ಬೆಂಗಳೂರು: ನಗರದಲ್ಲಿನ ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್ ಹಾಗೂ ಕಾಫಿ ಬಾರ್ ಗಳಿಗೆ ಬಿಬಿಎಂಪಿಯಿಂದ ಹೊಸ ನಿಯಮ ಜಾರಿಗೊಳಿಸಲಾಗಿದೆ. ಒಂದು ವೇಳೆ ನಿಯಮ ಮೀರಿದ್ರೆ ಅಂತ ಮಾಲೀಕರ ವಿರುದ್ಧ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ.
ಬಿಬಿಎಂಪಿಯಿಂದ ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಬಿಬಿಎಂಪಿ ವ್ಯಾಪ್ತಿಯ ಬಾರ್, ಹೋಟೆಲ್, ಪಬ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಧೂಮಪಾನ ವಲಯ ಮಾಡದ ಕಾರಣ, ಸಾರ್ವಜನಿಕ ವಲಯದಲ್ಲಿ ಧೂಮಪಾನ ಮಾಡುತ್ತಿರುವುದು ಕಂಡು ಬಂದಿದೆ ಎಂದಿದೆ.
ಸಾರ್ವಜನಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧಿಸಲಾಗಿದೆ. ಹೀಗಿದ್ದೂ ನಿಯಮ ಮೀರಿ ಧೂಮಪಾನ ಮಾಡುತ್ತಿರುವ ಬಗ್ಗೆ ದೂರುಗಳು ಕಂಡು ಬರುತ್ತಿದ್ದಾವೆ. ಈ ಹಿನ್ನಲೆಯಲ್ಲಿ ಈ ಕೆಳಕಂಡಂತೆ ಹೊಸ ನಿಯಮಗಳನ್ನು ಜಾರಿಗೊಳಿಸುತ್ತಿರುವುದಾಗಿ ಹೇಳಿದೆ.
ಹೀಗಿದೆ ಹೊಸ ನಿಯಮಗಳು
– ಬಾರ್, ರೆಸ್ಟೋರೆಂಟ್, ಪಬ್ ಗಳಲ್ಲಿ 30 ಕುರ್ಚಿ ಇದ್ದರೇ, 30 ಕೊಠಡಿಗಳಿಗಿಂತ ಮೇಲ್ಪಟ್ಟು ಇದ್ದರೇ ಅಂತಹ ಎಡೆಯಲ್ಲಿ ಧೂಮಪಾನ ವಲಯ ನಿಗದಿ ಕಡ್ಡಾಯ
– ಧೂಮಪಾನ ವಲಯ ನಿರ್ಮಾಣ ಮಾಡಿ, ಆ ಸ್ಥಳದಲ್ಲಿ ಪೋಟೋ ಹಾಕಿದ ನಂತ್ರ, ಬಿಬಿಎಂಪಿಗೆ ಪರವಾನಿಗೆಗಾಗಿ ಅರ್ಜಿ ಸಲ್ಲಿಸುವಂತೆ ನಿಯಮ ಜಾರಿಗೊಳಿಸಿದೆ
– ಹೀಗೆ ಅರ್ಜಿ ಸಲ್ಲಿಸಿದ ಬಳಿಕ ಅಂತ ಪಬ್, ಬಾರ್, ಹೋಟೆಲ್, ರೆಸ್ಟೋರೆಂಟ್ ಗೆ ಬಿಬಿಎಂಪಿಯ ಅಧಿಕಾರಿಗಳು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ, ಎನ್ ಓ ಸಿ ವಿತರಣೆ ಮಾಡಲು ಕ್ರಮ
– ಇನ್ನೂ ಸ್ಮೋಕಿಂಗ್ ವಲಯವು ಒಳಗಡೆ ಧೂಮಪಾನಿ ಹೋದ ನಂತ್ರ, ಅದರ ಬಾಗಿಲು ಸ್ವಯಂ ಚಾಲಿತವಾಗಿ ಕ್ಲೋಸ್ ಆಗುವಂತೆ ಇರಬೇಕು
– ಹೋಟೆಲ್, ಬಾರ್, ರೆಸ್ಟೋರೆಂಟ್, ಪಬ್ ಗಳಲ್ಲಿ 60-30ರ ನಿಯಮ ಅನುಸಾರದ ಅಕ್ಷರಗಳ ಗಾತ್ರದಲ್ಲಿ ಧೂಮಪಾನ ವಲಯದ ಬೋರ್ಡ್ ಹಾಕಬೇಕು.
– ಧೂಮ ಪಾನ ವಲಯವು ಏರ್ ಪ್ಲೋ ಸಿಸ್ಟಂ ನಿಂದ ಕೂಡಿರಬೇಕು. ಅದು ಹೊರ ಹೋಗುವ ಕಡೆಯಲ್ಲಿ ಮನೆ, ಕಟ್ಟಡಗಳು ಇರದ ಬಗ್ಗೆ ಎಚ್ಚರಿಕೆ ವಹಿಸಬೇಕು.
ಈ ಮೇಲ್ಕಂಡ ಧೂಮಪಾನ ವಲಯದ ನಿಯಮಗಳನ್ನು ಉಲ್ಲಂಘನೆ ಮಾಡಿದ್ರೇ, ಅಂತಹ ಹೋಟೆಲ್, ಬಾರ್, ಪಬ್ ಹಾಗೂ ರೆಸ್ಟೋರೆಂಟ್ ಗಳಿಗೆ ಬಿಬಿಎಂಪಿಯ ಅಧಿಕಾರಿಗಳಿಂದ ದಂಡ, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಲಾಗಿದೆ.
Good News: ರಾಜ್ಯದಲ್ಲಿ 18,000 ಅಂಗನವಾಡಿಯಲ್ಲಿ ‘LKG, UKG ಶಾಲೆ’ ಆರಂಭ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಸಾರ್ವಜನಿಕರ ಗಮನಕ್ಕೆ: ‘ಮುತ್ತತ್ತಿ ಪ್ರವಾಸಿ ತಾಣ’ಕ್ಕೆ ಪ್ರವಾಸಿಗರ ಭೇಟಿಗೆ ನಿಷೇಧ