ಬೆಂಗಳೂರು: ಸೆಮಿಕಂಡಕ್ಟರ್ ವಲಯದಲ್ಲಿ ಹೊಸ ಅಧ್ಯಾಯ – ದೇಶದ ತಂತ್ರಜ್ಞಾನ ಕ್ಷೇತ್ರದ ಹೃದಯವಾಗುತ್ತಿದೆ ಬೆಂಗಳೂರು! ಆ ಮೂಲಕ 4,500ಕ್ಕೂ ಹೆಚ್ಚು ಉದ್ಯೋಗವನ್ನು ಸೃಷ್ಠಿಯಾಗುತ್ತಿರುವುದಾಗಿ ಕರ್ನಾಟಕ ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಜರ್ಮನಿಯ ಪ್ರಸಿದ್ಧ ಇನ್ಫಿನಿಯಾನ್ ಟೆಕ್ನಾಲಜೀಸ್ (Infineon Technologies) ಕಂಪನಿ ಬೆಂಗಳೂರಿನ ತನ್ನ ಎರಡು ಶಾಖೆಗಳನ್ನು ಏಕೀಕರಿಸಿ, ಬಾಗ್ಮನೆ ಸೋಲಾರಿಯಮ್ ಟೆಕ್ ಪಾರ್ಕ್‌ನಲ್ಲಿ 6.3 ಲಕ್ಷ ಚದರ ಅಡಿ ವಿಸ್ತೀರ್ಣದ ನೂತನ ಕ್ಯಾಂಪಸ್ ‘SILANE’ ನಿರ್ಮಿಸುತ್ತಿದೆ ಎಂದಿದೆ.
ಈ ಅತ್ಯಾಧುನಿಕ ಕ್ಯಾಂಪಸ್‌ನಲ್ಲಿ 1.7 ಲಕ್ಷ ಚದರ ಅಡಿ ಪ್ರದೇಶದಲ್ಲಿ ಸೆಮಿಕಂಡಕ್ಟರ್ ಪ್ರಯೋಗಾಲಯಗಳು ನಿರ್ಮಾಣವಾಗಲಿವೆ. ಇದರಿಂದ 4,500ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂಬುದಾಗಿ ಹೇಳಿದೆ.
ಪೂರಕ ವಾತಾವರಣ ನಿರ್ಮಾಣ, ಹೂಡಿಕೆ ಆಕರ್ಷಣೆ, ಉದ್ಯೋಗ ಸೃಷ್ಟಿ, ಆರ್ಥಿಕತೆಗೆ ನವಚೈತನ್ಯ ಕಾಂಗ್ರೆಸ್ ಸರ್ಕಾರದ ಧ್ಯೇಯ ಅಂತ ತಿಳಿಸಿದೆ.
ಸೆಮಿಕಂಡಕ್ಟರ್ ವಲಯದಲ್ಲಿ ಹೊಸ ಅಧ್ಯಾಯ – ದೇಶದ ತಂತ್ರಜ್ಞಾನ ಕ್ಷೇತ್ರದ ಹೃದಯವಾಗುತ್ತಿದೆ ಬೆಂಗಳೂರು!
ಜರ್ಮನಿಯ ಪ್ರಸಿದ್ಧ ಇನ್ಫಿನಿಯಾನ್ ಟೆಕ್ನಾಲಜೀಸ್ (Infineon Technologies) ಕಂಪನಿ ಬೆಂಗಳೂರಿನ ತನ್ನ ಎರಡು ಶಾಖೆಗಳನ್ನು ಏಕೀಕರಿಸಿ, ಬಾಗ್ಮನೆ ಸೋಲಾರಿಯಮ್ ಟೆಕ್ ಪಾರ್ಕ್‌ನಲ್ಲಿ 6.3 ಲಕ್ಷ ಚದರ ಅಡಿ ವಿಸ್ತೀರ್ಣದ ನೂತನ ಕ್ಯಾಂಪಸ್… pic.twitter.com/83IiqOb4dm
— Karnataka Congress (@INCKarnataka) October 20, 2025
ಹಾಸನಾಂಬೆ ದರ್ಶನದ ಬಗ್ಗೆ ಈ ಮಹತ್ವದ ಅಪ್ ಡೇಟ್ ಕೊಟ್ಟ ಸಚಿವ ಕೃಷ್ಣಬೈರೇಗೌಡ
ಸಾಲ ಲಕ್ಷ ಇರಲಿ ಕೋಟಿ ಇರಲಿ ಎಲೆ ಲವಂಗ ಏಲಕ್ಕಿ ಪ್ರಯೋಗ ಮಾಡಿ ! ಸಾಲ ತೀರೋದು ಗ್ಯಾರಂಟಿ








