ಬೆಂಗಳೂರು: ನಗರದಲ್ಲಿ ಮಳೆ ಜಾಸ್ತಿ ಆದಂತೆ, ಅವಾಂತರಗಳು ಹೆಚ್ಚಾಗುತ್ತಿವೆ. ಮಳೆ ನೀರಿನ ಜೊತೆಗೆ ಅಲ್ಲಲ್ಲಿ ಹಾವು ಕೂಡ ಕಾಣಿಸಿಕೊಳ್ಳುತ್ತಿವೆ. ಇಂತಹ ಹಾವುಗಳನ್ನು ಕೊಲ್ಲಬೇಡಿ. ಕಂಡ್ರೆ ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಅಂತ ಬಿಬಿಎಂಪಿ ಮನವಿ ಮಾಡಿದೆ.
ಬಿಬಿಎಂಪಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಹಾವುಗಳು ಕಾಣಿಸಿಕೊಂಡರೇ ಗಾಬರಿಗೊಳ್ಳಬೇಡಿ. ಬಡಿದು ಕೊಲ್ಲೋದು ಮಾಡಬೇಡಿ ಅಂತ ಮನವಿ ಮಾಡಿದೆ.
ಮೇ ತಿಂಗಳು ಹಾವುಗಳ ಸಂತಾನೋತ್ಪತ್ತಿಯ ಕಾಲವಾಗಿದೆ. ಮಾಸಾಂತ್ಯವು ಉರಗಗಳ ಸಂತಾನೋತ್ಪತ್ತಿ ಸಮಯ. ಮುಖ್ಯವಾಗಿ ಸರ್ಪಗಳ ಮೊಟ್ಟೆಗಳು ಒಡೆದು ಮರಿಗಳು ಹೊರಬರುವ ಕಾಲವಾಗಿದೆ ಎಂದಿದೆ.
ಹಾವುಗಳು ಕಂಡ್ರೆ ಕೊಲ್ಲದೇ ಬಿಬಿಎಂಪಿಯ ಸಹಾಯವಾಣಿ ಸಂಖ್ಯೆ 9902794711ಗೆ ಕರೆ ಮಾಡಿ, ಹಾವುಗಳ ರಕ್ಷಣೆಗೆ ನೆರವಾಗಿ ಅಂತ ಕೋರಿದೆ.
ಮೇ ತಿಂಗಳು ಉರಗಗಳ ಸಂತಾನೋತ್ಪತ್ತಿ ಸಮಯ. ಮುಖ್ಯವಾಗಿ ಸರ್ಪಗಳ ಮೊಟ್ಟೆಗಳು ಒಡೆದು ಮರಿಗಳು ಹೊರಬರುವ ಕಾಲವಾಗಿದೆ. ಈ ಸಮಯದಲ್ಲಿ ಹೆಚ್ಚು ಹಾವುಗಳು ಕಾಣಸಿಗುತ್ತದೆ. ಗಾಬರಿಗೊಳ್ಳದಿರಿ ಹಾಗೂ ಅದನ್ನು ಬಡಿದು ಕೊಲ್ಲದಿರಿ. ಹಾವುಗಳ ರಕ್ಷಣೆಗಾಗಿ ಬಿಬಿಎಂಪಿ ಸಹಾಯವಾಣಿ 9902794711 ಗೆ ಕರೆ ಮಾಡಿ.#Snakes pic.twitter.com/rj1xvhtWl1
— DIPR Karnataka (@KarnatakaVarthe) May 15, 2024
ಕೊಡಗು: ಕಾಡಾನೆಗಳನ್ನು ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆ
BREAKING : ಗುಂಡು ಹಾರಿಸಿಕೊಂಡು `ಸಚಿನ್ ತೆಂಡೂಲ್ಕರ್’ ಸೆಕ್ಯುರಿಟಿ ಗಾರ್ಡ್ `ಪ್ರಕಾಶ್ ಕಪಾಡೆ’ ಆತ್ಮಹತ್ಯೆ