ಬೆಂಗಳೂರು: ನಗರದಲ್ಲಿ ಹಲವೆಡೆ ರಸ್ತೆ ಗುಂಡಿಗಳದ್ದೇ ದರ್ಬಾರ್. ವಾಹನ ಸವಾರರು ಸಂಚಾರಕ್ಕೂ ಸವಾಲು ಎದುರಿಸುವಂತೆ ಗುಂಡಿಗಳಿದ್ದಾವೆ. ಇದೀಗ ಬೆಂಗಳೂರಿನ ರಸ್ತೆ ಗುಂಡಿ ಗಮನಕ್ಕೆ ಮೊಬೈಲ್ ಅಪ್ಲಿಕೇಷನ್ ರಿಲೀಸ್ ಮಾಡಲಾಗಿದೆ. ಹೀಗಾಗಿ ಸಿಲಿಕಾನ್ ಸಿಟಿ ಶೀಘ್ರವೇ ಗುಂಡಿ ಮುಕ್ತವಾಗುವ ಸಾಧ್ಯತೆ ಇದೆ.
“ಬ್ರ್ಯಾಂಡ್ ಬೆಂಗಳೂರು” ಪರಿಕಲ್ಪನೆ ಅಡಿ ಬೆಂಗಳೂರು ನಗರದ ಸರ್ವತೋಮುಖ ಅಭಿವೃದ್ಧಿ ಕುರಿತಂತೆ ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ ಶಿವಕುಮಾರ್ ರವರು ಇಂದು ವಿಧಾನಸೌಧದ ಕೊಠಡಿ ಸಂಖ್ಯೆ: 334 ಸಮ್ಮೇಳನ ಸಭಾಂಗಣದಲ್ಲಿ ಮಾನ್ಯ ಸಚಿವರು ಹಾಗೂ ಶಾಸಕರುಗಳೊಂದಿಗೆ ಸಭೆ ನಡೆಸಿದರು.
ಇದೇ ವೇಳೆ “ಬ್ರ್ಯಾಂಡ್ ಬೆಂಗಳೂರು” ಕುರಿತ ಕಿರುಹೊತ್ತಿಗೆ ಹಾಗೂ ರಸ್ತೆ ಗುಂಡಿ ಗಮನ ಮೊಬೈಲ್ ಅಫ್ಲಿಕೇಷನ್ ಅನ್ನು ಅನಾವರಣಗೊಳಿಸಲಾಯಿತು.
ಏನಿದು “ರಸ್ತೆ ಗುಂಡಿ ಗಮನ(Fix Pothole) – ಮೊಬೈಲ್ ಅಪ್ಲಿಕೇಷನ್?
ನಗರದಲ್ಲಿ ರಸ್ತೆ ಗುಂಡಿಗಳನ್ನು ಪಾರದರ್ಶಕವಾಗಿ ಗುರುತಿಸಲು ಹಾಗೂ ನಿಗಧಿತ ಅವಧಿಯಲ್ಲಿ ದುರಸ್ಥಿಪಡಿಸಲು ಸುಲಲಿತ ತಂತ್ರಜ್ಞಾನವನ್ನು ಹೊಂದಿರುವ “ರಸ್ತೆ ಗುಂಡಿ ಗಮನ- ಮೊಬೈಲ್ ಅಪ್ಲಿಕೇಷನ್” ಅನ್ನು ಅನಾವರಣಗೊಳಿಸಲಾಗಿದೆ.
ಬೆಂಗಳೂರು ನಗರದಲ್ಲಿ ಸುಮಾರು 12,878 ಕಿ.ಮೀ ಉದ್ದದ ರಸ್ತೆ ಜಾಲವಿದ್ದು, ಈ ಪೈಕಿ ಸುಮಾರು 1344.84 ಕಿ.ಮೀ ಆರ್ಟರಿಯಲ್ ಮತ್ತು ಸಬ್ ಆರ್ಟರಿಯಲ್ ರಸ್ತೆಗಳು ಹಾಗೂ 11533.16 ಕಿ.ಮೀ ರಸ್ತೆಗಳು ವಲಯ ಮಟ್ಟದ ರಸ್ತೆಗಳಾಗಿವೆ.
