ಬೆಂಗಳೂರು : ಬೆಂಗಳೂರಿನಲ್ಲಿ ಜನವರಿ 23, 24 ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟಣೆ ಹೊರಡಿಸಿದೆ.
ಜಲಮಂಡಳಿ 4ನೇ ಹಂತ, 2ನೇ ಹಂತದ ಹೆಗ್ಗನಹಳ್ಳಿಯಿಂದ ಜಿಕೆವಿಕೆ ಕಡೆಗೆ ಸಾಗುವ ಕೊಳವೆ ಕಾಮಗಾರಿಯನ್ನು ಕೈಗೊಂಡಿರುವ ಹಿನ್ನಲೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಜನವರಿ 23ರ ಬೆಳಗ್ಗೆ 5ರಿಂದ ಜನವರಿ 24 ರ ಬೆಳಗ್ಗೆ 5ರವರೆಗೆ 24 ಗಂಟೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲ ಮಂಡಳಿ ತಿಳಿಸಿದೆ.
ಎಲ್ಲೆಲ್ಲಿ ವ್ಯತ್ಯಯ
ನಾಗರಭಾವಿ, ಎಸ್.ಎಂ.ವಿ ಲೇಔಟ್ – 1 ರಿಂದ 9 ನೇ ಬ್ಲಾಕ್, ಮಲ್ಲತಹಳ್ಳಿ, ಕೊಟ್ಟಿಗೆಪಾಳ್ಯ, ಹೇರೋಹಳ್ಳಿ, ಹೆಗ್ಗನಹಳ್ಳಿ, ಸುಂಕದಕಟ್ಟೆ, ರಾಜಗೋಪಾಲನಗರ, ಲಕ್ಷ್ಮಿ ದೇವಿನಗರ, ಲೆಗ್ಗೇರೆ, ಪೀಣ್ಯ ಕೈಗಾರಿಕಾ ಪ್ರದೇಶ, ಪೀಣ್ಯ, ಆರ್.ಆರ್. ನಗರ, ಐಡಿಯಲ್ ಹೋಮ್ಸ್, ಕೆಂಚೇನಹಳ್ಳಿ, ಹಲಗೆ ವಡೇರನಹಳ್ಳಿ, ಕೋಡಿಪಾಳ್ಯ, ಚನ್ನಸಂದ್ರ, ಕೆಂಗೇರಿ, ಕೆಂಗೇರಿ ಉಪನಗರ, ನಾಗದೇವನಹಳ್ಳಿ, ಮರಿಯಪ್ಪನ ಪಾಳ್ಯ, ಟಿ.ದಾಸರಹಳ್ಳಿ, ನೆಲಗದರನಹಳ್ಳಿ, ಹೆಚ್.ಎಂ.ಟಿ ಲೇಔಟ್, ಬಗಲಗುಂಟೆ, ಎಂ.ಇ.ಐ ಲೇಔಟ್, ಅಬ್ಬಿಗೇರೆ, ಬ್ಯಾಟರಾಯನಪುರ, ಅಮೃತಹಳ್ಳಿ, ಜಕ್ಕೂರು, ಕಾಫಿ ಬೋರ್ಡ್ ಲೇಔಟ್, ಬಸವೇಶ್ವನಗರ, ಶಿವನಹಳ್ಳಿ, ಮಂಜುನಾಥನಗರ, ಶಂಕರಮಠ, ಶಂಕರನಗರ, ಕಮಲಾನಗರ, ಶಕ್ತಿಗಣಪತಿನಗರ, ವಿಜಯನಗರ, ಆರ್.ಪಿ.ಸಿ ಲೇಔಟ್, ಚೋಳರಪಾಳ್ಯ, ಹಂಪಿನಗರ, ಸಣ್ಣಕ್ಕಿಬಯಲು, ಅಗ್ರಹಾರ ದಾಸರಹಳ್ಳಿ, ರಾಜಾಜಿನಗರ 6ನೇ ಬ್ಲಾಕ್, ಕೆಂಪಾಪುರ, ಯಲಹಂಕ ಓಲ್ಡ್ ಅ್ಯಂಡ್ ನ್ಯೂ ಟೌನ್, ಕೋಗಿಲು, ವಿದ್ಯಾರಣ್ಯಪುರ, ಸಿಂಗಾಪುರ, ಜಾಲಹಳ್ಳಿ, ಬಿ.ಇ.ಎಲ್ ರಸ್ತೆ, ಮುತ್ಯಾಲನಗರ, ಜೆ.,ಪಿ ಪಾರ್ಕ್, ದಾಸರಹಳ್ಳಿ. ರಾಚೇನಹಳ್ಳಿ, ಮಹಾಲಕ್ಷ್ಮಿ ಲೇಔಟ್, ಸುಬ್ರಮಣ್ಯನಗರ, ಗಾಯತ್ರಿನಗರ, ಜಿ.ಸಿ.ನಗರ, ಕುರುಬರಹಳ್ಳಿ, ನಂದಿನಿ ಲೇಔಟ್, ಪ್ರಕಾಶನಗರ, ಗೊರುಗುಂಟೆಪಾಳ್ಯ, ಕಾಮಾಕ್ಷಿಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಇರಲಿದೆ ಎಂದು ಜಲಮಂಡಳಿ ಮಾಹಿತಿ ನೀಡಿದೆ.