ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹೊಸದಾಗಿ ನೇಮಕಗೊಂಡಂತ ಪೌರಕಾರ್ಮಿಕರಿಗೆ ವೇತನವನ್ನು ಹೆಚ್ ಆರ್ ಎಂ ಎಸ್ ತಂತ್ರಾಂಶದಲ್ಲಿ ಪಾವತಿಸುವುದಾಗಿ ಬಿಬಿಎಂಪಿ ತಿಳಿಸಿದೆ. ಈ ಮೂಲಕ ಹೊಸದಾಗಿ ನೇಮಕಗೊಂಡ ಪೌರಕಾರ್ಮಿಕರಿಗೆ ಗುಡ್ ನ್ಯೂಸ್ ನೀಡಿದೆ.
ಈ ಕುರಿತಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಆದೇಶ ಹೊರಡಿಸಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಡಿ.ಪಿ.ಎಸ್, ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದ 12692 ನೌಕರರನ್ನು ಪಾಲಿಕೆಯಲ್ಲಿ ಕ್ರಮಬದ್ಧಗೊಳಿಸಿ ಆದೇಶಿಸಿದೆ ಎಂದಿದ್ದಾರೆ.
ಸದರಿ ಪೌರಕಾರ್ಮಿಕರಿಗೆ ಪಾಲಿಕೆಯ ಖಾಯಂ ನೌಕರರಿಗೆ ಪಾವತಿಸುವ ವೇತನದಂತೆ ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ವೇತನವನ್ನು ಪಾವತಿಸಲು ಕ್ರಮ ವಹಿಸುವಂತೆ ಉಲ್ಲೇಖಿತದ ಕಛೇರಿ ಆದೇಶದಲ್ಲಿ ಆದೇಶಿಸಿರುವುದರಿಂದ ಸದರಿ ಆದೇಶದಂತೆ ಪಾಲಿಕೆಯಲ್ಲಿ ಕ್ರಮಬದ್ಧಗೊಂಡಿರುವ ಡಿ.ಪಿ.ಎಸ್. ಪೌರಕಾರ್ಮಿಕರ ವೇತನವನ್ನು ಜುಲೈ-2025ರ ಮಾಹೆಯಿಂದ ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ಅಳವಡಿಸಿ ಪಾವತಿಸಲು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
BREAKING: ಡಮಾಸ್ಕಸ್‌ನಲ್ಲಿರುವ ಸಿರಿಯನ್ ಸೇನಾ ಪ್ರಧಾನ ಕಚೇರಿಯ ಮೇಲೆ ಇಸ್ರೇಲಿ ದಾಳಿ | Israeli Strike