ಬೆಂಗಳೂರು ನಗರದ ರಸ್ತೆಗಳ ತಳಭಾಗದಲ್ಲಿ ಸಾಂಪ್ರದಾಯಿಕವಾಗಿ ಬೆಸ್ಕಾಂ ಕೇಬಲ್, ನೀರು ಸರಬಾರಲು ಮತ್ತು ಒಳಚರಂಡಿ ಕೊಳವೆಗಳು, ಗೇಲ್‌ಗ್ಯಾಸ್‌ನ ಕೊಳವೆಗಳು, ಕೆ.ಪಿ.ಟಿ.ಸಿ.ಎಲ್ ಸಂಸ್ಥೆಯ ಬೃಹತ್ ಮತ್ತು ಹೆಚ್ಚಿನ ಸಾಮರ್ಥ್ಯದ ಕೇಬಲ್‌ಗಳ ಅಳವಡಿಕೆ ಮತ್ತು ಒಎಫ್ ಕೇಬಲ್‌ಗಳ ಅಳವಡಿಕೆಯಿಂದ ರಸ್ತೆಯ ಮೇಲೆ ಭಾಗವು ಶಿಥಿಲಗೊಂಡು ನಿರಂತರವಾಗಿ ರಸ್ತೆ ಗುಂಡಿಗಳು ಉದ್ಭವಿಸುತ್ತಿರುತ್ತದೆ.
ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರಸ್ತೆಗಳನ್ನು ಜಿ.ಪಿ.ಎಸ್ ಆಧಾರದ ಮೇಲೆ ಗುರುತಿಸಿ, ಸದರಿ ರಸ್ತೆಗಳಲ್ಲಿ ಬೀಳಬಹುದಾದ ರಸ್ತೆ ಗುಂಡಿಗಳನ್ನು ಅಕ್ಷಾಂಶ ಮತ್ತು ರೇಖಾಂಶ(Latitude and Longitude)ನಲ್ಲಿ ನಿಖರವಾಗಿ ಗುರುತಿಸಿ, ಸದರಿ ಮೊಬೈಲ್‌ನಲ್ಲ ರಸ್ತೆ ಗುಂಡಿಯ ಅಳತೆಯನ್ನು ನಮೂದಿಸಿ “ಪ್ರತಿಯೊಂದು ರಸ್ತೆ ಗುಂಡಿಯನ್ನು ಮುಚ್ಚಲು ಪ್ರತ್ಯೇಕ ಕಾರ್ಯಾದೇಶವನ್ನು” ತಯಾಲಿಸಿ ಅದನ್ನು ಮುಚ್ಚಲು ಕ್ರಮವಹಿಸುವ ಪದ್ಧತಿಯನ್ನು ಮತ್ತು ರಸ್ತೆ ಗುಂಡಿಯನ್ನು ಮುಚ್ಚಲು ಕ್ರಮವಹಿಸುವಂತೆ ಮೊಬೈಲ್ ಅಪ್ಲಿಕೇಶನ್ ತಯಾರಿಸಲಾಗಿದೆ.
ಈ ತಂತ್ರಾಂಶವನ್ನು ಪಾಲಿಕೆಗೆ ಅಳವಡಿಸಿಕೊಳ್ಳುವುದರಿಂದ ರಸ್ತೆ ಗುಂಡಿಗಳನ್ನು ಗುರುತಿಸುವಿಕೆ ಮತ್ತು ದುರಸ್ಥಿ ಕಾರ್ಯವು ಪಾರದರ್ಶಕವಾಗುದಲ್ಲದೇ ರಸ್ತೆ ಗುಂಡಿ ವೆಚ್ಚದ ಮೇಲೆ ನಿಯಂತ್ರಣ ಮತ್ತು ಹೊಣೆಗಾರಿಕೆಯನ್ನು ಅತ್ಯಂತ ಯಶಸ್ವಿಯಾಗಿ ಸಂಬಂಧಪಟ್ಟ ಅಧಿಕಾರಿಗಳು ನಿಗಾವಹಿಸಬಹುದಾಗಿರುತ್ತದೆ.
2024-25ನೇ ಸಾಲಿನಲ್ಲಿ ಪ್ರತಿ ವಾಡ್‌ಗೆ ರೂ. 15.00 ಲಕ್ಷಗಳಗಳಂತೆ 225 ವಾರ್ಡ್‌ಆಗೆ ರೂ. 33.75 ಕೋಟಗಳನ್ನು ಮೀಸಲಿಡಲಾಗಿದೆ.
