ಬೆಂಗಳೂರು: ದಾಸರಹಳ್ಳಿ ವಲಯದ IKEA ದಲ್ಲಿ ಉದ್ದಿಮೆ ಪರವಾನಗಿಗೆ ಸಂಬಂಧಿಸಿದಂತೆ ದಂಡ ಸಮೇತ 65 ಲಕ್ಷ ರೂ. ಶುಲ್ಕವನ್ನು ಪಾವತಿಸಿ ನವೀಕರಣ ಮಾಡಿಕೊಂಡಿರುತ್ತಾರೆ ಎಂದು ವಲಯ ಆಯುಕ್ತರಾದ ಗಿರೀಶ್ ಅವರು ತಿಳಿಸಿದರು.
ದಾಸರಹಳ್ಳಿ ವಲಯದ ಐಕಿಯ(IKEA INDIA PRIVATE LIMITED) ಉದ್ದಿಮೆಯನ್ನು ನಡೆಸುತ್ತಿದ್ದು, ದಿನಾಂಕ: 13ನೇ ಮೇ 2022 ರಂದು ಪಾಲಿಕೆ ವತಿಯಿಂದ ಉದ್ದಿಮೆ ಪರವಾನಗಿಯನ್ನು ಪಡೆದಿದ್ದು, 05 ವರ್ಷಗಳಿಗೆ ನವೀಕರಣ ಮಾಡಿಕೊಂಡಿರುತ್ತಾರೆ.
ಮುಂದುವರೆದಂತೆ, 08ನೇ ಜನವರಿ 2025 ರಂದು ಆರೋಗ್ಯಾಧಿಕಾರಿಗಳು ಮತ್ತು ಆರೋಗ್ಯ ವೈದ್ಯಾಧಿಕಾರಿಗಳು ಅವರ ಜೊತೆ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಲಾಯಿತು. ಈ ವೇಳೆ 4021 ಹೆಚ್.ಪಿ ಅಶ್ವಶಕ್ತಿ, Areated water, Soft Drinks & Bottled Water ಉದ್ದಿಮೆಗಳಿಗೆ ಪರವಾನಗಿಯನ್ನು ಪಡೆಯದೇ ಇರುವುದು ಕಂಡುಬಂದಿರುತ್ತದೆ. ಈ ಸಂಬಂಧ ಒಟ್ಟು 05 ವರ್ಷಗಳಿಗೆ 2022-23 ನೇ ಸಾಲಿನಿಂದ 2026-27 ನೇ ಸಾಲಿನವರೆಗೂ ಒಟ್ಟು 65,93,600 ರೂ.ಗಳನ್ನು ಪಾವತಿಸಲು ನೋಟಿಸ್‌ಗಳನ್ನು ಜಾರಿ ಮಾಡಲಾಗಿರುತ್ತದೆ.
ಐಕಿಯಗೆ ಎರಡು ಬಾರಿ ನೋಟೀಸ್ ನೀಡಿದರೂ ಯಾವುದೇ ರೀತಿಯಲ್ಲಿ ಸ್ಪಂದಿಸಿರುವುದಿಲ್ಲ. ಈ ಸಂಬಂಧ 20ನೇ ಫೆಬ್ರವರಿ 2025 ರಂದು ಉದ್ದಿಮೆದಾರರಿಗೆ ಮೂರನೇ ನೋಟಿಸ್ ಜಾರಿ ಮಾಡಲಾಯಿತು.
ಅದರಂತೆ ಐಕಿಯ ವತಿಯಿಂದ 25ನೇ ಫೆಬ್ರವರಿ 2025 ರಂದು 03 ವರ್ಷಗಳ ದಂಡದ ಮೊತ್ತವನ್ನು ಸೇರಿ 05 ವರ್ಷಗಳಿಗೆ ಉದ್ದಿಮೆ ಪರವಾನಗಿಯನ್ನು ಪಡೆಯಲು 65,93,600 ರೂ.ಗಳಿಗೆ ಮುಖ್ಯ ಆಯುಕ್ತರು, ಬಿಬಿಎಂಪಿ ರವರ ಹೆಸರಿಗೆ ಡಿಡಿ ಸಲ್ಲಿಸಿರುತ್ತಾರೆ.
ಪಾಲಿಕೆಗೆ ಬರಬೇಕಿದ್ದ ಸಂಪೂರ್ಣ ಹಣವು ಇಂದು ಖಾತೆಗೆ ಜಮೆಯಾಗಿರುತ್ತದೆ. ಈ ಸಂಬಂಧ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಗಿ ಪಡೆಯದೆ ಅನಧಿಕೃವಾಗಿ ನಡೆಸುತ್ತಿರುವ ಮಳಿಗೆ/ಉದ್ದಿಮೆಗಳು ಪರವಾನಗಿ ಪಡೆಯಲು ಕೋರಿದೆ.
ಮಹಾಕುಂಭ 2025ರಲ್ಲಿ ದಾಖಲೆಯ 17000+ ರೈಲು ಸಂಚಾರ: ರೈಲ್ ಕರ್ಮಯೋಗಿಗಳ ಪ್ರಯತ್ನಗಳಿಗೆ ಅಶ್ವಿನಿ ವೈಷ್ಣವ್ ಕೃತಜ್ಞತೆ
BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : `ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ’ ನೋಂದಣಿ ಕುರಿತು ಇಲ್ಲಿದೆ ಮಾಹಿತಿ