Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇಂದು ನಂದಿ ಬೆಟ್ಟದಲ್ಲಿ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ: ಹೀಗಿದೆ ಸಂಪೂರ್ಣ ಹೈಲೈಟ್ಸ್ | Karnataka Cabinet Meeting

02/07/2025 6:04 PM

BREAKING : ‘AIFF’ ಮುಖ್ಯ ಕೋಚ್ ‘ಮನೋಲೋ ಮಾರ್ಕ್ವೆಜ್’ ವಜಾ |Manolo Marquez

02/07/2025 6:03 PM

ಗಮನಿಸಿ ; ಈಗ ರೈಲು ಹೊರಡುವುದಕ್ಕೆ 8 ಗಂಟೆ ಮುಂಚಿತವಾಗಿ ‘ರಿಸರ್ವೇಶನ್ ಚಾರ್ಟ್’ ಬಿಡುಗಡೆ

02/07/2025 5:50 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ ‘ರಸ್ತೆ ಗುಂಡಿ ಮುಕ್ತ’ಕ್ಕೆ ಪಣ: ‘ರಸ್ತೆ ಗುಂಡಿ ಗಮನ’ ಮೊಬೈಲ್ ಅಪ್ಲಿಕೇಷನ್ ರಿಲೀಸ್ | BBMP Fix Pothole App
KARNATAKA

ಬೆಂಗಳೂರಲ್ಲಿ ‘ರಸ್ತೆ ಗುಂಡಿ ಮುಕ್ತ’ಕ್ಕೆ ಪಣ: ‘ರಸ್ತೆ ಗುಂಡಿ ಗಮನ’ ಮೊಬೈಲ್ ಅಪ್ಲಿಕೇಷನ್ ರಿಲೀಸ್ | BBMP Fix Pothole App

By kannadanewsnow0927/07/2024 4:05 PM

ಬೆಂಗಳೂರು: ನಗರದಲ್ಲಿ ಹಲವೆಡೆ ರಸ್ತೆ ಗುಂಡಿಗಳದ್ದೇ ದರ್ಬಾರ್. ವಾಹನ ಸವಾರರು ಸಂಚಾರಕ್ಕೂ ಸವಾಲು ಎದುರಿಸುವಂತೆ ಗುಂಡಿಗಳಿದ್ದಾವೆ. ಇದೀಗ ಬೆಂಗಳೂರಿನ ರಸ್ತೆ ಗುಂಡಿ ಗಮನಕ್ಕೆ ಮೊಬೈಲ್ ಅಪ್ಲಿಕೇಷನ್ ರಿಲೀಸ್ ಮಾಡಲಾಗಿದೆ. ಹೀಗಾಗಿ ಸಿಲಿಕಾನ್ ಸಿಟಿ ಶೀಘ್ರವೇ ಗುಂಡಿ ಮುಕ್ತವಾಗುವ ಸಾಧ್ಯತೆ ಇದೆ.

“ಬ್ರ್ಯಾಂಡ್ ಬೆಂಗಳೂರು” ಪರಿಕಲ್ಪನೆ ಅಡಿ ಬೆಂಗಳೂರು ನಗರದ ಸರ್ವತೋಮುಖ ಅಭಿವೃದ್ಧಿ ಕುರಿತಂತೆ ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ ಶಿವಕುಮಾರ್ ರವರು ಇಂದು ವಿಧಾನಸೌಧದ ಕೊಠಡಿ ಸಂಖ್ಯೆ: 334 ಸಮ್ಮೇಳನ ಸಭಾಂಗಣದಲ್ಲಿ ಮಾನ್ಯ ಸಚಿವರು ಹಾಗೂ ಶಾಸಕರುಗಳೊಂದಿಗೆ ಸಭೆ ನಡೆಸಿದರು.

