್ತಿರುವ ಬಗ್ಗೆ ತಪಾಸಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಬಳಸುತ್ತಿದ್ದ 37 ಅಂಗಡಿ ಮುಂಗಟ್ಟುಗಳಿಂದ ರೂ.64,300/- ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಿ, ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಲಾಯಿತು.
ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯ ಮುಂದುವರೆದ ಭಾಗವಾಗಿ, ಇದೇ ಆಗಸ್ಟ್ 14ನೇ ತಾರೀಖಿನಂದು ವಲಯ ವ್ಯಾಪ್ತಿಯ
– ಕೆಂಗೇರಿ ವಿಭಾಗದ ಕೃಷ್ಣಪ್ರಿಯ ಕನ್ವೆನ್ಷನ್ ಹಾಲ್ ನಿಂದ ಮೈಸೂರು ರಸ್ತೆಯ ಕಿಯಾ ಶೋರೂಮ್ ವರೆಗೆ
– ರಾಜರಾಜೇಶ್ವರಿನಗರ ವಿಭಾಗದ ಬಾಂಬೆ ಡಯಿಂಗ್ ರಸ್ತೆ, ಮತ್ತಿಕೆರೆ ಮುಖ್ಯರಸ್ತೆಯಿಂದ ಯಶವಂತಪುರ ಫ್ಲವರ್ ಮಾರ್ಕೆಟ್ (ಎಡಭಾಗ) ದವರೆಗೆ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ವಲಯ ಆಯುಕ್ತರು ತಿಳಿಸಿದರು.
ಆದ್ದರಿಂದ ವಲಯ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿರುವ ಅನಧಿಕೃತ ಪಾದಚಾರಿ ಮಾರ್ಗ ಒತ್ತುವರಿದಾರರು ಸ್ವಯಂ ಪ್ರೇರಿತರಾಗಿ ಪಾದಚಾರಿ ಮಾರ್ಗ ಒತ್ತುವರಿಯನ್ನು ತೆರವುಗೊಳಿಸಲು ಈ ಮೂಲಕ ತಿಳಿಯ ಪಡಿಸಿದೆ. ಒಂದು ವೇಳೆ ಸ್ವಯಂ ಪ್ರೇರಿತರಾಗಿ ತೆರವುಗೊಳಿಸದಿದ್ದಲ್ಲಿ ಬಿಬಿಎಂಪಿ ವತಿಯಿಂದ ತೆರವುಗೊಳಿಸಿ ಸಂಬಂಧಪಟ್ಟವರ ಮೇಲೆ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಲಯ ಆಯುಕ್ತರು ತಿಳಿಸಿದರು.
ಇಂದು ನಡೆದ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಮುಖ್ಯ ಅಭಿಯಂತರರು, ಆರೋಗ್ಯಾಧಿಕಾರಿ, ಕಾರ್ಯಪಾಲಕ ಅಭಿಯಂತರರು, ಆರೋಗ್ಯ ವೈದ್ಯಾಧಿಕಾರಿ, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಪಾಲಿಕೆಯ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಆಗಸ್ಟ್.8ರಿಂದ ಸಾಗರದಲ್ಲಿ ಮೂರು ದಿನ ‘ಹಲಸು ಮತ್ತು ಹಲಸಿನ ಉತ್ಪನ್ನ ಮೇಳ’: ಆಯೋಜಕ ಗಣೇಶ್ ಶೆಟ್ಟಿ
SHOCKING : ಅಂತರ್ಜಾತಿ ವಿವಾಹವಾಗಿದ್ದಕ್ಕೆ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದ ಮಾವ!