ಬೆಂಗಳೂರು: ವಿದ್ಯುತ್ ಮೂಲಸೌಕರ್ಯಗಳ ಅಗತ್ಯ ನಿರ್ವಹಣೆಯಿಂದಾಗಿ ಸೆಪ್ಟೆಂಬರ್ 14 ರ ನಾಳೆ ಬೆಂಗಳೂರಿನ ಹಲವು ಭಾಗಗಳಲ್ಲಿ ನಿಗದಿತ ವಿದ್ಯುತ್ ಕಡಿತವನ್ನು ಬೆಸ್ಕಾಂ ಘೋಷಿಸಿದೆ.
66/11ಕೆವಿ ಆರ್ ಎಂ ವಿ ಎಂ ಯು ಎಸ್ ಎಸ್ ದಿನಾಂಕ 14.09.2024 ರಂದು 10:00ಗಂಟೆಗಳಿಂದ ಸಂಜೆ 5 ಗಂಟೆಯವರೆಗೆ ಅರ್ಧ ವಾರ್ಷಿಕ ನಿರ್ವಹಣೆ. ಆದ್ದರಿಂದ ಈ ಉಪಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.
ಸೆಪ್ಟೆಂಬರ್ 14 ರಂದು ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ರಾಮಯ್ಯ ಆಸ್ಪತ್ರೆ, ಪೈಪ್ ಲೈನ್ ರಸ್ತೆ, ಎ.ಜಿ.ಎಸ್. ಲೇ ಔಟ್, ಸದಾಶಿವ ನಗರ ಪೋಲಿಸ್ ಠಾಣೆ, ಎಲ್.ಜಿ. ಹಳ್ಳಿ, ಆರ್.ಎಮ್.ವಿ 2ನೇ ಹಂತ, ಬಿ.ಇ.ಎಲ್ ರಸ್ತೆ, ಎಂ.ಎಸ್. ಆರ್ ನಗರ, ಜಲದರ್ಶಿನಿ ಲೇ ಔಟ್, ಎಂ.ಎಸ್.ಆರ್. ನಗರ, ರಾಮಯ್ಯ ಬಾಯ್ಸ್ ಹಾಸ್ಟೆಲ್, ಎ.ಕೆ ಕಾಲೋನಿ, ಕಾಫಿ ಡೇ, ಪಿಜಾ ಹಟ್, ಸೀನಪ್ಪ ಲೇ ಔಟ್, ಇಸ್ರೋ, ಡಾಲರ್ಸ್ ಕಾಲೋನಿ, ಚಿಕ್ಕ ಮಾರನ ಹಳ್ಳಿ, ಗೌರಿ ಅಪಾರ್ಟ್ ಮೆಂಟ್, ಎನ್.ಎಸ್.ಹಳ್ಳಿ, ಯೆಜಮನ್ನಪ್ಪ ಲೇಔಟ್, ಯುಎಎಸ್ ಲೇಔಟ್, ಎನ್ಟಿಐ ಲೇಔಟ್, ವಿನಾಯಕ ಲೇಔಟ್, ಟೀಚರ್ಸ್ ಕಾಲೋನಿ, ವಿಎಸ್ಎನ್ಎಲ್, ಪೋಸ್ಟಲ್ ಲೇಔಟ್, ಜಡ್ಜಸ್ ಲೇಔಟ್, ಎನ್ಜಿಇಎಫ್ ಲೇಔಟ್, ಅಮರಜ್ಯೋತಿ ಲೇಔಟ್, ಹನುಮಯ್ಯ ಲೇಔಟ್, ಕೊಲ್ತೇಪಾಟೀಲ್ ದೊಡ್ಮನೆ, ಬಸವಲ್ಲಾಸ್ ಮುಖ್ಯರಸ್ತೆ, ಮತ್ತು ಸುತ್ತಮುತ್ತಲಿನ ಪ್ರದೇಶಗಳು.