ಇದೇ ವೇಳೆ “ಬ್ರ್ಯಾಂಡ್ ಬೆಂಗಳೂರು” ಕುರಿತ ಕಿರುಹೊತ್ತಿಗೆ ಹಾಗೂ ರಸ್ತೆ ಗುಂಡಿ ಗಮನ ಮೊಬೈಲ್ ಅಫ್ಲಿಕೇಷನ್ ಅನ್ನು ಅನಾವರಣಗೊಳಿಸಲಾಯಿತು.

ಏನಿದು “ರಸ್ತೆ ಗುಂಡಿ ಗಮನ(Fix Pothole) – ಮೊಬೈಲ್ ಅಪ್ಲಿಕೇಷನ್?

ನಗರದಲ್ಲಿ ರಸ್ತೆ ಗುಂಡಿಗಳನ್ನು ಪಾರದರ್ಶಕವಾಗಿ ಗುರುತಿಸಲು ಹಾಗೂ ನಿಗಧಿತ ಅವಧಿಯಲ್ಲಿ ದುರಸ್ಥಿಪಡಿಸಲು ಸುಲಲಿತ ತಂತ್ರಜ್ಞಾನವನ್ನು ಹೊಂದಿರುವ “ರಸ್ತೆ ಗುಂಡಿ ಗಮನ- ಮೊಬೈಲ್ ಅಪ್ಲಿಕೇಷನ್” ಅನ್ನು ಅನಾವರಣಗೊಳಿಸಲಾಗಿದೆ.

ಬೆಂಗಳೂರು ನಗರದಲ್ಲಿ ಸುಮಾರು 12,878 ಕಿ.ಮೀ ಉದ್ದದ ರಸ್ತೆ ಜಾಲವಿದ್ದು, ಈ ಪೈಕಿ ಸುಮಾರು 1344.84 ಕಿ.ಮೀ ಆರ್ಟರಿಯಲ್ ಮತ್ತು ಸಬ್ ಆರ್ಟರಿಯಲ್ ರಸ್ತೆಗಳು ಹಾಗೂ 11533.16 ಕಿ.ಮೀ ರಸ್ತೆಗಳು ವಲಯ ಮಟ್ಟದ ರಸ್ತೆಗಳಾಗಿವೆ.

ಬೆಂಗಳೂರು ನಗರದ ರಸ್ತೆಗಳ ತಳಭಾಗದಲ್ಲಿ ಸಾಂಪ್ರದಾಯಿಕವಾಗಿ ಬೆಸ್ಕಾಂ ಕೇಬಲ್, ನೀರು ಸರಬಾರಲು ಮತ್ತು ಒಳಚರಂಡಿ ಕೊಳವೆಗಳು, ಗೇಲ್‌ಗ್ಯಾಸ್‌ನ ಕೊಳವೆಗಳು, ಕೆ.ಪಿ.ಟಿ.ಸಿ.ಎಲ್ ಸಂಸ್ಥೆಯ ಬೃಹತ್ ಮತ್ತು ಹೆಚ್ಚಿನ ಸಾಮರ್ಥ್ಯದ ಕೇಬಲ್‌ಗಳ ಅಳವಡಿಕೆ ಮತ್ತು ಒಎಫ್‌ ಕೇಬಲ್‌ಗಳ ಅಳವಡಿಕೆಯಿಂದ ರಸ್ತೆಯ ಮೇಲೆ ಭಾಗವು ಶಿಥಿಲಗೊಂಡು ನಿರಂತರವಾಗಿ ರಸ್ತೆ ಗುಂಡಿಗಳು ಉದ್ಭವಿಸುತ್ತಿರುತ್ತದೆ.

ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರಸ್ತೆಗಳನ್ನು ಜಿ.ಪಿ.ಎಸ್ ಆಧಾರದ ಮೇಲೆ ಗುರುತಿಸಿ, ಸದರಿ ರಸ್ತೆಗಳಲ್ಲಿ ಬೀಳಬಹುದಾದ ರಸ್ತೆ ಗುಂಡಿಗಳನ್ನು ಅಕ್ಷಾಂಶ ಮತ್ತು ರೇಖಾಂಶ(Latitude and Longitude)ನಲ್ಲಿ ನಿಖರವಾಗಿ ಗುರುತಿಸಿ, ಸದರಿ ಮೊಬೈಲ್‌ನಲ್ಲ ರಸ್ತೆ ಗುಂಡಿಯ ಅಳತೆಯನ್ನು ನಮೂದಿಸಿ “ಪ್ರತಿಯೊಂದು ರಸ್ತೆ ಗುಂಡಿಯನ್ನು ಮುಚ್ಚಲು ಪ್ರತ್ಯೇಕ ಕಾರ್ಯಾದೇಶವನ್ನು” ತಯಾಲಿಸಿ ಅದನ್ನು ಮುಚ್ಚಲು ಕ್ರಮವಹಿಸುವ ಪದ್ಧತಿಯನ್ನು ಮತ್ತು ರಸ್ತೆ ಗುಂಡಿಯನ್ನು ಮುಚ್ಚಲು ಕ್ರಮವಹಿಸುವಂತೆ ಮೊಬೈಲ್ ಅಪ್ಲಿಕೇಶನ್ ತಯಾರಿಸಲಾಗಿದೆ.

ಈ ತಂತ್ರಾಂಶವನ್ನು ಪಾಲಿಕೆಗೆ ಅಳವಡಿಸಿಕೊಳ್ಳುವುದರಿಂದ ರಸ್ತೆ ಗುಂಡಿಗಳನ್ನು ಗುರುತಿಸುವಿಕೆ ಮತ್ತು ದುರಸ್ಥಿ ಕಾರ್ಯವು ಪಾರದರ್ಶಕವಾಗುದಲ್ಲದೇ ರಸ್ತೆ ಗುಂಡಿ ವೆಚ್ಚದ ಮೇಲೆ ನಿಯಂತ್ರಣ ಮತ್ತು ಹೊಣೆಗಾರಿಕೆಯನ್ನು ಅತ್ಯಂತ ಯಶಸ್ವಿಯಾಗಿ ಸಂಬಂಧಪಟ್ಟ ಅಧಿಕಾರಿಗಳು ನಿಗಾವಹಿಸಬಹುದಾಗಿರುತ್ತದೆ.
2024-25ನೇ ಸಾಲಿನಲ್ಲಿ ಪ್ರತಿ ವಾಡ್‌ಗೆ ರೂ. 15.00 ಲಕ್ಷಗಳಗಳಂತೆ 225 ವಾರ್ಡ್‌ಆಗೆ ರೂ. 33.75 ಕೋಟಗಳನ್ನು ಮೀಸಲಿಡಲಾಗಿದೆ.

