ಬೆಂಗಳೂರು: 2023-24 ನೇ ಸಾಲಿಗಿಂತ 2024-25ನೇ ಸಾಲಿನಲ್ಲಿ ರೂ.1,000 ಕೋಟಿಗಳಿಗಿಂತ ಹೆಚ್ಚಿನ ಮೊತ್ತದ ಆಸ್ತಿ ತೆರಿಗೆ ಸಂಗ್ರಹಣೆಯಾಗಿದೆ. 2023-24 ನೇ ಸಾಲಿನಲ್ಲಿ ರೂ. 3,918 ಕೋಟಿ ಆಸ್ತಿ ತೆರಿಗೆ ಸಂಗ್ರಹಣೆಯಾಗಿತ್ತು.
ಪ್ರಸಕ್ತ 2025-26ನೇ ಹಣಕಾಸು ವರ್ಷದಲ್ಲಿ ಪಾಲಿಕೆಯು ರೂ.6,000 ಕೋಟಿ ಮೊತ್ತದ ಆಸ್ತಿ ತೆರಿಗೆ ಸಂಗ್ರಹಣೆಯನ್ನು ಮೀರಲಿದೆ.
2016 ರಂತೆಯೇ ಮುಂದುವರಿದ ಆಸ್ತಿ ತೆರಿಗೆ ದರಗಳನ್ನು ಹೆಚ್ಚಿಸದೆ ಇರುವುದರಿಂದ ಇದೆಲ್ಲವೂ ಸಾಧ್ಯವಾಯಿತು.
2024-25 ರಲ್ಲಿ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಳ ಸಾಧಿಸಿದ್ದು ಈ ಕೆಳಕಂಡ ಅಂಶಗಳಿಂದ:
1. ಒಂದು ಬಾರಿ ಪರಿಹಾರ ಯೋಜನೆ (OTS)
2. ಬಾಕಿ ಮತ್ತು ಪ್ರಸ್ತುತ ತೆರಿಗೆ ಬಾಕಿಗಳ ಮೇಲೆ ಬಹಳ ವ್ಯವಸ್ಥಿತ ಕೆಲಸ ನಿರ್ವಹಣೆ ಮತ್ತು ತಂತ್ರಜ್ಞಾನ ಆಧಾರಿತ ಅನುಸರಣೆ.
3. ಬಾಕಿ ಆಸ್ತಿ ತೆರಿಗೆಗಳನ್ನು ವಸೂಲಿ ಮಾಡಲು ಸಂಪೂರ್ಣವಾಗಿ ಪರಿಣಾಮಕಾರಿ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳು ಮತ್ತು ನಿಯಮಗಳನ್ನು ಹೊರಡಿಸಲಾಗಿತ್ತು.
4. ಬಾಕಿ ಹಾಗೂ ಪ್ರಸ್ತುತ ಸಾಲಿನ ಆಸ್ತಿ ತೆರಿಗೆಯ ವಸೂಲಾತಿಗೆ ಮನೆ- ಮನೆಗಳಿಗೆ ನಿರಂತರವಾಗಿ ಭೇಟಿ ನೀಡಿ ವಸೂಲಿ ಮಾಡಲಾಗಿರುತ್ತದೆ ಎಂಬುದಾಗಿ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನಿಶ್ ಮೌದ್ಗಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
BIG NEWS: ಮುಸ್ಲೀಮರು ಭಾರತದ ಪ್ರಜೆಗಳು: ಮೋದಿ ಟೀಕೆಗೆ ಸಚಿವ ಕೆ.ಹೆಚ್ ಮುನಿಯಪ್ಪ ತಿರುಗೇಟು
ನಮ್ಮ ಮೆಟ್ರೋ ಪ್ರಯಾಣಿಕರೇ ಗಮನಿಸಿ : ಇಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ4 ಹೆಚ್ಚುವರಿ ರೈಲು ಸಂಚಾರ.!