ಬೆಂಗಳೂರು: ನಗರದ ದಕ್ಷಿಣ ವಲಯ ವ್ಯಾಪ್ತಿಯಲ್ಲಿಂದು 1 ಗೋಡನ್ ಹಾಗೂ 12 ಮಳಿಗೆಗಳ ಮೇಲೆ ದಾಳಿ ನಡೆಸಿದ ವೇಳೆ 2200 ಕೆ.ಜಿ ಒಮ್ಮೆ ಬಳಸುವ ಪ್ಲಾಸ್ಟಿಕ್ ಅನ್ನು ಪಾಲಿಕೆ ವಶಕ್ಕೆ ಪಡೆದು 1.40 ಲಕ್ಷ ರೂ. ದಂಡ ವಿಧಿಸಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದಿಂದ ಪ್ಲಾಸ್ಟಿಕ್ ಬಳಕೆ ಮಾಡುವ ಗೋಡನ್ ಹಾಗೂ ಮಳಿಗೆಗಳ ಮೇಲೆ ಆಗಿಂದ್ದಾಗ್ಗೆ ಅನಿರೀಕ್ಷಿತ ಭೇಟಿ ನೀಡಿ ದಾಳಿ ನಡೆಸಲಾಗುತ್ತಿದೆ. ಅದರಂತೆ ಬಿ.ಎಸ್.ಡ.ಬ್ಲ್ಯೂ.ಎಂ.ಎಲ್ ನ ಪ್ರಧಾನ ವ್ಯವಸ್ಥಾಪಕರಾದ ಬಸವರಾಜ್ ಕಬಾಡೆ, ಚೀಫ್ ಮಾರ್ಷಲ್ ರವರ ನೇತೃತ್ವದಲ್ಲಿ ಇಂದು ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಸುವ ಗೋಡನ್ ಹಾಗೂ ಮಳಿಗೆಗಳ ಮೇಲೆ ದಾಳಿ ನಡೆಸಲಾಯಿತು.
ನಗರದ ಪದ್ಮನಾಭನಗರ ವ್ಯಾಪ್ತಿಯಲ್ಲಿ ರಾಜಲಕ್ಷ್ಮೀ ಪ್ಯಾಕೇಜಿಂಗ್ ಗೋಡನ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಒಮ್ಮೆ ಬಳಸುವ ಗಿಫ್ಟ್ ಪ್ಯಾಕಿಂಗ್ ರಾಪರ್, ಹ್ಯಾಂಡ್ ಕವರ್, ಪ್ಲಾಸ್ಟಿಕ್ ಗ್ಲಾಸ್, ಸಿಲ್ವರ್ ಲೇಪಿತ ಪ್ಲೇಟ್, ಸಿಲ್ವರ್ ಕವರ್ ಮತ್ತು ಪ್ಲಾಸ್ಟಿಕ್ ರೋಲ್ ಸೇರಿದಂತೆ ಇನ್ನಿತರೆ 600 ಕೆ.ಜಿ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಂಡು 50,000 ದಂಡ ವಿಧಿಸಲಾಯಿತು.
ಮುಂದುವರೆದು ಕೆ.ಆರ್.ಮಾರುಕಟ್ಟೆ ಮತ್ತು ಅವೆನ್ಯೂ ರಸ್ತೆಯಲ್ಲಿ ಬರುವ ಲಿಯೋ ಪ್ಯಾಕಿಂಗ್, ಮನು ಮಾರ್ಕೆಟಿಂಗ್, ಪವನ್ ಪ್ಯಾಕೇಜಿಂಗ್, ಕೇವ ರಾಮ ಪ್ಯಾಕೇಜಿಂಗ್, ಲಕ್ಷ್ಮಿ ಮಾರ್ಕೆಟಿಂಗ್, ಎಸ್.ಎಂ ಜೈನ್ ಪ್ಯಾಕೇಜಿಂಗ್, ಮಹಾವೀರ್ ಪ್ಯಾಕೇಜಿಂಗ್, ಲಬ್ಡಿ ಪ್ಯಾಕೇಜಿಂಗ್, ಬಾಲಾಜಿ ಪ್ಲಾಸ್ಟಿಕ್, ಕೃಷ್ಣ ಪೊಲಿಮಾರ್, ಪ್ಯಾರಾಸ್ ಪೋಲಿಮಾರ್ ವ್ಯಾಪಾರ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ 1,500 ಕೆ.ಜಿ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಂಡು 80,000 ದಂಡ ವಿಧಿಸಲಾಯಿತು.
ಮೈಸೂರು ರಸ್ತೆಯಲ್ಲಿ ಒಂದು ಮಳಿಗೆಗೆ ಭೇಟಿ ನೀಡಿ 100 ಕೆ.ಜಿ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಂಡು 10,000 ದಂಡ ವಿಧಿಸಲಾಗಿದೆ.
ನಗರದಾದ್ಯಂದ ಒಮ್ಮೆ ಬಳಸುವ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸದಂತೆ ಪಾಲಿಕೆ ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದಿಂದ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಪಾಲಿಕೆಯ ಆಯಾ ವಲಯ ವ್ಯಾಪ್ತಿಯಲ್ಲಿ ಪ್ರಮುಖ ಸ್ಥಳದಲ್ಲಿ ಮಾರ್ಷಲ್ ಮೇಲ್ವಿಚಾರಕರು ಹಾಗೂ ಮಾರ್ಷಲ್ ಗಳ ತಂಡವು ಮಳಿಗೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಒಮ್ಮೆ ಬಳಸುವ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸಲಾಗುತ್ತಿದೆ.
ಅದಲ್ಲದೆ ಮತ್ತೆ ಪ್ಲಾಸ್ಟಿಕ್ ಬಳಸದಂತೆ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಬದಲು ಬಟ್ಟೆ ಬ್ಯಾಗ್, ಪೇಪರ್ ಕವರ್, ನಾರಿನ ಬ್ಯಾಗ್ ಬಳಸುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.
ಬೆಂಗಳೂರಿನ ‘ನಮ್ಮ ಮೆಟ್ರೋ ನಿಲ್ದಾಣ’ಗಳಲ್ಲಿ ‘ಕಿಲೋಮೀಟರ್ ಕ್ಯೂ’ ಬಗ್ಗೆ ಈ ಸ್ಪಷ್ಟನೆ ಕೊಟ್ಟ ‘BMRCL’ | Namma Metro
ಸೆನ್ಸೆಕ್ಸ್ 1,400 ಅಂಕಗಳ ಕುಸಿತ, ಹೂಡಿಕೆದಾರರಿಗೆ 8 ಲಕ್ಷ ಕೋಟಿ ರೂ. ನಷ್ಟ | Share Market Updates
BREAKING : ‘ತೀವ್ರ ಕಳವಳ’ : ಕೆನಡಾದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರಕ್ಕೆ ‘ಭಾರತ’ ಖಂಡನೆ