ಬೆಂಗಳೂರು: ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿದಂತ ನಿಯಮವನ್ನು ಪಾಲನೆ ಮಾಡುವುದು ಕಡ್ಡಾಯ. ನಾಳೆಯೊಳಗೆ ಬೆಂಗಳೂರಲ್ಲಿ ಅಂಗಡಿ, ಮುಂಗಟ್ಟುಗಳು ಕನ್ನಡ ನಾಮಫಲಕ ಅಳವಡಿಸದೇ ಇದ್ದರೇ ಬಂದ್ ಮಾಡೋದಾಗಿ ಬಿಬಿಎಂಪಿ ಖಡಕ್ ಎಚ್ಚರಿಕೆ ನೀಡಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಮಳಿಗೆಯಲ್ಲಿ ಕನ್ನಡ ನಾಮಫಲಕ ಹಾಕೋದಕ್ಕೆ ಮತ್ತೊಂದು ದಿನದ ಅವಕಾಶ ನೀಡಲಾಗಿದೆ. ನಾಳೆಯವರೆಗೆ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಅಳವಡಿಕೆಗೆ ಡೆಡ್ ಲೈನ್ ನೀಡಲಾಗಿದೆ ಎಂದರು.
ನಾಳೆ ಸಂಜೆಯ ವೇಳೆಗೆ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಇರುವಂತ ಬೋರ್ಡ್ ಹಾಕದೇ ಇದ್ದರೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಕನ್ನಡ ನಾಮಫಲಕ ಹಾಕದಂತ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಲಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದರು.
ಈಗಾಗಲೇ ಬೆಂಗಳೂರಲ್ಲಿ ಶೇ.90ರಷ್ಟು ಕನ್ನಡ ನಾಮಫಲಕಗಳನ್ನು ಅಂಗಡಿ, ಮುಂಗಟ್ಟುಗಳ ಮಾಲೀಕರು ಅಳವಡಿಸಿದ್ದಾರೆ. ಇನ್ನೂ ಉಳಿದಿರೋದು ಕೆಲವೇ ಕೆಲವಷ್ಟು ಮಾತ್ರ. ಇವುಗಳಿಗೆ ನಾಳೆ ಸಂಜೆಯವರೆಗೆ ಅವಕಾಶ ನೀಡುತ್ತಿರೋದಾಗಿ ತಿಳಿಸಿದರು.
ಕೆಲ ಅಂತರರಾಷ್ಟ್ರೀಯ ಕಂಪನಿಗಳು, ಎಸ್ ಬಿಐ, ಕೆನರಾ ಬ್ಯಾಂಕ್ ಸೇರಿದಂತೆ ವಿವಿಧ ಕಂಪನಿಗಳು ಕನ್ನಡ ನಾಮಫಲಕ ಅಳವಡಿಸಲು ಕಾಲಾವಕಾಶ ಕೇಳಿದ್ದಾವೆ. ಈ ಕುರಿತಂತೆ ನಾಳೆ ಸಂಜೆ ಸಭೆ ನಡೆಸಿ, ತೀರ್ಮಾನು ಕೈಗೊಳ್ಳೋದಾಗಿ ಹೇಳಿದರು.
ಪಾಕಿಸ್ತಾನ ಪರ ಘೋಷಣೆ ಆರೋಪ : ತುಮಕೂರಲ್ಲಿ ‘ಬಿಜೆಪಿ ಕಾರ್ಯಕರ್ತರ’ ಪ್ರತಿಭಟನೆ ವೇಳೆ ‘Dysp’ ಮೇಲೆ ಹಲ್ಲೆ
ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್ ಡೆಹರಾಡೂನ್: 8ನೇ ತರಗತಿ ದಾಖಲಾತಿಗಾಗಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