Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಗೊರಕೆ’ ಸಾಮಾನ್ಯ ಸಮಸ್ಯೆಯಲ್ಲ, ಇದು ದೇಹಕ್ಕೆ ಅಪಾಯದ ಸೂಚನೆ, ಇವುಗಳನ್ನ ತಿನ್ನಿ!

02/02/2026 10:04 PM

BREAKING : ವ್ಯಾಪಾರ ಉದ್ವಿಗ್ನತೆ ನಡುವೆ ‘ಪ್ರಧಾನಿ ಮೋದಿ’ ಜೊತೆ ಅಮೆರಿಕಾ ಅಧ್ಯಕ್ಷ ‘ಟ್ರಂಪ್’ ಮಾತುಕತೆ!

02/02/2026 9:35 PM

ನಿಮ್ಗೆ ಹೊಟ್ಟೆ ನೋವು ಆಗುತ್ತಾ.? ಜಾಗರೂಕರಾಗಿರಿ, ಇದು ಅಪಾಯಕಾರಿ ಕಾಯಿಲೆಯಾಗಿರ್ಬೋದು!

02/02/2026 9:28 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ‘BBMP’ ಬಿಗ್ ಶಾಕ್: 32 ಅಂಗಡಿ-ಮುಂಗಟ್ಟುಗಳಿಗೆ ‘ಬೀಗ ಮುದ್ರೆ’
KARNATAKA

ಬೆಂಗಳೂರಲ್ಲಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ‘BBMP’ ಬಿಗ್ ಶಾಕ್: 32 ಅಂಗಡಿ-ಮುಂಗಟ್ಟುಗಳಿಗೆ ‘ಬೀಗ ಮುದ್ರೆ’

By kannadanewsnow0904/11/2024 8:08 PM

ಬೆಂಗಳೂರು: ನಗರದ ಪಶ್ಚಿಮ ವಲಯ ಮತ್ತಿಕೆರೆ ಉಪವಿಭಾಗ ಯಶವಂತಪುರ ಆರ್.ಟಿ.ಒ ರಸ್ತೆಯಲ್ಲಿರುವ ಮಾರುಕಟ್ಟೆ ಪ್ರದೇಶದಲ್ಲಿ ಇಂದು BBMP ವಲಯ ಆಯುಕ್ತರಾದ  ಅರ್ಚನಾ ರವರ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಬಾಕಿ ಆಸ್ತಿ ತೆರಿಗೆ ಉಳಿಸಿಕೊಂಡಿರುವ 32 ಮಳಿಗೆಗಳಿಗೆ ಬೀಗ ಮುದ್ರೆ ಹಾಕಲಾಗಿರುತ್ತದೆ.

ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಹೆಚ್ಚು ಆಸ್ತಿತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು ಹಾಗೂ ಪರಿಷ್ಕರಣೆ ಪ್ರಕರಣಗಳಿಗೆ ನೋಟೀಸ್ ಗಳನ್ನು ಜಾರಿ ಮಾಡಲಾಗಿದ್ದು, ಸಾಕಷ್ಟು ಸಮಯಾವಕಾಶವನ್ನು ನೀಡಿದ್ದರೂ ಬಾಕಿ ಆಸ್ತಿ ತೆರಿಗೆಯನ್ನು ಪಾವತಿಸಿರುವುದಿಲ್ಲ. ಈ ಕಾರಣ ಬಿಬಿಎಂಪಿ ಕಾಯ್ದೆ 2020 ಹಾಗೂ ನಿಯಮಾವಳಿಗಳನ್ವಯ, ವಾಣಿಜ್ಯೇತರ ಆಸ್ತಿಗಳಿಗೆ ಬೀಗಮುದ್ರೆ ಹಾಕುವುದರ ಮೂಲಕ ಬಾಕಿ ಆಸ್ತಿತೆರಿಗೆ ವಸೂಲಿ ಮಾಡಲಾಗುತ್ತಿದೆ.

ಮತ್ತಿಕೆರೆ ಸಹಾಯಕ ಕಂದಾಯ ಅಧಿಕಾರಿ ಉಪವಿಭಾಗದಲ್ಲಿನ ಸ್ವತ್ತುಗಳಲ್ಲಿ ಆಸ್ತಿತೆರಿಗೆ ಪರಿಷ್ಕರಣೆ ಪ್ರಕರಣಗಳಲ್ಲಿ ಅತೀ ಹೆಚ್ಚು ಮೊತ್ತವನ್ನು ಬಾಕಿ ಉಳಿಸಿಕೊಂಡಿದ್ದ ಸ್ವತ್ತಿಗೆ ಬೀಗಮುದ್ರೆ (Sealing) ಮಾಡಲಾಗಿರುತ್ತದೆ.

