ಬೆಂಗಳೂರು: ವಿಧಾನಸಭೆಯಲ್ಲಿ ರಾಮನಗರ ವಕೀಲರ ಮೇಲೆ ಎಫ್ಐಆರ್ ಕುರಿತಂತೆ ವಿಷಯವಿಟ್ಟುಕೊಂಡು ಬಿಜೆಪಿಯಿಂದ ಧರಣಿ, ಪ್ರತಿಭಟನೆ ನಡೆಸಲಾಗುತ್ತಿದೆ. ಇದರ ನಡುವೆಯೂ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ವಿಧಾನಸಭೆಯಲ್ಲಿ ಬಿಬಿಎಂಪಿ ತಿದ್ದುಪಡಿ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆಯಲಾಗಿದೆ.
ರಾಮನಗರದಲ್ಲಿ ವಕೀಲರ ಪ್ರತಿಭಟನೆಯ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದಂತ ವಿಪಕ್ಷ ನಾಯಕರು ಧರಣಿಯನ್ನು ನಡೆಸುತ್ತಿದ್ದಾರೆ. ವಿಪಕ್ಷಗಳ ಧರಣಿಯ ನಡುವೆಯೂ ವಿಧಾನಸಭೆಯಲ್ಲಿ ಬಿಬಿಎಂಪಿ ತಿದ್ದುಪಡಿ ವಿಧೇಯಕವನ್ನು ಮಂಡಿಸಿ ಸರ್ಕಾರ ಅಂಗೀಕಾರ ಪಡೆದಿದೆ.
ಬಿಬಿಎಂಪಿ ತಿದ್ದುಪಡಿ ವಿಧೇಯಕ ಅಂಗೀಕಾರದ ಬಳಿಕ ಐದು ವರ್ಷಗಳಲ್ಲಿ ಬಾಕಿ ಇಳಿಸುಕೊಂಡಿರುವಂತ ಹಿಂದಿನ ತೆರಿಗೆ ಮನ್ನಾಗೆ ಅವಕಾಶ ನೀಡಲಾಗುತ್ತಿದೆ. ಸ್ವಯಂ ಘೋಷಿತ ಆಸ್ತಿತೆರಿಗೆದಾರರು ತಪ್ಪು ಮಾಡಿದಿ ನೀಡಿದವರಿಗೆ, ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ವಿಧಿಸುವ ದಂಡ ಮತ್ತು ಬಡ್ಡಿಯನ್ನು ತಿದ್ದುಪಡಿ ವಿಧೇಯಕದ ಮೂಲಕ ಅವಕಾಶ ನೀಡಲಾಗುತ್ತಿದೆ.
ಒಟ್ಟಾರೆಯಾಗಿ ಐದು ವರ್ಷಗಳ ಹಿಂದಿನ ತೆರಿಗೆ ಮನ್ನಾಕೆ ಅವಕಾಶ ನೀಡುವ ಬಿಬಿಎಂಪಿ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಇದರೊಂದಿಗೆ ಮನ್ನಾ ತೆರಿಗೆ ಬಾಕಿ ಉಳಿಸಿಕೊಂಡಿರುವಂತ ದಂಡ ಮತ್ತು ಬಡ್ಡಿಯನ್ನು ಸರ್ಕಾರ ಮನ್ನ ಮಾಡುವಂತ ಕ್ರಮ ವಹಿಸಲಿದೆ.
ಮಾರ್ಚ್.22ರಿಂದ ‘IPL ಪಂದ್ಯಾವಳಿ’ ಆರಂಭ – ಅಧ್ಯಕ್ಷ ಅರುಣ್ ಧುಮಾಲ್ | IPL Match 2024