ಬೆಂಗಳೂರು: ನಗರದ ಬಿಬಿಎಂಪಿ ಕಂದಾಯ ಕಚೇರಿಗಳು ನಾಳೆ ರಾತ್ರಿ.9 ಗಂಟೆಯವರೆಗೆ ತೆರೆದಿರಲಿದ್ದಾವೆ. ಇದಕ್ಕೆ ಕಾರಣ ಒಂದು ಬಾರಿಗೆ ನಗರದ ಜನರು ತೆರಿಗೆ ಪಾವತಿಗೆ ಕೊನೆಯ ದಿನವಾಗಿರೋದಕ್ಕೆ ಆಗಿದೆ.
ಈ ಬಗ್ಗೆ ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಬಾರಿ ಪರಿಹಾರ(OTS) ಯೋಜನೆಯು ನಾಳೆ ಮುಕ್ತಾಯಗೊಳ್ಳುವ ಹಿನ್ನಲೆಯಲ್ಲಿ ಆಯಾ ವಲಯ ಕಛೇರಿಗಳು ಮತ್ತು ಸಹಾಯಕ ಕಂದಾಯ ಅಧಿಕಾರಿ ಕಛೇರಿಗಳು ನಾಳೆ ರಾತ್ರಿ 09.00 ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ ಎಂದಿದ್ದಾರೆ.
ಒಂದು ಬಾರಿ ಪರಿಹಾರ ಯೋಜನೆಯಡಿ ಆಸ್ತಿ ತೆರಿಗೆ ತಂತ್ರಾಂಶದ ಮೂಲಕ ಪಾವತಿಸುವಲ್ಲಿ ಯಾವುದೇ ಸಮಸ್ಯೆ ಇದ್ದಲ್ಲಿ, ಪಾಲಿಕೆ ದಾಖಲೆಯಲ್ಲಿ ಅಸ್ತಿತ್ವದಲ್ಲಿರುವ ಸ್ವತ್ತುಗಳು ಎಸ್.ಎ.ಎಸ್ ಅರ್ಜಿ ಸಂಖ್ಯೆಯನ್ನು ನಮೂದಿಸಿ ಭಾಗಶಃ ಪಾವತಿ ಅಥವಾ ಪೂರ್ಣ ಪಾವತಿಯನ್ನು ವಲಯ ಕಛೇರಿಯಲ್ಲಿ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಸ್ವೀಕರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಮೂಲಕ ಸ್ವೀಕರಿಸಲಾಗುವ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಸ್ವಯಂ ಮೌಲ್ಯಮಾಪನ ಪರಿಗಣಿಸಲಾಗುತ್ತದೆ. ನಂತರ ಪಾಲಿಕೆಯಿಂದ ಪರಿಶೀಲನೆಗೆ ಒಳಪಡಿಸಲಾಗುತ್ತದೆ ಎಂದಿದ್ದಾರೆ.
ಎಲ್ಲಾ ತೆರಿಗೆದಾರರು/ ನಾಗರಿಕರಲ್ಲಿ, ಈ ಅದ್ಭುತ ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಂಡು ಮುಖ್ಯ ವಾಹಿನಿ ಸೇರಲು ಕಂದಾಯ ವಿಭಾಗದ ವಿಶೇಷ ಆಯುಕ್ತರು ಕೋರಿದ್ದಾರೆ.
ಕೇರಳದಲ್ಲಿ ಭೂ ಕುಸಿತ: ಕರ್ನಾಟಕದಲ್ಲೂ ಎಚ್ಚರಿಕೆ ವಹಿಸಲು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸಲಹೆ
ಶಿವಮೊಗ್ಗ: ನಾಳೆ ಸಾಗರದ ‘ಕಾರ್ಯನಿರತ ಪತ್ರಕರ್ತರ ಸಂಘ’ದಿಂದ ‘ಪತ್ರಿಕಾ ದಿನಾಚರಣೆ’