ಬೆಂಗಳೂರು: ನಗರದಲ್ಲಿ ಭಾರೀ ಮಳೆಯಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಈಗ ಜಲಪ್ರಳಯವೇ ಉಂಟಾಗಿದೆ. ಇಂತಹ ಸಮಸ್ಯೆ ನಿವಾರಿಸುವ ಸಂಬಂಧ ಬಿಬಿಎಂಪಿಯ ಕಂಟ್ರೋಲ್ ರೂಂಗೆ ಬಂದ ಕರೆಗಳು ಮಾತ್ರ ಸಾವಿರಾರು. ಅದೆಷ್ಟು ಅಂತ ಮುಂದೆ ಓದಿ.
ಈ ಬಗ್ಗೆ ಬಿಬಿಎಂಪಿಯಿಂದ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ 22-10-2024ರ ಇಂದಿನ ಸಂಜೆ 3 ಗಂಟೆಯವರೆಗೆ ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತಿರುವ ಬಗ್ಗೆ 232 ದೂರುಗಳು ಬಂದಿದ್ದರೇ, ಇವುಗಳಲ್ಲಿ 94 ದೂರು ಪರಿಹರಿಸಲಾಗಿದೆ. ಮನೆಗೆ ನೀರು ನುಗ್ಗಿದ ಬಗ್ಗೆ 1066 ದೂರುಗಳು ದಾಖಲಾಗಿದ್ದಾವೆ. ಇವುಗಳಲ್ಲಿ 477 ಪರಿಹರಿಸಲಾಗಿದೆ ಎಂದಿದೆ.
ಇನ್ನೂ ಬೆಂಗಳೂರು ವೆಸ್ಟ್ ವಲಯದಲ್ಲಿ 2, ಸೌತ್ ವಲಯಲ್ಲಿ ಒಂದು, ರಾಜರಾಜೇಶ್ವರಿ ನಗರ ವಲಯದಲ್ಲಿ ಒಂದು, ದಾಸರಹಳ್ಳಿಯಲ್ಲಿ ನಾಲ್ಕು ಸೇರಿದಂತೆ 8 ಮರಗಳು ಮುರಿದು ಬಿದ್ದಿದ್ದಾವೆ. ಇವುಗಳಲ್ಲಿ ನಾಲ್ಕನ್ನು ತೆರವುಗೊಳಿಸಲಾಗಿದೆ. ಮರದ ಕೊಂಬೆಗಳು ಮುರಿದು ಬಿದ್ದ ಬಗ್ಗೆ 22 ದೂರುಗಳು ಬಂದಿದ್ದು, 15 ಮರದ ಕೊಂಬೆಗಳನ್ನು ತೆರವುಗೊಳಿಸಲಾಗಿದೆ ಎಂದಿದೆ.
ಒಟ್ಟಾರೆಯಾಗಿ ಬೆಂಗಳೂರಲ್ಲಿ ಮಳೆಯಿಂದ ಉಂಟಾದಂತ ಅವಾಂತರ ಸಂಬಂಧ 8 ವಲಯಗಳಲ್ಲಿ 1,328 ದೂರುಗಳು ಬಂದಿದ್ದು, ಇವುಗಳಲ್ಲಿ 590 ದೂರುಗಳನ್ನು ಪರಿಹರಿಸಲಾಗಿದೆ ಎಂಬುದಾಗಿ ಬಿಬಿಎಂಪಿ ತಿಳಿಸಿದೆ.
ಬೆಂಗಳೂರು ಜನತೆ ಗಮನಕ್ಕೆ: ನಾಳೆ, ನಾಡಿದ್ದು ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut In Bengaluru