ಬೆಂಗಳೂರು: ಮಾರ್ಚ್.8ರ ನಾಳೆ ಮಹಾ ಶಿವರಾತ್ರಿ ಹಬ್ಬ. ಈ ಹಿನ್ನಲೆಯಲ್ಲಿ ಬೆಂಗಳೂರಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿ ಬಿಬಿಎಂಪಿ ಆದೇಶಿಸಿದೆ.
ಈ ಕುರಿತಂತೆ ಇಂದು ಬಿಬಿಎಂಪಿಯ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕರಾದ ಡಾ.ರವಿಕುಮಾರ್ ಆದೇಶಿಸಿದ್ದು, ದಿನಾಂಕ: 08.03.2024ರ ಶುಕ್ರವಾರ “ಮಹಾ ಶಿವರಾತ್ರಿ” ಹಬ್ಬದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
Good News : ‘ತುಟ್ಟಿಭತ್ಯೆ ಹೆಚ್ಚಳ, LPG ಸಬ್ಸಿಡಿ ಯೋಜನೆ ವಿಸ್ತರಣೆ’ಗೆ ಕೇಂದ್ರ ಸರ್ಕಾರ ಅನುಮೋದನೆ ಸಾಧ್ಯತೆ : ವರದಿ
‘ಪ್ರಧಾನಿ ಮೋದಿ’ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಕಾಶ್ಮೀರದ ‘ನಜೀಮ್’ ಯಾರು.? ಹಿನ್ನಲೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