*ವಸತಿಯೇತರ ಉಪಯೋಗದ, ಪಿಐಡಿ ಸಂಖ್ಯೆ: 7-39-27 ಮತ್ತು 7-39-27/1, ಸುಬೇದಾರ್ ಛತ್ರಂ ರಸ್ತೆ, ಯಶವಂತಪುರ (ವಾರ್ಡ್‌ ಸಂಖ್ಯೆ 45 – ಮಲ್ಲೇಶ್ವರಂ) ರಲ್ಲಿ, ಮೆ|| ಮೊಹಮ್ಮದ್ ಷರೀಫ್ ಎಜುಕೇಷನ್ ಟ್ರಸ್ಟ್ ಸಂಸ್ಥೆಗೆ ಸೇರಿದ ಸ್ವತ್ತುಗಳನ್ನು(32 ವಸತಿಯೇತರ ಅಂಗಡಿಗಳು) ವಲಯ ಆಯುಕ್ತರು, ಜಂಟಿ ಆಯುಕ್ತರು, ಉಪ ಆಯುಕ್ತರು, ಕಂದಾಯ ಅಧಿಕಾರಿ (ಮಲ್ಲೇಶ್ವರಂ), ಸಹಾಯಕ ಕಂದಾಯ ಅಧಿಕಾರಿ (ಮತ್ತಿಕೆರೆ) ಹಾಗೂ ಕಂದಾಯ ವಿಭಾಗದ ನೌಕರರ ಹಾಗೂ ಸಾರ್ವಜನಿಕರ ಸಮಕ್ಷಮದಲ್ಲಿ ಬೀಗಮುದ್ರೆ (Sealing) ಮಾಡಲಾಗಿರುತ್ತದೆ.

*ಸದರಿ ಸ್ವತ್ತುಗಳಿಗೆ ಸ್ವಯಂ ಘೋಷಣಾ ಆಸ್ತಿತೆರಿಗೆ ಪದ್ಧತಿ ಅಡಿಯಲ್ಲಿ ಘೋಷಿಸಿಕೊಂಡಿದ್ದ ಸ್ವತ್ತಿನ ವಿವರಗಳನ್ನು ಪರಿಶೀಲಿಸಿ ವ್ಯತ್ಯಾಸ ಕಂಡುಬಂದ ಕಾರಣ 2016-17 ರಿಂದ 2023-24 ಸಾಲುಗಳಿಗೆ ಆಸ್ತಿತೆರಿಗೆ ಪರಿಷ್ಕರಿಸಿ ಜನವರಿ 2024 ರಲ್ಲಿ ನೋಟಿಸ್‌ ನೀಡಲಾಗಿರುತ್ತದೆ.

*ಕರ್ನಾಟಕ ಸರ್ಕಾರದಿಂದ ಪಾಲಿಕೆಯಲ್ಲಿನ ಸ್ವತ್ತುಗಳಿಗೆ ಬಾಕಿ ಆಸ್ತಿತೆರಿಗೆ ಪಾವತಿಗಾಗಿ ಒಂದು ಬಾರಿ ಪರಿಹಾರ ಯೋಜನೆಯನ್ನು(ಬಡ್ಡಿ ಹಾಗೂ ದಂಡವನ್ನು ಮನ್ನಾ ಮಾಡಿ) ಜಾರಿಗೊಳಿಸಲಾಗಿ, ಸದರಿ ಯೋಜನೆ ಅಡಿಯಲ್ಲಿ ಬಾಕಿ ಆಸ್ತಿತೆರಿಗೆ ಪಾವತಿಸಲು ಮಾರ್ಚ್‌ 2024 ರಂದು ತಿಳುವಳಿಕೆ ಪತ್ರ ನೀಡಲಾಗಿತ್ತು.

*ಸ್ವತ್ತಿನ ಮಾಲೀಕರು ಇಲ್ಲಿಯವರೆಗೆ 2016-17 ಮತ್ತು 2017-18 ನೇ ಸಾಲುಗಳಿಗೆ ಆಸ್ತಿತೆರಿಗೆ ಪಾವತಿಸಿ ಉಳಿದ ಸಾಲುಗಳಿಗೆ ಪರಿಷ್ಕರಿಸಿದ ಆಸ್ತಿತೆರಿಗೆ ಬಾಕಿ ಉಳಿಸಿಕೊಂಡಿರುತ್ತಾರೆ (2018-19 ರಿಂದ 2023-2024 ರವರೆಗೆ ಒಟ್ಟು ರೂ. 1.51 ಕೋಟಿ ಪಾವತಿಸಬೇಕಿದೆ)

ಪಾಲಿಕೆಯ ಆರ್ಥಿಕ ಹಿತದೃಷ್ಟಿಯಿಂದ ಆಸ್ತಿತೆರಿಗೆ ಬಾಕಿ ವಸೂಲಾತಿಗಾಗಿ ಸದರಿ ಕಟ್ಟಡವನ್ನು ಇಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ 2020ರ ಅಧಿನಿಯಮದಂತೆ ದಿನಾಂಕ: 04-11-2024ರಂದು ಅಪರಾಹ್ನ 1 ಗಂಟೆಗೆ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪೊಲೀಸ್ ಬಂದೋಬಸ್ತ್ ಸಹಾಯ ಪಡೆದು, ಸದರಿ ಕಟ್ಟಡದಲ್ಲಿನ 32 ಅಂಗಡಿಗಳ ಮುಖ್ಯ ದ್ವಾರಗಳನ್ನು ಬೀಗಮುದ್ರೆ ಮಾಡಲಾಗಿರುತ್ತದೆ.

