ಬೆಂಗಳೂರು: ಪಿಓಪಿ ಗಣೇಶ ತಯಾರಿಕೆ, ಮಾರಾಟಕ್ಕೆ ನಿಷೇಧವಿದೆ. ಹೀಗಿದ್ದರೂ ಬೆಂಗಳೂರಲ್ಲಿ ಪಿಒಪಿ ಗಣೇಶ ಮೂರ್ತಿಯನ್ನು ತಯಾರಿಕೆ ಮಾಡುತ್ತಿದ್ದಂತ ಗೋಡೌನ್ ಮೇಲೆ ಬಿಬಿಎಂಪಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆ ಬಳಿಕ ಗೋಡೌನ್ ಸೀಜ್ ಮಾಡಿದ್ದಾರೆ.
ಈ ಕುರಿತಂತೆ ಬಿಬಿಎಂಪಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಬೆಂಗಳೂರಿನ ರಾಜರಾಜೇಶ್ವರಿನಗರ ವಲಯದ ಯಶವಂತಪುರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.198 ಹೆಮ್ಮಿಗೆಪುರ ವ್ಯಾಪ್ತಿಯಲ್ಲಿ ಪಿ.ಓ.ಪಿ ಹಾಗೂ ರಾಸಾಯನಿಕ ವಸ್ತುಗಳನ್ನು ಬಳಸಿ ಮೂರ್ತಿಗಳನ್ನು ಸಂಗ್ರಹಿಸುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ರವರು ದೂರನ್ನು ಸಲ್ಲಿಸಲಾಗಿತ್ತು ಎಂದಿದೆ.
ಸದರಿ ದೂರಿನ ಹಿನ್ನೆಲೆಯಲ್ಲಿ ವಲಯಆಯುಕ್ತರು ಹಾಗೂ ವಲಯ ಜಂಟಿಆಯುಕ್ತರು ರಾಜರಾಜೇಶ್ವರಿನಗರ ವಲಯ ರವರ ನಿರ್ದೇಶನದಂತೆ ದಿನಾಂಕ:29.08.2024 ರಂದು ಯಶವಂತಪುರ ವಿಭಾಗದ ವಾರ್ಡ್ ನಂ.198 ಹೆಮ್ಮಿಗೆಪುರ ವ್ಯಾಪ್ತಿಯ ಚೆಟ್ಟುಪಾಳ್ಯ ಮತ್ತು ಕೋಡಿಪಾಳ್ಯದ ವ್ಯಾಪ್ತಿಯಲ್ಲಿ ಕರ್ನಾಟಕ ಸರ್ಕಾರದಿಂದ ನಿಷೇಧಿಸಲಾದ ಪಿ.ಓ.ಪಿ ಹಾಗೂ ರಾಸಾಯನಿಕಗಳ ವಸ್ತುಗಳನ್ನು ಬಳಸಿ, ತಯಾರಿಸುತ್ತಿರುವ ವಿಗ್ರಹಗಳ ಮಾರಾಟ ಮಾಡುತ್ತಿರುವ ಗೋದಾಮಿಗೆ ಧೀಡಿ ತಪಾಸಣೆ ಕೈಗೊಂಡು ಮೇಲಾಧಿಕಾರಿಗಳ ಆದೇಶದಂತೆ ಗೋದಾಮಿಗೆ ಬೀಗ ಮುದ್ರೆ ಮಾಡಿ ನೋಟಿಸ್ ಜಾರಿ ಮಾಡಲಾಗಿರುತ್ತದೆ ಎಂದು ತಿಳಿಸಿದೆ.
ಈ ತಪಾಸಣಾ ಸಮಯದಲ್ಲಿ ಆರೋಗ್ಯಾಧಿಕಾರಿ ರಾಜರಾಜೇಶ್ವರಿ ನಗರ, ಆರೋಗ್ಯ ವೈಧ್ಯಾಧಿಕಾರಿ ಕೆಂಗೇರಿ, ಉಪಪರಿಸರ ಅಧಿಕಾರಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪಾಲಿಕೆಯ ಸಿಬ್ಬಂದಿಗಳು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಿದೆ.
‘CA ಸೈಟ್’ ಹಗರಣ: ಬಿಜೆಪಿ ನಾಯಕರಿಗೆ ದಮ್ಮು, ತಾಕತ್ತಿದ್ದರೆ ದಾಖಲೆ ಮುಂದಿಟ್ಟು ಮಾತಾಡಲಿ- ಕಾಂಗ್ರೆಸ್ ಸವಾಲು
ಆಸ್ತಿ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್: ಸೆ.14ರವರೆಗೆ ಶೇ.5ರ ರಿಯಾಯಿತಿ ವಿಸ್ತರಣೆ
ಬ್ಯಾಂಕ್ ಗ್ರಾಹಕರೇ ಗಮನಿಸಿ : `ಸೆಪ್ಟೆಂಬರ್’ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ!Bank Holidays