ಬೆಂಗಳೂರು : ಒಂದು ಬಾರಿ ಪರಿಹಾರ ಯೋಜನೆಯಡಿ ಬಾಕಿ ಆಸ್ತಿ ತೆರಿಗೆ ಪಾವತಿಗೆ ಇಂದು ಕೊನೆ ದಿನವಾಗಿದೆ. ಹೀಗಾಗಿ ತೆರಿಗೆ ಪಾವತಿದಾರರ ಅನುಕೂಲಕ್ಕಾಗಿ ಬಿಬಿಎಂಪಿಯ ಎಲ್ಲ ವಲಯ ಹಾಗೂ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಗಳು ರಾತ್ರಿ 9ರ ವರೆಗೆ ಕಾರ್ಯ ನಿರ್ವಹಿಸಲಿವೆ.
ಒನ್ ಟೈಮ್ ಸೆಟಲ್ಮೆಂಟ್ ಇಂದು ಮಧ್ಯರಾತ್ರಿ 12 ಕ್ಕೆ ಕೊನೆಯಾಗಲಿದ್ದು, ಈ ಅವಧಿಗೂ ಮುನ್ನಾ ಬಾಕಿ ತೆರಿಗೆ ಪಾವತಿಸಿದವರಿಗೆ ದಂಡ ಮತ್ತು ಬಡ್ಡಿ ಸಂಪೂರ್ಣವಾಗಿ ಮನ್ನಾ ಆಗಲಿದೆ. ರಾತ್ರಿ 12 ಗಂಟೆ ನಂತರ ತೆರಿಗೆ ಪಾವತಿ ಮಾಡುವವರಿಗೆ ಆಸ್ತಿ ತೆರಿಗೆಗೆ ಸಮನವಾಗಿ ದಂಡ ಮತ್ತು ವಾರ್ಷಿಕ ಶೇ. 15 ರಷ್ಟು ಬಡ್ಡಿ ವಿಧಿಸಲಾಗುತ್ತದೆ.
ಆನ್ಲೈನ್ ಮೂಲಕ ಪಾವತಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://bbmptax.karnataka.gov.in ಆಸ್ತಿ ತೆರಿಗೆ ಎಷ್ಟು ಪಾವತಿಸಬೇಕಿದೆ, ಎಲ್ಲಿ ಪಾವತಿಸಬೇಕು ಎಂಬ ಬಗ್ಗೆ ಗೊಂದಲಗಳಿದ್ದಲ್ಲಿ ಸಹಾಯವಾಣಿ 1533 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.