ನವದೆಹಲಿ : ‘ಭಾರತವನ್ನು ಬಹಿಷ್ಕರಿಸಿ’ ಅಭಿಯಾನವನ್ನ ನಡೆಸುತ್ತಿರುವ ಪ್ರತಿಪಕ್ಷಗಳ ವಿರುದ್ಧ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ತೀವ್ರ ವಾಗ್ದಾಳಿ ನಡೆಸಿದ್ದಾರೆ ಮತ್ತು ನಿರ್ಧಾರದ ಬಗ್ಗೆ ಅವರ ‘ಪ್ರಾಮಾಣಿಕತೆಯನ್ನು’ ಪ್ರಶ್ನಿಸಿದ್ದಾರೆ. ಬಾಂಗ್ಲಾದೇಶದ ಆಂತರಿಕ ರಾಜಕೀಯದಲ್ಲಿ ಭಾರತ ಹಸ್ತಕ್ಷೇಪ ಮಾಡುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಗಳ ಮಧ್ಯೆ ಬಹಿಷ್ಕಾರಕ್ಕೆ ಕರೆ ನೀಡಲಾಗಿದೆ.
ತಮ್ಮ ಭಾಷಣದಲ್ಲಿ, ಪ್ರತಿಪಕ್ಷ ಬಿಎನ್ ಪಿ ನಾಯಕರು ನಿಜವಾಗಿಯೂ ಭಾರತೀಯ ಉತ್ಪನ್ನಗಳನ್ನ ಬಹಿಷ್ಕರಿಸಿದರೆ, ಅವರು ತಮ್ಮ ಪತ್ನಿಯರ ಭಾರತೀಯ ಸೀರೆಗಳನ್ನ ಸುಡುತ್ತಾರೆ ಎಂದು ಬಾಂಗ್ಲಾದೇಶದ ಪ್ರಧಾನಿ ಹೇಳಿದರು.
“ಬಿಎನ್ ಪಿ ನಾಯಕರು ಭಾರತೀಯ ಉತ್ಪನ್ನಗಳನ್ನ ಬಹಿಷ್ಕರಿಸಬೇಕೆಂದು ಪ್ರತಿಪಾದಿಸುತ್ತಿದ್ದಾರೆ. ನನ್ನ ಪ್ರಶ್ನೆಯೆಂದರೆ – ಬಹಿಷ್ಕಾರ ಪ್ರಚಾರಕರ ಪತ್ನಿಯರು ಎಷ್ಟು ಭಾರತೀಯ ಸೀರೆಗಳನ್ನ ಹೊಂದಿದ್ದಾರೆ.? ಅವರು ತಮ್ಮ ಹೆಂಡತಿಯರಿಂದ ಸೀರೆಗಳನ್ನ ತೆಗೆದುಕೊಂಡು ಅವುಗಳನ್ನ ಏಕೆ ಸುಡುವುದಿಲ್ಲ?” ಎಂದರು.
ಭಾರತೀಯ ಮಸಾಲೆಗಳಿಲ್ಲದೇ ತಿನ್ನಲು ಸಾಧ್ಯವಾ.? ಎಂದು ಅವರು ಉತ್ತರಿಸಬೇಕು ಎಂದು ಅವರು ಹೇಳಿದರು.
ಹೆಸರು ಪ್ರಧಾನ ಮಂತ್ರಿ ಆವಾಸ್ ಯೋಜನೆ: ಕೇಂದ್ರ ಕೊಡೋದು ಮಾತ್ರ ಬರೀ 12 ಸಾವಿರ ರೂಪಾಯಿ : ಸಿಎಂ ಸಿದ್ದರಾಮಯ್ಯ