ಬಾಂಗ್ಲಾದೇಶದ ಢಾಕಾದ ಮೊಗ್ಬಜಾರ್ ಫ್ಲೈಓವರ್ ನಲ್ಲಿ ಬುಧವಾರ ನಡೆದ ಬಾಂಬ್ ಎಸೆತ ಘಟನೆಯಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇನ್ನೂ ಹಲವರು ವಿವಿಧ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ ಮತ್ತು ಅವರನ್ನು ತುರ್ತು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.
ಪೊಲೀಸರು ಪ್ರದೇಶವನ್ನು ಸುತ್ತುವರೆದಿದ್ದಾರೆ. ಸ್ಫೋಟ ಸಂಭವಿಸಿದ ಕೂಡಲೇ ದಾಳಿಕೋರರು ಪರಾರಿಯಾಗಿದ್ದಾರೆ.
ಇದ್ದಕ್ಕಿದ್ದಂತೆ ಭಾರಿ ಸ್ಫೋಟವು ಈ ಪ್ರದೇಶದಲ್ಲಿ ಭೀತಿಯನ್ನು ಉಂಟುಮಾಡಿತು ಎಂದು ವರದಿಯಾಗಿದೆ. ಸಂಜೆ ೭.೩೦ ರ ಸುಮಾರಿಗೆ ಮುಕ್ತಿಜೋಧ ಸಂಸದ್ ಮುಂದೆ ಸ್ಫೋಟ ಸಂಭವಿಸಿದೆ. ಕ್ರಿಸ್ ಮಸ್ ಮುನ್ನಾದಿನದಂದು ಮತ್ತು ಧರ್ಮನಿಂದನೆ ಆರೋಪದ ಮೇಲೆ ಹಿಂದೂ ವ್ಯಕ್ತಿಯೊಬ್ಬ ಗುಂಪು ಹತ್ಯೆಯಲ್ಲಿ ಕೊಲ್ಲಲ್ಪಟ್ಟ ಕೆಲವೇ ದಿನಗಳ ನಂತರ ಈ ಸ್ಫೋಟ ಸಂಭವಿಸಿದೆ.
ಮೃತನನ್ನು ಫ್ಲೈಓವರ್ ಕೆಳಗಿರುವ ಜಾಹಿದ್ ಕಾರ್ ಡೆಕೊರೇಷನ್ ಅಂಗಡಿಯ ಉದ್ಯೋಗಿ 24 ವರ್ಷದ ಸಿಯಾಮ್ ಎಂದು ಗುರುತಿಸಲಾಗಿದೆ. ಸದ್ಯ ಪೊಲೀಸರು ಘಟನಾ ಸ್ಥಳದಲ್ಲಿದ್ದಾರೆ.
ವರದಿಗಳ ಪ್ರಕಾರ, ಸಿಯಾಮ್ ಚಹಾ ಕುಡಿಯಲು ಹೊರಟಾಗ ಮೊಗ್ಬಜಾರ್ ಫ್ಲೈಓವರ್ ನಿಂದ ಕಚ್ಚಾ ಬಾಂಬ್ ಎಸೆಯಲಾಯಿತು, ಇದು ಕೆಳಗಿರುವ ನೆಲದ ಮೇಲೆ ಸ್ಫೋಟಗೊಂಡಿತು. ಫ್ಲೈಓವರ್ ನಿಂದ ಕಾಕ್ಟೈಲ್ ಬಾಂಬ್ ಗಳನ್ನು ಎಸೆಯಲಾಯಿತು.








