ಬೆಂಗಳೂರು: ನಗರದಲ್ಲಿ ನೀರು ಪೋಲು ಮಾಡೋದಕ್ಕೆ ಬೆಂಗಳೂರು ಜಲಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ವ್ಯರ್ಥವಾಗಿ ನೀರು ಪೋಲು ಮಾಡಿದ್ರೇ 5000 ದಂಡವನ್ನು ವಿಧಿಸೋದಾಗಿ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಬೆಂಗಳೂರು ಜಲಮಂಡಳಿಯಿಂದ ಆದೇಶ ಹೊರಡಿಸಲಾಗಿದ್ದು, ಬೇಸಿಗೆ ವೇಳೆಯಲ್ಲಿ ಕಳೆದ ಬಾರಿ ಉಂಟಾಗಿದ್ದಂತ ನೀರಿನ ಅಭಾವ ಉಂಟಾಗಬಾರದು. ಅದಕ್ಕಾಗಿ ನೀರನ್ನು ಮಿತವಾಗಿ ಬಳಸುವಂತೆ ಮನವಿ ಮಾಡಿದೆ.
ಕಾರು, ಮನೆಯಂಗಳ, ಇತರೆ ಕೆಲಸಗಳಿಗೆ ನೀರು ಬಳಸಿ ವ್ಯರ್ಥ ಮಾಡಬೇಡಿ. ಕುಡಿಯೋದಕ್ಕೆ ನೀರನ್ನು ಬಳಸಿ. ಒಂದು ವೇಳೆ ವ್ಯರ್ಥವಾಗಿ ನೀರು ಪೋಲು ಮಾಡಿದ್ರೇ ಅಂತವರಿಗೆ 5000 ದಂಡವನ್ನು ವಿಧಿಸೋದಾಗಿ ಎಚ್ಚರಿಸಿದೆ.
ಅಂದಹಾಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ 1964ರ ಕಲಂ 33 ಮತ್ತು 34ರ ಅನ್ವಯ ನಗರದಲ್ಲಿ ಕುಡಿಯೋದಕ್ಕೆ ನೀರು ಬಳಕೆ ಮಾಡಬೇಕು. ಅದರ ಹೊರತಾಗಿ ನೀರನ್ನು ವಾಹನಗಳನ್ನು ಕ್ಲೀನ್ ಮಾಡೋದಕ್ಕೆ, ಕೈತೋಟ, ಕಟ್ಟಡ ನಿರ್ಮಾಣಕ್ಕೆ, ಮನರಂಜನಾ ಕಾರಂಜಿಗೆ, ಸಿನಿಮಾ ಮಂದಿರ, ಮಾಲುಗಳಲ್ಲಿ ಕುಡಿಯೋಕೆ ನೀರು ಹೊರತಾಗಿ ಬಳಸುವಂತಿಲ್ಲ. ಒಂದು ವೇಳೆ ಈ ನಿಯಮ ಮೀರಿದರೇ 5000 ದಂಡ ವಿಧಿಸೋದಾಗಿ ತಿಳಿಸಿದೆ.
ಕೇರಳದ ಕಾಂಗ್ರೆಸ್ ಕಾರ್ಯಕರ್ತರ ಕೊಲೆ; ಕೆಪಿಸಿಸಿಯಿಂದ ₹25 ಲಕ್ಷ ಪರಿಹಾರ- DKS ಘೋಷಣೆ
ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿ ನಿಯಂತ್ರಣಕ್ಕೆ ಕೇಂದ್ರದಿಂದ ಮಹತ್ವದ ಕ್ರಮ: ‘AI ತಂತ್ರಜ್ಞಾನ’ ಬಳಕೆ – ವರದಿ