ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ದಕ್ಷಿಣ ವಲಯದ ಉತ್ತರಹಳ್ಳಿ ಹೋಬಳಿಯ ಹೊಸಕೆರೆಹಳ್ಳಿ ಗ್ರಾಮದ ಸರ್ವೆ ನಂ.90 ರಲ್ಲಿರುವ ಚಾಮುಂಡಿ ಸ್ಲಂ ಜಾಗದ ಬೃಹತ್ ಮಳೆ ನೀರುಗಾಲುವೆ ಮೇಲೆ ಅನಧಿಕೃತವಾಗಿ ತಾತ್ಕಾಲಿಕ ಶೆಡ್ಡುಗಳನ್ನು ನಿರ್ಮಾಣ ಮಾಡಿರುವುದು ಕಂಡು ಬಂದಿರುತ್ತದೆ.
ಬೃಹತ್ ಮಳೆ ನೀರುಗಾಲುವೆ ಒತ್ತುವರಿಗಳನ್ನು ತೆರವುಗೊಳಿಸುವ ಕುರಿತು ಸರ್ಕಾರದ ಆದೇಶದಂತೆ ಹಾಗೂ ವಲಯ ಆಯುಕ್ತರು (ದಕ್ಷಿಣ) ರವರ ನಿರ್ದೇಶನದ ಮೇರೆಗೆ ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಉತ್ತರಹಳ್ಳಿ ಹೋಬಳಿಯ ಹೊಸಕೆರೆಹಳ್ಳಿ ಸರ್ವೆ ನಂಬರ್ 90ರಲ್ಲಿರುವ ಚಾಮುಂಡಿ ಸಮ್ ಜಾಗದ ಬೃಹತ್ ಮಳೆ ನೀರು ಕಾಲುವೆ ಮೇಲೆ ಅನಧಿಕೃತವಾಗಿ ನಿರ್ಮಿಸಿರುವ ಶೆಡ್ ಗಳನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ನಿಯಮಾನುಸಾರ ಇಂದು ತೆರವುಗೊಳಿಸಲಾಗಿರುತ್ತದೆ.
ಈ ಸಂದರ್ಭದಲ್ಲಿ ಪಾಲಿಕೆಯ ಮಳೆ ನೀರುಗಾಲುವೆ ವಿಭಾಗದ ಅಭಿಯಂತರರು ಹಾಗೂ ಕಂದಾಯ ವಿಭಾಗದ ಅಧಿಕಾರಿಗಳು ಹಾಜರಿದ್ದರು.
ಔತಣಕೂಟಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ: ಮಾಜಿ ಸಂಸದ ಡಿ.ಕೆ. ಸುರೇಶ್
‘ಸಮಾಜ ಕಲ್ಯಾಣ ಇಲಾಖೆ’ಯ ಪ್ರಗತಿ ಪರಿಶೀಲನ ಸಭೆಯಲ್ಲಿ ಅಧಿಕಾರಿಗಳಿಗೆ ‘ಸಿಎಂ ಸಿದ್ಧರಾಮಯ್ಯ ಪುಲ್ ಕ್ಲಾಸ್’