ಈ ತಂತ್ರಾಂಶವು ಸೃಜನಾತ್ಮಕ, ತಂತ್ರಜ್ಞಾನ ಬಳಸಿಕೊಂಡು ನಾವೀನ್ಯತೆಯುಳ್ಳ ಯೋಜನೆಯಾಗಿದ್ದು, ಪಾಲಿಕೆಯಲ್ಲಿ ರಸ್ತೆ ಗುಂಡಿಗಳನ್ನು ಪಾರದರ್ಶಕವಾಗಿ ಗುರುತಿಸಿ, ನಿಗವಿತ ಅವಧಿಯಲ್ಲಿ ರಸ್ತೆ ಗುಂಡಿ ದುರಸ್ಥಿ ಕಾರ್ಯ ಕೈಗೊಂಡಿರುವ ಬಗ್ಗೆ ಉಸ್ತುವಾರಿ ವಹಿಸಲು, ರಸ್ತೆ ಗುಂಡಿ ದುರಸ್ಥಿ ಕಾರ್ಯಕ್ಕೆ ಆಗುವ ವೆಚ್ಚದ ಮೇಲೆ ನಿಯಂತ್ರಣ ಹೊಂದಲು ಮತ್ತು ಸಾಂಧರ್ಭಿಕವಾಗಿ(Casual) ಅಂದಾಜು ಪಟ್ಟಿಯನ್ನು ತಯಾರಿಸುವ ಕ್ರಮಕ್ಕೆ ಕಡಿವಾಣ ಹಾಕಲು ಮತ್ತು ರಸ್ತೆ ಗುಂಡಿ ಮುಚ್ಚುವ ಸಿಬ್ಬಂದಿಯ ಮೇಲೆ ನಿಯಂತ್ರಣ, ಹೊಣೆಗಾರಿಕೆಯನ್ನು ಮತ್ತು ಸಮನ್ವಯತೆಯನ್ನು ಸಾಧಿಸಲು ಮತ್ತು ಸಾರ್ವಜನಿಕರಲ್ಲಿ ರಸ್ತೆ ಗುಂಡಿ ದುರಸ್ಥಿಯ ಬಗ್ಗೆ ಮಾನವ ರಹಿತ ಮಾಹಿತಿ ಒದಗಿಸಲು(Without Manual Intervention) ಮತ್ತು ಮೊಬೈಲ್‌ನಲ್ಲಿ ಎಸ್‌.ಎಂ.ಎಸ್ ಮುಖಾಂತರ ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿ
ರವಾನಿಸಲು ಜಾಲಿಗೊಳಿಸಲಾಗಿದೆ.

ರಸ್ತೆ ಗುಂಡಿಗಳನ್ನು ಅಪ್ಲೋಡ್ ಮಾಡಲು ಸಾರ್ವಜನಿಕಲಿಗೂ ಅವಕಾಶ:

“ರಸ್ತೆ ಗುಂಡಿ ಗಮನ” ತಂತ್ರಾಂಶದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಬೆಂಗಳೂರು ಸಂಚಾರಿ ಪೋಲಿಸ್ ಇಲಾಖೆಯ ಅಧಿಕಾರಿಗಳು ಮಾತ್ರವಲ್ಲದೆ “ಸಾರ್ವಜನಿಕರಿಗೂ” ರಸ್ತೆ ಗುಂಡಿಗಳನ್ನು ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ರಸ್ತೆ ಗುಂಡಿ ಗಮನ ಮೊಬೈಲ್ ಅಫಲಕೇಷನ್ ಕಾರ್ಯನಿರ್ವಹಿಸುವ ವಿಧಾನ:

“ರಸ್ತೆ ಗುಂಡಿ ಗಮನ” ತಂತ್ರಾಂಶವನ್ನು ಮೊಬೈಲ್ ನಲ್ಲಿ ಡೌಪ್ಲೋಡ್ ಮಾಡಿಕೊಳ್ಳಬೇಕು. ಇದನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬಳಸಬಹುದಾಗಿದ್ದು, ನಿಮಗೆ ಅನುಕೂಲವಾಗುವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ನಂತರ ನಿಮ್ಮ ‘ಮೊಬೈಲ್ ಸಂಖ್ಯೆ’ ನಮೂವಿಸಿ, ‘ಒಪಿ’ ಮೇಲೆ ಕ್ಲಿಕ್ ಮಾಡಿದರೆ ಎಸ್‌ಎಮ್‌ಎಸ್ ಮೂಲಕ ಒನ್ ಟೈಮ್ ಪಾಸ್ವರ್ಡ್ ಬರಲಿದೆ. ಆ ಸಂಖ್ಯೆಯನ್ನು ಹಾಕಿದ ಕೂಡಲೆ ‘ರಸ್ತೆ ದುರಸ್ತಿ’ ಎಂದು ತೋರಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ ಕೂಡಲೆ ನೀವು ನಿಂತ ಜಾಗದ ವಿಳಾಸದ ಸಮೇತ ಲೋಕೆಶನ್ ಹೋಲಿಸಲಿದೆ. ಆಗ ಸ್ಥಳದಲ್ಲಿರುವ ರಸ್ತೆ ದುರಸ್ತಿಯ ಕುರಿತ ಫೋಟೋ ಲಗತ್ತಿಸಿ, ಸ್ಥಳದಲ್ಲಿರುವ ಸಮಸ್ಯೆಯ ಕುಲಿತು ವಿವರಣೆ ಬರೆಯಬಹುದು. ಅನಂತರ ದೂರು ಸಲ್ಲಿಸುವ ಮುಂಚೆ ಒಮ್ಮೆ ‘ಪರಿಶೀಲಿಸಿ’ಕೊಳ್ಳಲು ಕೂಡಾ ಅವಕಾಶವಿದ್ದು, ಎಲ್ಲವನ್ನು ಪರಿಶೀಲಿಸಿದ ನಂತರ ‘ಸಲ್ಲಿಸಿ ಎಂಬುದರ ಮೇಲೆ ಕ್ಲಿಕ್ ಮಾಡಿದರೆ ದೂರು ದಾಖಲಾಗಿ ನಿಮಗೆ ‘ದೂಲಿನ ಸಂಖ್ಯೆ’ ಕೂಡಾ ಸಿಗಲಿದೆ.

