ಬೆಳಗಾವಿ ಸುವರ್ಣಸೌಧ: ಬಿಬಿಎಂಪಿ 2ನೇ ತಿದ್ದುಪಡಿ ವಿಧೇಯಕ ಹಾಗೂ ಚಾಣಕ್ಯ ವಿಶ್ವ ವಿದ್ಯಾಲಯ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ.
ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವಂತ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಮಹತ್ವದ ಎರಡು ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ದೊರೆತಿದೆ. ಬಿಬಿಎಂಪಿ (2ನೇ ತಿದ್ದುಪಡಿ) ವಿಧೇಯವನ್ನು ಸರ್ಕಾರ ಮಂಡಿಸಿತ್ತು. ಈ ವಿಧೇಯಕಕ್ಕೆ ಅಂಗೀಕಾರ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿನ ಸ್ವತ್ತು ತೆರಿಗೆ, ತೆರಿಗೆ ಬಾಕಿ ವಸೂಲಿಗೆ ಸಂಬಂಧ ಪಟ್ಟ ಉಪ ಬಂಧನಗಳನ್ನು ಹಾಗೂ ಎಲ್ಲಾ ತೆರಿಗೆ ಸುಸ್ತಿದಾರರು, ತೆರಿಗೆ ನಿರ್ಧರಗಳು ಸೇರಿದಂತೆ ವಿವಿಧ ನಿಯಮಗಳು ಈ ವಿಧೇಯಕಕ್ಕೆ ಅಂಗೀಕಾರ ದೊರೆತ ನಂತ್ರ ಜಾರಿಯಾಗಲಿದೆ.
ಇನ್ನೂ ಚಾಣಕ್ಯ ವಿಶ್ವ ವಿದ್ಯಾನಿಲಯ (ತಿದ್ದುಪಡಿ) ವಿಧೇಯಕವನ್ನು ವಿಧಾನ ಸಭೆಯಲ್ಲಿ ಮಂಡಿಸಲಾಗಿತ್ತು. ಈ ತಿದ್ದುಪಡಿ ವಿಧೇಯಕಕ್ಕೂ ಅಂಗೀಕಾರ ದೊರೆತಿದೆ. ಚಾಣಕ್ಯ ವಿವಿ ಅಧಿನಿಯ 2021ರ ಪ್ರಕಾರ ಸರ್ಕಾರದ ಮೂಲಕ ವಿವಿಗೆ ಒಬ್ಬ ವಿಶೇಷ ತಜ್ಞರನ್ನು ನೇಮಕ ಮಾಡುವ ತಿದ್ದುಪಡಿ ವಿಧೇಯಕ ಇದಾಗಿದೆ. ಆಡಳಿತ ಮಂಡಳಿಗೆ ನಾಮ ನಿದರ್ಶನ ಮಾಡಲು ಈ ಬಿಲ್ ಮೂಲಕ ಅವಕಾಶ ನೀಡಲಾಗುತ್ತದೆ.
BREAKING: ಬೆಂಗಳೂರಿನ BGS ಆಸ್ಪತ್ರೆಗೆ ವಾಪಾಸ್ಸಾದ ನಟ ದರ್ಶನ್ | Actor Darshan
ALERT : ಸಾರ್ವಜನಿಕರೇ ಎಚ್ಚರ : ಮೊಬೈಲ್ ನಲ್ಲಿ ಈ `ಗೇಮ್’ ಆಡಿದ್ರೆ ನಿಮ್ಮ ಖಾತೆಯಲ್ಲಿ ಹಣ ಖಾಲಿಯಾಗೋದು ಗ್ಯಾರಂಟಿ.!