ಈ ತಂತ್ರಾಂಶವು ಸೃಜನಾತ್ಮಕ, ತಂತ್ರಜ್ಞಾನ ಬಳಸಿಕೊಂಡು ನಾವೀನ್ಯತೆಯುಳ್ಳ ಯೋಜನೆಯಾಗಿದ್ದು, ಪಾಲಿಕೆಯಲ್ಲಿ ರಸ್ತೆ ಗುಂಡಿಗಳನ್ನು ಪಾರದರ್ಶಕವಾಗಿ ಗುರುತಿಸಿ, ನಿಗವಿತ ಅವಧಿಯಲ್ಲಿ ರಸ್ತೆ ಗುಂಡಿ ದುರಸ್ಥಿ ಕಾರ್ಯ ಕೈಗೊಂಡಿರುವ ಬಗ್ಗೆ ಉಸ್ತುವಾರಿ ವಹಿಸಲು, ರಸ್ತೆ ಗುಂಡಿ ದುರಸ್ಥಿ ಕಾರ್ಯಕ್ಕೆ ಆಗುವ ವೆಚ್ಚದ ಮೇಲೆ ನಿಯಂತ್ರಣ ಹೊಂದಲು ಮತ್ತು ಸಾಂಧರ್ಭಿಕವಾಗಿ(Casual) ಅಂದಾಜು ಪಟ್ಟಿಯನ್ನು ತಯಾರಿಸುವ ಕ್ರಮಕ್ಕೆ ಕಡಿವಾಣ ಹಾಕಲು ಮತ್ತು ರಸ್ತೆ ಗುಂಡಿ ಮುಚ್ಚುವ ಸಿಬ್ಬಂದಿಯ ಮೇಲೆ ನಿಯಂತ್ರಣ, ಹೊಣೆಗಾರಿಕೆಯನ್ನು ಮತ್ತು ಸಮನ್ವಯತೆಯನ್ನು ಸಾಧಿಸಲು ಮತ್ತು ಸಾರ್ವಜನಿಕರಲ್ಲಿ ರಸ್ತೆ ಗುಂಡಿ ದುರಸ್ಥಿಯ ಬಗ್ಗೆ ಮಾನವ ರಹಿತ ಮಾಹಿತಿ ಒದಗಿಸಲು(Without Manual Intervention) ಮತ್ತು ಮೊಬೈಲ್‌ನಲ್ಲಿ ಎಸ್.ಎಂ.ಎಸ್ ಮುಖಾಂತರ ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿ
ರವಾನಿಸಲು ಜಾಲಿಗೊಳಿಸಲಾಗಿದೆ.
ರಸ್ತೆ ಗುಂಡಿಗಳನ್ನು ಅಪ್ಲೋಡ್ ಮಾಡಲು ಸಾರ್ವಜನಿಕಲಿಗೂ ಅವಕಾಶ:
“ರಸ್ತೆ ಗುಂಡಿ ಗಮನ” ತಂತ್ರಾಂಶದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಬೆಂಗಳೂರು ಸಂಚಾರಿ ಪೋಲಿಸ್ ಇಲಾಖೆಯ ಅಧಿಕಾರಿಗಳು ಮಾತ್ರವಲ್ಲದೆ “ಸಾರ್ವಜನಿಕರಿಗೂ” ರಸ್ತೆ ಗುಂಡಿಗಳನ್ನು ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ರಸ್ತೆ ಗುಂಡಿ ಗಮನ ಮೊಬೈಲ್ ಅಫಲಕೇಷನ್ ಕಾರ್ಯನಿರ್ವಹಿಸುವ ವಿಧಾನ:
“ರಸ್ತೆ ಗುಂಡಿ ಗಮನ” ತಂತ್ರಾಂಶವನ್ನು ಮೊಬೈಲ್ ನಲ್ಲಿ ಡೌಪ್ಲೋಡ್ ಮಾಡಿಕೊಳ್ಳಬೇಕು. ಇದನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬಳಸಬಹುದಾಗಿದ್ದು, ನಿಮಗೆ ಅನುಕೂಲವಾಗುವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ನಂತರ ನಿಮ್ಮ ‘ಮೊಬೈಲ್ ಸಂಖ್ಯೆ’ ನಮೂವಿಸಿ, ‘ಒಪಿ’ ಮೇಲೆ ಕ್ಲಿಕ್ ಮಾಡಿದರೆ ಎಸ್‌ಎಮ್‌ಎಸ್ ಮೂಲಕ ಒನ್ ಟೈಮ್ ಪಾಸ್ವರ್ಡ್ ಬರಲಿದೆ. ಆ ಸಂಖ್ಯೆಯನ್ನು ಹಾಕಿದ ಕೂಡಲೆ ‘ರಸ್ತೆ ದುರಸ್ತಿ’ ಎಂದು ತೋರಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ ಕೂಡಲೆ ನೀವು ನಿಂತ ಜಾಗದ ವಿಳಾಸದ ಸಮೇತ ಲೋಕೆಶನ್ ಹೋಲಿಸಲಿದೆ. ಆಗ ಸ್ಥಳದಲ್ಲಿರುವ ರಸ್ತೆ ದುರಸ್ತಿಯ ಕುರಿತ ಫೋಟೋ ಲಗತ್ತಿಸಿ, ಸ್ಥಳದಲ್ಲಿರುವ ಸಮಸ್ಯೆಯ ಕುಲಿತು ವಿವರಣೆ ಬರೆಯಬಹುದು. ಅನಂತರ ದೂರು ಸಲ್ಲಿಸುವ ಮುಂಚೆ ಒಮ್ಮೆ ‘ಪರಿಶೀಲಿಸಿ’ಕೊಳ್ಳಲು ಕೂಡಾ ಅವಕಾಶವಿದ್ದು, ಎಲ್ಲವನ್ನು ಪರಿಶೀಲಿಸಿದ ನಂತರ ‘ಸಲ್ಲಿಸಿ ಎಂಬುದರ ಮೇಲೆ ಕ್ಲಿಕ್ ಮಾಡಿದರೆ ದೂರು ದಾಖಲಾಗಿ ನಿಮಗೆ ‘ದೂಲಿನ ಸಂಖ್ಯೆ’ ಕೂಡಾ ಸಿಗಲಿದೆ.
ದೂರು ದಾಖಲಾದ ಬಳಕ ಅಧಿಕಾರಿಗಳಗೆ ಮಾಹಿತಿ ರವಾನೆಯಾಗಲಿದ್ದು, ಸಂಬಂಧಪಟ್ಟ ಅಧಿಕಾಲಿಗಳು ನಿಗನಿತ ಸಮಯದಲ್ಲಿ ದೂರನ್ನು ಬಗೆಹರಿಸಲಿದ್ದಾರೆ. ದೂರುಗಳ ಸ್ಥಿತಿಯನ್ನು ಕೂಡಾ ನೋಡುವ ವ್ಯವಸ್ಥೆ ಕಲ್ಪಿಸಲಾಗಿದೆ. ರಸ್ತೆ ಗುಂಡಿ ಗಮನ ತಂತ್ರಾಂಶಕ್ಕೆ ಒಬ್ಬರು ಒಮ್ಮೆ ಲಾಗಿನ್ ಆದರೆ ಮತ್ತೆ-ಮತ್ತೆ ಲಾಗಿನ್ ಆಗುವ ಅವಶ್ಯಕತೆಯಿರುವುದಿಲ್ಲ.
ರಸ್ತೆ ಗುಂಡಿ ಗಮನ ತಂತ್ರಾಂಶವನ್ನು ಆಂಡ್ರಾಯ್ಡ್ (Android) ಮೊಬೈಲ್‌ಗಳಲ್ಲಿ ಉಪಯೋಗಿಸಲು ಅವಕಾಶ ಕಲ್ಪಿಸಲಾಗಿದೆ. ನಾಗರೀಕರು ಈ ಅಂಕ್ ಗೆ ಭೇಟಿ ನೀಡಿ https://play.google.com/store/apps/details?id=com.indigo.bbmp.fixpothole ತಂತ್ರಾಂಶವನ್ನು ಡೌಗ್ಲೋಡ್ ಮಾಡಿಕೊಳ್ಳಬಹುದು.
BREAKING: ಜಮ್ಮು-ಕಾಶ್ಮೀರದಲ್ಲಿ ಕಮರಿಗೆ ಉರುಳಿ ಬಿದ್ದ ಕಾರು: ಐವರು ಮಕ್ಕಳು ಸೇರಿದಂತೆ 8 ಮಂದಿ ದುರ್ಮರಣ
ಸಾರ್ವಜನಿಕರ ಗಮನಕ್ಕೆ: ‘ಮುತ್ತತ್ತಿ ಪ್ರವಾಸಿ ತಾಣ’ಕ್ಕೆ ಪ್ರವಾಸಿಗರ ಭೇಟಿಗೆ ನಿಷೇಧ
SSC CGL 2024 : ಉದ್ಯೋಗಾಕಾಂಕ್ಷಿಗಳೇ ನಿಮಗಿದು ಲಾಸ್ಟ್ ಚಾನ್ಸ್ ; 17000+ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ!