ಬಾಂಗ್ಲಾದೇಶ: ಶೇಖ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ಹಲವಾರು ವಿದ್ಯಾರ್ಥಿ ಪ್ರತಿಭಟನಾಕಾರರು ಢಾಕಾದ ಬೀದಿಗಳಲ್ಲಿ ಸಂಚರಿಸಿದ್ದರಿಂದ ಮತ್ತು ಸೇನಾ ಮುಖ್ಯಸ್ಥರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಲು ಸಜ್ಜಾಗಿದ್ದರಿಂದ ಶೇಖ್ ಹಸೀನಾ ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ರಾಜೀನಾಮೆ ನೀಡುವ ಮೊದಲು ಹಸೀನಾ ಢಾಕಾದಿಂದ ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು. ಸುದ್ದಿ ಸಂಸ್ಥೆ ಎಎಫ್ಪಿಯೊಂದಿಗೆ ಮಾತನಾಡಿದ ಹಸೀನಾ ಅವರ ಹತ್ತಿರದ ಮೂಲಗಳು, “ಅವರು ಮತ್ತು ಅವರ ಸಹೋದರಿ ಗಾನಭಬನ್ (ಪ್ರಧಾನಿಯ ಅಧಿಕೃತ ನಿವಾಸ) ತೊರೆದು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಅವರು ಭಾಷಣವನ್ನು ರೆಕಾರ್ಡ್ ಮಾಡಲು ಬಯಸಿದ್ದರು. ಆದರೆ ಅದನ್ನು ಮಾಡಲು ಅವರಿಗೆ ಅವಕಾಶ ಸಿಗಲಿಲ್ಲ ಎಂದಿದ್ದಾರೆ.
ಇದಕ್ಕೂ ಮುನ್ನ ಹಸೀನಾ ಅವರ ಸಹಾಯಕರೊಬ್ಬರು ಎಎಫ್ಪಿಗೆ ಮಾತನಾಡಿ, ಹಸೀನಾ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಈ ಬೆನ್ನಲ್ಲೇ ಶೇಖ್ ಹಸೀನಾ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ಢಾಕಾವನ್ನು ತೊರೆದು, ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಹೀಗಾಗಿ ಬಾಂಗ್ಲಾದೇಶದ ಪ್ರಧಾನಿ ನಿವಾಸಕ್ಕೆ ಪ್ರತಿಭಟನಾಕಾರರು ನುಗ್ಗಿದ್ದು, ಸಿಕ್ಕ ಸಿಕ್ಕ ವಸ್ತುಗಳನ್ನು ಹೊಡೆದು ಹಾಕುತ್ತಾ, ದೋಚುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಪುರುಷರೇ ಎಚ್ಚರ : `ಶಿಶ್ನ ಕ್ಯಾನ್ಸರ್’ ನ ಆರಂಭಿಕ ರೋಗಲಕ್ಷಣಗಳ ಬಗ್ಗೆ ತಿಳಿಯಿರಿ!
ನನ್ನ ಆಸ್ತಿ ಲೆಕ್ಕ ಕೇಳ್ತಾ ಇದ್ದೀಯಾ? ಎಲ್ಲಾ ಕೊಡ್ತೀನಿ, ಮೊದಲು ನಿನ್ನ ಸಹೋದರನ ಲೆಕ್ಕ ಕೊಡು: HDKಗೆ ಡಿಕೆಶಿ ಪ್ರಶ್ನೆ