ಬೆಂಗಳೂರು: ನಾಳೆ ಸಿಎ ಪರೀಕ್ಷೆಯ ಸಮಯಕ್ಕೆ ಬೆಂಗಳೂರು ನಗರ ವಿವಿಯಿಂದ ಬಿಕಾಂ ಪರೀಕ್ಷೆಯನ್ನು ನಿಗದಿ ಪಡಿಸಿ ಎಡವಟ್ಟು ಮಾಡಿದ್ದರ ಬಗ್ಗೆ ಕನ್ನಡ ನ್ಯೂಸ್ ನೌ ಬೆಂಗಳೂರು ವಿವಿಯಿಂದ ಯಡವಟ್ಟು: ನಾಳೆ ‘CA ಪರೀಕ್ಷೆ’ಯ ಸಮಯಕ್ಕೆ ಬಿಕಾಂ ಪರೀಕ್ಷೆ ನಿಗದಿ ಎಂಬುದಾಗಿ ಸುದ್ದಿಯನ್ನು ಪ್ರಕಟಿಸಿತ್ತು. ಈ ಬೆನ್ನಲ್ಲೇ ನಾಳೆ ನಡೆಸಲು ನಿಗದಿ ಪಡಿಸಿದ್ದಂತ ಎಲ್ಲಾ ಸ್ನಾತಕ ಪದವಿಯ ಪರೀಕ್ಷೆಯನ್ನು ಮುಂದೂಡಿಕೆ ಮಾಡಿ ಆದೇಶಿಸಲಾಗಿದೆ.
ಈ ಕುರಿತಂತೆ ಬೆಂಗಳಊರು ನಗರ ವಿವಿಯ ಸೆಂಟ್ರಲ್ ಕ್ಯಾಂಪಸ್ ನ ಮೌಲ್ಯಮಾಪನದ ಕುಲಸಚಿವರು ಅಧಿಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ದಿನಾಂಕ 16-01-2025ರಂದು ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿದ್ದ ಬೆಂಗಳೂರು ನಗರ ವಿವಿಯ ಎಸ್ಇಪಿ 1ನೇ ಸೆಮಿಸ್ಟರ್ ಎಲ್ಲಾ ಸ್ನಾತಕ ಪದವಿ ಕೋರ್ಸ್ ಗಳ ಪರೀಕ್ಷೆಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದಿದ್ದಾರೆ.
ಇನ್ನು ಮುಂದೂಡಲಾಗಿರುವ ಪರೀಕ್ಷೆಯ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂಬುದಾಗಿ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಮತ್ತು ಪ್ರಾಂಶುಪಾಲರುಗಳಿಗೆ ತಿಳಿಸಿದ್ದಾರೆ.
‘ಜಾತಿಗಣತಿ ವರದಿ’ಯ ಬಗ್ಗೆ ‘ಗೃಹ ಸಚಿವ ಡಾ.ಜಿ.ಪರಮೇಶ್ವರ್’ ಹೇಳಿದ್ದೇನು ಗೊತ್ತಾ?
BREAKING: ರಾಜ್ಯ ಸರ್ಕಾರದಿಂದ ಖಾಸಗಿ ಅನುದಾನಿತ ಪ್ರೌಢ ಶಾಲೆಗಳಲ್ಲಿನ ಬೋಧಕರ ಖಾಲಿ ಹುದ್ದೆ ಭರ್ತಿಗೆ ಗ್ರೀನ್ ಸಿಗ್ನಲ್