ಈ ವೇಳೆ ಜಂಟಿ ಆಯುಕ್ತರಾದ ಸಂಗಪ್ಪ, ಉಪ ಆಯುಕ್ತರಾದ ಶ್ರೀನಿವಾಸ್, ಮಲ್ಲೇಶ್ವರಂನ ಕಂದಾಯ ಅಧಿಕಾರಿ, ಸಹಾಯಕ ಕಂದಾಯ ಅಧಿಕಾರಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

BREAKING: ವಾಹನ ಮಾಲೀಕರಿಗೆ ಬಿಗ್ ರಿಲೀಫ್: ನ.30ರವರೆಗೆ ರಾಜ್ಯ ಸರ್ಕಾರ ‘HSRP ನಂಬರ್ ಪ್ಲೇಟ್’ ಅಳವಡಿಕೆಗೆ ಗಡುವು ವಿಸ್ತರಿಸಿ ಆದೇಶ | HSRP Number Plates

ಸೆನ್ಸೆಕ್ಸ್ 1,400 ಅಂಕಗಳ ಕುಸಿತ, ಹೂಡಿಕೆದಾರರಿಗೆ 8 ಲಕ್ಷ ಕೋಟಿ ರೂ. ನಷ್ಟ | Share Market Updates

Share. Facebook Twitter LinkedIn WhatsApp Email

Related Posts

ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 11 ತಹಶೀಲ್ದಾರ್ ವರ್ಗಾವಣೆ | Tahashildar Transfer

02/02/2026 8:31 PM1 Min Read

BREAKING: ರಾಜ್ಯದ 3,862 ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ‘ಸ್ಮಾರ್ಟ್ ಕ್ಲಾಸ್ ರೂಂ’ ಸ್ಥಾಪಿಸಲು ಸರ್ಕಾರ ಆಡಳಿತಾತ್ಮಕ ಅನುಮೋದನೆ

02/02/2026 8:13 PM2 Mins Read

ಫೆ.5ರಿಂದ ಪಿಜಿ ವೈದ್ಯಕೀಯಕ್ಕೆ ಆಪ್ಷನ್ಸ್ ಎಂಟ್ರಿ ಆರಂಭ: ಕೆಇಎ

02/02/2026 8:12 PM1 Min Read
Recent News

‘ಗೊರಕೆ’ ಸಾಮಾನ್ಯ ಸಮಸ್ಯೆಯಲ್ಲ, ಇದು ದೇಹಕ್ಕೆ ಅಪಾಯದ ಸೂಚನೆ, ಇವುಗಳನ್ನ ತಿನ್ನಿ!

02/02/2026 10:04 PM

BREAKING : ವ್ಯಾಪಾರ ಉದ್ವಿಗ್ನತೆ ನಡುವೆ ‘ಪ್ರಧಾನಿ ಮೋದಿ’ ಜೊತೆ ಅಮೆರಿಕಾ ಅಧ್ಯಕ್ಷ ‘ಟ್ರಂಪ್’ ಮಾತುಕತೆ!

02/02/2026 9:35 PM

ನಿಮ್ಗೆ ಹೊಟ್ಟೆ ನೋವು ಆಗುತ್ತಾ.? ಜಾಗರೂಕರಾಗಿರಿ, ಇದು ಅಪಾಯಕಾರಿ ಕಾಯಿಲೆಯಾಗಿರ್ಬೋದು!

02/02/2026 9:28 PM

ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 11 ತಹಶೀಲ್ದಾರ್ ವರ್ಗಾವಣೆ | Tahashildar Transfer

02/02/2026 8:31 PM
State News
KARNATAKA

ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 11 ತಹಶೀಲ್ದಾರ್ ವರ್ಗಾವಣೆ | Tahashildar Transfer

By kannadanewsnow0902/02/2026 8:31 PM KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ 11 ಮಂದಿ ತಹಶೀಲ್ದಾರ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ…

BREAKING: ರಾಜ್ಯದ 3,862 ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ‘ಸ್ಮಾರ್ಟ್ ಕ್ಲಾಸ್ ರೂಂ’ ಸ್ಥಾಪಿಸಲು ಸರ್ಕಾರ ಆಡಳಿತಾತ್ಮಕ ಅನುಮೋದನೆ

02/02/2026 8:13 PM

ಫೆ.5ರಿಂದ ಪಿಜಿ ವೈದ್ಯಕೀಯಕ್ಕೆ ಆಪ್ಷನ್ಸ್ ಎಂಟ್ರಿ ಆರಂಭ: ಕೆಇಎ

02/02/2026 8:12 PM

JOB ALERT: 10ನೇ ಕ್ಲಾಸ್ ಪಾಸ್ ಆದವರೇ ಗಮನಿಸಿ: ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

02/02/2026 6:33 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.