ದೂರು ದಾಖಲಾದ ಬಳಕ ಅಧಿಕಾರಿಗಳಗೆ ಮಾಹಿತಿ ರವಾನೆಯಾಗಲಿದ್ದು, ಸಂಬಂಧಪಟ್ಟ ಅಧಿಕಾಲಿಗಳು ನಿಗನಿತ ಸಮಯದಲ್ಲಿ ದೂರನ್ನು ಬಗೆಹರಿಸಲಿದ್ದಾರೆ. ದೂರುಗಳ ಸ್ಥಿತಿಯನ್ನು ಕೂಡಾ ನೋಡುವ ವ್ಯವಸ್ಥೆ ಕಲ್ಪಿಸಲಾಗಿದೆ. ರಸ್ತೆ ಗುಂಡಿ ಗಮನ ತಂತ್ರಾಂಶಕ್ಕೆ ಒಬ್ಬರು ಒಮ್ಮೆ ಲಾಗಿನ್ ಆದರೆ ಮತ್ತೆ-ಮತ್ತೆ ಲಾಗಿನ್ ಆಗುವ ಅವಶ್ಯಕತೆಯಿರುವುದಿಲ್ಲ.

ರಸ್ತೆ ಗುಂಡಿ ಗಮನ ತಂತ್ರಾಂಶವನ್ನು ಆಂಡ್ರಾಯ್ಡ್ (Android) ಮೊಬೈಲ್‌ಗಳಲ್ಲಿ ಉಪಯೋಗಿಸಲು ಅವಕಾಶ ಕಲ್ಪಿಸಲಾಗಿದೆ. ನಾಗರೀಕರು ಈ ಅಂಕ್ ಗೆ ಭೇಟಿ ನೀಡಿ https://play.google.com/store/apps/details?id=com.indigo.bbmp.fixpothole ತಂತ್ರಾಂಶವನ್ನು ಡೌಗ್ಲೋಡ್ ಮಾಡಿಕೊಳ್ಳಬಹುದು.

BREAKING: ಜಮ್ಮು-ಕಾಶ್ಮೀರದಲ್ಲಿ ಕಮರಿಗೆ ಉರುಳಿ ಬಿದ್ದ ಕಾರು: ಐವರು ಮಕ್ಕಳು ಸೇರಿದಂತೆ 8 ಮಂದಿ ದುರ್ಮರಣ

ಸಾರ್ವಜನಿಕರ ಗಮನಕ್ಕೆ: ‘ಮುತ್ತತ್ತಿ ಪ್ರವಾಸಿ ತಾಣ’ಕ್ಕೆ ಪ್ರವಾಸಿಗರ ಭೇಟಿಗೆ ನಿಷೇಧ

SSC CGL 2024 : ಉದ್ಯೋಗಾಕಾಂಕ್ಷಿಗಳೇ ನಿಮಗಿದು ಲಾಸ್ಟ್ ಚಾನ್ಸ್ ; 17000+ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ!

