ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಯದ ವೇಳೆ ಸಾರ್ವಜನಿಕ ಆಸ್ತಿಗೆ ಹಾನಿಮಾಡಿರುವವರ ಮೇಲೆ ಬಿಬಿಎಂಪಿಯಿಂದ ಎಫ್.ಐ.ಆರ್ ದಾಖಲಿಸಿದೆ. ಹೀಗಾಗಿ ಬೆಂಗಳೂರಿಗರು ಕಟ್ಟಡ ನಿರ್ಮಾಣದ ವೇಳೆ ಎಚ್ಚರಿಕೆ ವಹಿಸೋದು ಅಗತ್ಯವಿದೆ.
ಈ ಕುರಿತು ಬಿಬಿಎಂಪಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ರಾಜರಾಜೇಶ್ವರಿ ನಗರ ವಲಯದ ಕೆಂಚೇನಹಲ್ಲಿಯ ಐಡಿಯಲ್ ಹೋಮ್ಸ್ ಪೆಟ್ರೋಲ್ ಬ್ಯಾಂಕ್ ಬಳಿ ಮಂಜೇಗೌಡ ಎಂಬುವವರು ಕಟ್ಟಡ ನಿರ್ಮಿಸಲು ನಕ್ಷೆ ಮಂಜೂರಾತಿ ಪಡೆಯದೆ ಸುಮಾರು 6-8 ಅಡಿ ಆಳ ತಳಪಾಯದ(Earth Work Excavation) ಕಾಮಗಾರಿಯನ್ನು ಮಾಡುತ್ತಿದ್ದು, ಇದರಿಂದ ಸುಮಾರು 70 ಅಡಿ ಉದ್ದದಷ್ಟು ಪಾದಚಾರಿ ರಸ್ತೆ ಹಾಗೂ ಒಳಚರಂಡಿಯು ಕುಸಿದು ಬಿದ್ದು, ಸಾರ್ವಜನಿಕರು ಓಡಾಡಲು ತೊಂದರೆಯಾಗುತ್ತಿರುತ್ತದೆ ಎಂದಿದೆ.
ಅಲ್ಲದೇ ಒಳಚರಂಡಿ ಮುಂಭಾಗದಲ್ಲಿರುವ ಬಿ.ಎಂ.ಟಿ.ಸಿ ಬಸ್ ನಿಲ್ದಾಣವು ಸಹ ಕುಸಿಯುವ ಸಂಭವವಿರುತ್ತದೆ. ಇದರಿಂದ ಇಲಾಖೆಗೆ ಸರಿ ಸುಮಾರು 20 ಲಕ್ಷ ರೂ.ಗಳವರೆಗೂ ನಷ್ಟ ಉಂಟಾಗಿರುತ್ತದೆ ಎಂದು ಹೇಳಿದೆ.
ಮುಂದುವರಿದು, ಕಟ್ಟಡ ಕಾಮಗಾರಿ ವೇಳೆಯಲ್ಲಿ ಯಾವುದೇ ಮುಂಜಾಗೃತ ಕ್ರಮ ಅನುಸರಿಸದೆ ಕಾಮಗಾರಿ ಮಾಡುತ್ತಿರುವುದರಿಂದ ಅಕ್ಕ-ಪಕ್ಕದ ಮನೆಗಳಿಗೂ ಸಹ ಹಾನಿಯಾಗುವ ಸಾಧ್ಯತೆಯಿರುವುದರಿಂದ ಸದರಿ ಕಟ್ಟಡ ಮಾಲೀಕರ ಮೇಲೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿರುತ್ತದೆ ಎಂದು ತಿಳಿಸಿದೆ.
ಆಭರಣ ಖರೀದಿ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: 10 ಗ್ರಾಂ ಚಿನ್ನದ ದರ ದಾಖಲೆಯ 78,700ಕ್ಕೆ ಏರಿಕೆ | Gold prices
ಜಾತಿಗಣತಿ ವರದಿ ಇಟ್ಟುಕೊಂಡು ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿ: HDK ಸವಾಲು