Share. Facebook Twitter LinkedIn WhatsApp Email

Related Posts

ಇಂದು ನಂದಿ ಬೆಟ್ಟದಲ್ಲಿ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ: ಹೀಗಿದೆ ಸಂಪೂರ್ಣ ಹೈಲೈಟ್ಸ್ | Karnataka Cabinet Meeting

02/07/2025 6:04 PM2 Mins Read

ನೀವು ಇಂದು ರಾತ್ರಿ ಈ ರೀತಿ ಮಾಡಿ, ನಿಮ್ಮ ಹಣಕಾಸಿನ ಸಮಸ್ಯೆಗಳು ದೂರ

02/07/2025 5:27 PM3 Mins Read

BREAKING : ಪ್ರೀತಿಸಿದ ಹುಡುಗಿ ಕೈ ಕೊಟ್ಟಿದ್ದರಿಂದ ಮನನೊಂದ ಯುವಕ : ಲೈವ್ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ!

02/07/2025 4:41 PM1 Min Read
Recent News

ಇಂದು ನಂದಿ ಬೆಟ್ಟದಲ್ಲಿ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ: ಹೀಗಿದೆ ಸಂಪೂರ್ಣ ಹೈಲೈಟ್ಸ್ | Karnataka Cabinet Meeting

02/07/2025 6:04 PM

BREAKING : ‘AIFF’ ಮುಖ್ಯ ಕೋಚ್ ‘ಮನೋಲೋ ಮಾರ್ಕ್ವೆಜ್’ ವಜಾ |Manolo Marquez

02/07/2025 6:03 PM

ಗಮನಿಸಿ ; ಈಗ ರೈಲು ಹೊರಡುವುದಕ್ಕೆ 8 ಗಂಟೆ ಮುಂಚಿತವಾಗಿ ‘ರಿಸರ್ವೇಶನ್ ಚಾರ್ಟ್’ ಬಿಡುಗಡೆ

02/07/2025 5:50 PM

26,000 ಅಡಿ ಎತ್ತರಕ್ಕೆ ಹಾರಿ ಭೂಮಿಗಿಳಿದ ವಿಮಾನ ; ಭಯಭೀತರಾದ ಪ್ರಯಾಣಿಕರಿಂದ ವಿದಾಯ ಟಿಪ್ಪಣಿ, ವಿಲ್

02/07/2025 5:27 PM
State News
KARNATAKA

ಇಂದು ನಂದಿ ಬೆಟ್ಟದಲ್ಲಿ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ: ಹೀಗಿದೆ ಸಂಪೂರ್ಣ ಹೈಲೈಟ್ಸ್ | Karnataka Cabinet Meeting

By kannadanewsnow0902/07/2025 6:04 PM KARNATAKA 2 Mins Read

ಚಿಕ್ಕಬಳ್ಳಾಪುರ: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಂದಿ ಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಬೆಂಗಳೂರು…

ನೀವು ಇಂದು ರಾತ್ರಿ ಈ ರೀತಿ ಮಾಡಿ, ನಿಮ್ಮ ಹಣಕಾಸಿನ ಸಮಸ್ಯೆಗಳು ದೂರ

02/07/2025 5:27 PM

BREAKING : ಪ್ರೀತಿಸಿದ ಹುಡುಗಿ ಕೈ ಕೊಟ್ಟಿದ್ದರಿಂದ ಮನನೊಂದ ಯುವಕ : ಲೈವ್ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ!

02/07/2025 4:41 PM

BREAKING: ‘IAS ಅಧಿಕಾರಿ’ಗಳನ್ನು ‘ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ’ಗಳನ್ನಾಗಿ ನೇಮಿಸಿ ‘ರಾಜ್ಯ ಸರ್ಕಾರ’ ಆದೇಶ

02/07/2025 4:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.